ಬೆಂಗಳೂರು: ಬಿ.ವೈ.ವಿಜಯೇಂದ್ರ ಒಬ್ಬರಿಂದಲೇ ಎಲ್ಲವೂ ಆಗುವುದಿಲ್ಲವೆಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪರ ಹೇಳಿಕೆಯನ್ನು ಕಾಂಗ್ರೆಸ್ ಟೀಕಿಸಿದೆ. ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ರಿಟೈರ್ಡ್ ರಾಜಾಕಾರಿಣಿ ಕೆ.ಎಸ್.ಈಶ್ವರಪ್ಪನವರೇ, ಇದೆಂತಹಾ ದುಸ್ಥಿತಿ ನಿಮ್ಮದು, ಬಿಜೆಪಿ ನಿಮ್ಮ ಮಂತ್ರಿಗಿರಿ ಕಿತ್ತುಕೊಂಡಿತು, ನಿಮ್ಮನ್ನು ಸಿಎಂ ಮಾಡದೆ ವಂಚಿಸಿತು, ಕೊನೆಗೆ ಟಿಕೆಟ್ ನಿರಾಕರಿಸಿ ರಾಜಕೀಯ ಭವಿಷ್ಯವನ್ನೂ ಕಸಿಯಿತು’ ಎಂದು ಕುಟುಕಿದೆ.


COMMERCIAL BREAK
SCROLL TO CONTINUE READING

‘ಈಗ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಮಗ ಬಿ.ವೈ.ವಿಜಯೇಂದ್ರ ನಿಮ್ಮ ಮಗನ ರಾಜಕೀಯ ಭವಿಷ್ಯಕ್ಕೂ ಕಲ್ಲು ಹಾಕುವುದು ಖಚಿತ. ಬಿಜೆಪಿ ಕಾರ್ಯಕ್ರಮದಲ್ಲಿ ನಿಮಗೊಂದು ಕುರ್ಚಿಯೂ ಇಲ್ಲ ಈಗ, ನಿಮ್ಮ ವ್ಯರ್ಥಪ್ರಲಾಪದ ಬಗ್ಗೆ ನಮಗೆ ಮರುಕವಿದೆ!’ ಎಂದು ಕಾಂಗ್ರೆಸ್ ಟೀಕಿಸಿದೆ.


ಮಂಜೂರಾದ ಪೂರ್ತಿ ಸಾಲದ ಹಣ ನೀಡದ ಹಣಕಾಸು ಸಂಸ್ಥೆಗೆ ರೂ.1 ಲಕ್ಷ ದಂಡ


‘#BJPvsBJP ಕದನ ಈಗ ಮತ್ತೊಂದು ಮಗ್ಗುಲಿಗೆ ಹೊರಳಲಿದೆ. 20, 30 ವರ್ಷಗಳಿಂದ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ನಿನ್ನೆ ಮೊನ್ನೆ ಪಕ್ಷದಲ್ಲಿ ಕಾಣಿಸಿಕೊಂಡು "ಯಡಿಯೂರಪ್ಪನವರ ಮಗ" ಎಂಬ ಒಂದೇ ಅರ್ಹತೆಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯಲ್ಲಿ ಕುಳಿತಿರುವ ಬಿ.ವೈ.ವಿಜಯೇಂದ್ರರನ್ನು ಬಿಜೆಪಿಯ ಬಹುಪಾಲು ನಾಯಕರು ಅಭಿನಂದಿಸಲಿಲ್ಲ, ಹಾರೈಸಲಿಲ್ಲ. ಒಡಕಿನ ಮನೆಯಾಗಿರುವ #FamilyJanataParty ಮುಂದೆ ಸಂಪೂರ್ಣ ನುಜ್ಜುಗುಜ್ಜಾಗುವ ಎಲ್ಲಾ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ’ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.


ಇದು ಕರ್ನಾಟಕ, ಡಿಕೆಶಿ ರಿಪಬ್ಲಿಕ್ ಅಲ್ಲ:  ಡಿಕೆಶಿಗೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ


#FamilyJanataPartyಯಲ್ಲಿ ನಿವೃತ್ತಿ ಪರ್ವ!


ಬಸನಗೌಡ ಪಾಟೀಲ್ ಯತ್ನಾಳ್ ಅವರೇ, ತಾವು ತಮ್ಮ ಅಸ್ತಿತ್ವಕ್ಕಾಗಿ ವಿಜಯೇಂದ್ರರ ಮುಂದೆ ಕೈಕಟ್ಟಿ ತಲೆಬಾಗಿಸಿ ನಿಲ್ಲುವಿರಾ ಅಥವಾ ರಾಜಕೀಯಕ್ಕೆ ಗುಡ್ ಬೈ ಹೇಳುವಿರಾ? #FamilyJanataPartyಯಲ್ಲಿ ಇನ್ಮುಂದೆ ನಿವೃತ್ತಿ ಪರ್ವ ಶುರುವಾದರೂ ಆಶ್ಚರ್ಯವಿಲ್ಲ!’ವೆಂದು ಕಾಂಗ್ರೆಸ್ ಟೀಕಿಸಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.