ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ?: ಕಾಂಗ್ರೆಸ್ ಪ್ರಶ್ನೆ
Chaitra Kundapur Cheating Case: ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರಾ ಜ್ಞಾನೇಂದ್ರರಿಗೆ ಪರಮಾಪ್ತರು. ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ? ಎಂದು ಕಾಂಗ್ರೆಸ್ ಕುಟುಕಿದೆ.
ಬೆಂಗಳೂರು: ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ನೀಡುವುದಾಗಿ ನಂಬಿಸಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬುವರಿಗೆ ಕೋಟ್ಯಂತರ ರೂ. ವಂಚಿಸಿದ ಪ್ರಕರಣ ಸಂಬಂಧ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಸೇರಿ 6 ಆರೋಪಿಗಳನ್ನು ಸೆ.23ರವರೆಗೆ ಸಿಸಿಬಿ ಕಸ್ಟಡಿಗೆ ಒಪ್ಪಿಸಲಾಗಿದೆ.
ಇದೇ ವಿಚಾರವನ್ನಿಟ್ಟುಕೊಂಡು ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ‘ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಜೊತೆಗೆ ಚೈತ್ರಾ ಕುಂದಾಪುರ ಇರುವ ಫೋಟೋ ಹಂಚಿಕೊಂಡು ಟೀಕಿಸಿದೆ. ‘ಬಿಜೆಪಿಯಲ್ಲಿ ಸಿಎಂ ಹುದ್ದೆಗೆ 2,500 ಕೋಟಿ ರೂ. ನೀಡಬೇಕು ಎಂಬ ಸತ್ಯ ಬಹಿರಂಗಪಡಿಸಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ಟಿಕೆಟ್ಗೆ 7 ಕೋಟಿ ರೂ. ಕೊಡಬೇಕು ಎಂದು ವಂಚಿಸಿದ ಆರೋಪಿಯೊಂದಿಗೆ’ ಎಂದು ಕುಟುಕಿದೆ.
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿಚಾರವಾಗಿ ಸಿಎಂ ಹೇಳಿದ್ದೇನು?
‘ವಂಚಕ ಸ್ಯಾಂಟ್ರೋ ರವಿಯೂ ಬಿಜೆಪಿಗರಿಗೆ ಆಪ್ತ, PSI ಹಗರಣದ ಆರೋಪಿಗಳೂ ಬಿಜೆಪಿಗರಿಗೆ ಆಪ್ತರು, ರೌಡಿ ಶೀಟರ್ಗಳೂ ಬಿಜೆಪಿಗರಿಗೆ ಆಪ್ತರು ಮತ್ತು ಟಿಕೆಟ್ ಹಗರಣದ ವಂಚಕರೂ ಬಿಜೆಪಿಗರಿಗೆ ಆಪ್ತರು. ಕಳ್ಳರು, ಸುಳ್ಳರು, ವಂಚಕರು ಬಿಜೆಪಿ ನಾಯಕರಿಗೇ ಆಪ್ತವಾಗುವುದೇಕೆ..?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ನಾವು ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ಇಲ್ಲ!
‘ಮಾಜಿ ಗೃಹಸಚಿವರು ಆರೋಪಿಯ ಪರ ವಕಾಲತ್ತು ವಹಿಸುತ್ತಿರುವುದರ ಹಿಂದೆ ಯಾವ ಸತ್ಯ ಅಡಗಿದೆ? ವಂಚನೆ ಆರೋಪಿಯೊಂದಿಗೆ ವೇದಿಕೆಯಲ್ಲಿ ಯಾವ ಘನಂದಾರಿ ಚರ್ಚೆ ಮಾಡಿದ್ದಿರಿ ಆರಗ ಜ್ಞಾನೇಂದ್ರ ಅವರೇ? ಕುಮಾರಕೃಪಾದಲ್ಲಿ ಡೀಲಿಂಗ್ ನಡೆಸಿದ ಸ್ಯಾಂಟ್ರೋ ರವಿ, ಚೈನ್ ಚೈತ್ರಾ ಜ್ಞಾನೇಂದ್ರರಿಗೆ ಪರಮಾಪ್ತರು. ವಂಚಕರಿಗೆ ಕುಮಾರಕೃಪಾ ಸಿಗಲು ಮಾಜಿ ಗೃಹ ಸಚಿವರ ಕೃಪೆ ಇತ್ತೇ? ಬಿಜೆಪಿ ಪಕ್ಷದ ಟಿಕೆಟ್ ಕೊಡಿಸುತ್ತೇನೆಂದು, ಬಿಜೆಪಿಯವರಿಗೇ ವಂಚಿಸಿದರೂ ವಂಚಕಿಯ ಪರ ನಿಂತಿರುವುದರ ಹಿಂದೆ ಯಾವ ಹಿತಾಸಕ್ತಿ ಅಡಗಿದೆ?’ ಎಂದು ಕಾಂಗ್ರೆಸ್ ಕುಟುಕಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.