ಬೆಂಗಳೂರು: ಸಿಎಂ ಸಿದ್ದರಾಮಯ್ಯರ ತಿರುಚಿದ ವಿಡಿಯೋ ಹಂಚಿಕೊಂಡಿರುವ ಬಿಜೆಪಿ ನಾಯಕ ಸಿಟಿ ರವಿ ಹಾಗೂ ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರವಾಗಿ ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್, ಫೇಕ್ ವಿಡಿಯೋ ಹಂಚಿಕೊಂಡ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದೆ.


COMMERCIAL BREAK
SCROLL TO CONTINUE READING

‘ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಡಿಲೀಟ್ ಮಾಡುತ್ತಿರುವ ಹತಾಶ ಬಿಜೆಪಿಯ ಮಿಥ್ಯೆ ಪ್ರಲಾಪಗಳು ಒಂದೆರಡಲ್ಲ! ಬಿಜೆಪಿಗರು ಇಂದು ಬೆಳಗ್ಗೆಯಿಂದ ಮೂರ್ನಾಲ್ಕು ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಗಳಲ್ಲಿ ಹಂಚಿ ಡಿಲೀಟ್ ಮಾಡಿದ್ದಾರೆ. ಇನ್ನು ಅನಧಿಕೃತ ಖಾತೆಗಳಲ್ಲಿ ಸುಳ್ಳಿನ ಹೊಳೆಯನ್ನೇ ಹರಿಸುತ್ತಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.


‘ಅಶ್ವತ್ಥ್ ನಾರಾಯಣ್ ಅವರೇ, ಸಿದ್ದರಾಮಯ್ಯರ ಸದನದಲ್ಲಿನ ಭಾಷಣವನ್ನು ಎಡಿಟ್ ಮಾಡಿ ಅಪಾರ್ಥ ಬರುವಂತೆ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದೀರಿ, ನಿಮಗೆ ಕೊಂಚವೂ ನೈತಿಕ ರಾಜಕಾರಣದ ಪ್ರಜ್ಞೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಸತ್ಯದ ಮೂಲಕ ಸೋಲಿಸಲಾಗದ ರಣಹೇಡಿ ಬಿಜೆಪಿ ಸುಳ್ಳುಗಳ ಮೂಲಕ ರಾಜಕಾರಣಕ್ಕೆ ಮುಂದಾಗಿದೆ, ಬಿಜೆಪಿಯ ಈ ಎಲ್ಲಾ ಸುಳ್ಳುಗಳಿಗೂ ನಮ್ಮ ಸರ್ಕಾರ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಿದೆ’ ಎಂದು ಕಾಂಗ್ರೆಸ್ ಕುಟುಕಿದೆ.


ಇದನ್ನೂ ಓದಿ: ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ


‘ವಿಷಯವನ್ನು ತಿರುಚುವುದು, ವಿಷಯಾಂತರ ಮಾಡುವುದು ಕಾಂಗ್ರೆಸ್ ಪಕ್ಷದ DNAಯಲ್ಲಿ ಅಡಕವಾಗಿದೆ’ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, ‘ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿ ಮೊದಲು ಹುಟ್ಟಿದ್ದೋ ಎನ್ನುವುದನ್ನು ವಿಶ್ಲೇಷಿಸಿದರೆ ಬಿಜೆಪಿಯೇ ಮೊದಲು ಹುಟ್ಟಿದ್ದು ಎಂಬ ಸತ್ಯ ಗೋಚರಿಸುತ್ತದೆ!’ ಎಂದು ಟೀಕಿಸಿದೆ.


‘ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಯಾರೋ ತಲೆಮಾಸದ ಎಳಸುಗಳನ್ನು ಕೂರಿಸಿದಂತಿದೆ. ಸುಳ್ಳು ಸಂಗತಿಯನ್ನು ಟ್ವೀಟ್ ಮಾಡಿ ಕೆಲ ಹೊತ್ತಿನಲ್ಲೇ ಡಿಲೀಟ್ ಮಾಡಿದ ಬಿಜೆಪಿಗೆ ಸುಳ್ಳುಗಳನ್ನು ನಿರೂಪಿಸುವ ದಮ್ಮು-ತಾಕತ್ತು ಇರಲಿಲ್ಲವೇ? ಬಿಜೆಪಿ ಹೇಳಿದಂತೆ ಘಟನೆ ನಡೆದ ವಂಟಮೂರಿ ಗ್ರಾಮ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿಲ್ಲ ಹಾಗೂ ಸಚಿವರು ಭೇಟಿ ನೀಡಲಿಲ್ಲ ಎನ್ನುವುದೂ ಕೂಡ ಸುಳ್ಳು’ ಎಂದು ಸ್ಪಷ್ಟನೆ ನೀಡಿದೆ.


‘ಘಟನೆ ನಡೆದ ಸುದ್ದಿ ತಿಳಿದ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವನ ಹೇಳಿ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬಹುಶಃ ಬಿಜೆಪಿಗರಿಗೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಕುರುಡುತನ ಆವರಿಸಿರಬಹುದು, ಇಲ್ಲವೇ ಮತಿಭ್ರಮಣೆಯಾಗಿರಬಹುದು! ಯಾವುದೇ ದೌರ್ಜನ್ಯ ಪ್ರಕರಣಗಳು ನಡೆದಾಗ ಸರ್ಕಾರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ಆ ಸರ್ಕಾರದ ಬದ್ಧತೆ ನಿರೂಪಿತವಾಗುತ್ತದೆ. ಸಂತ್ರಸ್ತೆಯನ್ನು ಉಸ್ತುವಾರಿ ಸಚಿವರು ಭೇಟಿಯಾಗಿದ್ದಾರೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರು ಭೇಟಿಯಾಗಿದ್ದಾರೆ, ಸರ್ಕಾರ 5 ಲಕ್ಷ ಪರಿಹಾರ ಒದಗಿಸಿದೆ ಮತ್ತು 2 ಎಕರೆ ಜಮೀನು ಮಂಜೂರು ಮಾಡಿದೆ’ ಎಂದು ಕಾಂಗ್ರೆಸ್ ತಿಳಿಸಿದೆ.


ಡಿಸಿಎಂ ಡಿಕೆಶಿ ಭೇಟಿಯಾಗಿ ಡಾ.ವಿಷ್ಣು ಸ್ಮಾರಕಕ್ಕೆ ಕಿಚ್ಚನ ಮನವಿ


‘ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಮಿತಿ ಮೀರಿತ್ತು, ಸ್ವತಃ ಅವರದೇ ಪಕ್ಷದ ಶಾಸಕರು, ಸಚಿವರು ದೌರ್ಜನ್ಯ ಎಸಗಿದ್ದರು. ಎಷ್ಟು ಪ್ರಕರಣಗಳಲ್ಲಿ ಬಿಜೆಪಿ ಸಚಿವರು ಸಂತ್ರಸ್ತರಿಗೆ ಸಾಂತ್ವನ ಹೇಳಿದ್ದರು ಎಂಬುದನ್ನು ಸಾಕ್ಷಿ ಸಮೇತ ಚರ್ಚೆಗೆ ಬರುವ ಎದೆಗಾರಿಕೆ ಬಿಜೆಪಿಗಿದೆಯೇ? ಮಣಿಪುರ, ರಾಜಸ್ಥಾನ, ಮಧ್ಯಪ್ರದೇಶಗಳಲ್ಲಿ ನಡೆದ ಮಹಿಳಾ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚುವ ಧೈರ್ಯ ಬಿಜೆಪಿಗಿದೆಯೇ? ಕೊನೆಯ ಮಾತಿನಂತೆ ಬಿಜೆಪಿ ಸುಳ್ಳು ಹೇಳುವುದನ್ನು ಬಿಡದಿದ್ದರೆ 66 ಇರುವುದು ಮುಂದೆ 33 ಆಗಲಿದೆ!’ ಎಂದು ಕಾಂಗ್ರೆಸ್ ಕುಟುಕಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.