ಬೆಂಗಳೂರು : ನಿನ್ನೆ ಗೋವಿಂದರಾಜನಗರ ಮೈದಾನದಲ್ಲಿ ಗಲಾಟೆ  ಪ್ರಕರಣ ವಿಚಾರಕ್ಕೆ ಮಾಜಿ ಶಾಸಕ ಪ್ರಿಯಕೃಷ್ಣ ಮಹಿಳಾ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿದ್ರು.


COMMERCIAL BREAK
SCROLL TO CONTINUE READING

ಬಾಕ್ಲ್ ಕಾಂಗ್ರೆಸ್ ಅಧ್ಯಕ್ಷ ಪ್ರೇಮಲತಾ ಮಾತು ಶುರು ಮಾಡ್ತಿದ್ದಂತೆ ಸಚಿವ ಸೋಮಣ್ಣ ವಿರುದ್ಧ ಕಿಡಿ ಕಾರಿದ್ರು. ಸೋಮಣ್ಣ ಚಾಮರಾಜನಗರದಲ್ಲಿಮಹಿಳೆ ಕಪಾಳ ಮೋಕ್ಷ ನಡೆಸಿದ್ರು. ತಮ್ಮಸೇ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆಲ್ಟ್ ನಲ್ಲಿ ಹೊಡೆಯೋದಾಗಿ ಹೇಳಿದ್ರು. ಸದ್ಯ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಿದ್ದಾರೆಂದು ಕಿಡಿಕಾರಿದ್ರು. ಕಾರ್ಯಕ್ರಮ ಯಶಸ್ವಿ ಯಾಗುತ್ತೆ ಇದ್ರಿಂದ ಸೋಮಣ್ಣ ಹತಾಶರಾರಿ ಗಲಾಟೆ ಮಾಡಿಸಿದ್ದಾರೆಂದು ಆರೋಪಿಸಿದರು.


ಇದನ್ನೂ ಓದಿ : Karnataka Congress : ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 100 ಅಭ್ಯರ್ಥಿಗಳು ಅಂತಿಮ!


ಇನ್ನೂ ಮಾಜಿ ಕಾರ್ಪರೇಟರ್ ರೂಪ ಮಾತನಾಡಿ ನಮ್ಮ ನಾಯಕರಾದ ಪ್ರಿಯಕೃಷ್ಣ, ಕೃಷ್ಣಪ್ಪರಿಂದ ಮಹಿಳಾ ಸಮಾವೇಶ ಆಯೋಜನೆ ಆಗಿತ್ತು.ನಿನ್ನೆ ಪರಿಶೀಲನೆ ನಡೆಸಲು ಮೈದಾನಕ್ಕೆ ಹೋಗಿದ್ದಿವಿ.19  ರಂದು ಸಮಾವೇಶಕ್ಕೆ ಫಿಕ್ಸ್ ಆಗಿತ್ತು.ಬಿಬಿಎಂಪಿಗೆ ಹಣ ಪಾವತಿ ಮಾಡಿ ಬಿಜಿಎಸ್ ಮೈದಾನದಕ್ಕೆ ಅನುಮತಿ ಸಿಕ್ಕಿತ್ತು.ನಾವು ಕಾನೂನು ಬದ್ದವಾಗಿ ಕಾರ್ಯಕ್ರಮ ಮಾಡುವುದಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದಿವಿ. ಆದ್ರೆ ಮಾನ್ಯ ಸಚಿವರು ಮತ್ತು ಬಿಜೆಪಿ ನವರು ನಮ್ಮ ಕಾರ್ಯಕ್ರಮ ಯಶ್ವಸಿಯಾಗಬಾರದು ಅಂತ ಗಲಾಟೆ ಮಾಡಿದ್ದಾರೆ.ನಮ್ಮ ಕಾರ್ಯಕ್ರಮ ವನ್ನು ಸಹ ರದ್ದು ಮಾಡಲಾಗಿದೆ.


ಇದಕ್ಕೆ ಪೊಲೀಸರು ಯಾಕೆ ರದ್ದು ಮಾಡಿದ್ರು ಎಂಬುದರ ಬಗ್ಗೆ ಉತ್ತರ ಕೊಡಬೇಕು ಎಂದು ಪ್ರಶ್ನಿಸಿದ್ರು. ಸೋಮಣ್ಣ ಬೆಂಬಲಿಗರು ಪೆಟ್ರೋಲ್ ಮತ್ತು ಮಾರಾಕಾಸ್ತ್ರದೊಂದಿಗೆ ಮೈದಾನಕ್ಕೆ ಬಂದಿದ್ರು ಎಂದು ಗಂಭೀರ ಆರೋಪ ಮಾಡಿದ್ರು.


ಇದನ್ನೂ ಓದಿ : KSRTC Employees : ಸಾರಿಗೆ ನೌಕರರ ವೇತನ ಶೇ.15 ರಷ್ಟು ಏರಿಕೆ ಮಾಡಿ ಸರ್ಕಾರದಿಂದ ಅಧಿಕೃತ ಆದೇಶ!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.