ಬೆಂಗಳೂರು: ಸರ್ಕಾರ ವಿವಾದಗಳನ್ನ ಸೃಷ್ಟಿ ಮಾಡ್ತಿದೆ. ವಿವಾದ ಸೃಷ್ಠಿ ಮಾಡಿದ್ರೂ ಸಕ್ಸಸ್ ಆಗ್ತಿಲ್ಲ. ಗೋ ಹತ್ಯೆ ಬಿಲ್ ತಂದ್ರು ಸಕ್ಸಸ್ ಆಗ್ಲಿಲ್ಲ. ಮತಾಂತರ ನಿಷೇಧ ತಂದ್ರು ಇನ್ನೂ ಕುಂಟುತ್ತಿದೆ. ಈಗ ಹಿಜಾಬ್ (Hijab) ವಿಚಾರ ಮುಂದೆ ತಂದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ (CM Ibrahim) ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈಸೂರು ಮಹಾರಾಜರ ಕಾಲದಲ್ಲೂ ಇತ್ತು. ಜಟಕಾ ಗಾಡಿಗಳಲ್ಲಿ ಹೋಗುವಾಗ ಪರದೆ ಇರುತ್ತಿತ್ತು. ಟಿಪ್ಪು (Tippu Sulthan) ನಂತರ ಬಂದ ಮಹಾರಾಜರು ಪರದೆ ಹಾಕ್ತಿದ್ರು. ಹೆಣ್ಣುಮಕ್ಕಳು ಹೋಗುವ ಗಾಡಿಗೆ ಪರದೆ ಹಾಕ್ತಿದ್ರು. ಈಗ ವಿರೋಧ ಮಾಡೋದಕ್ಕೆ ಹೊರಟಿದ್ದಾರೆ. ಮಾರ್ವಾಡಿ ಹೆಂಗಸರು ಸೆರಗು ಹಾಕ್ತಾರೆ. ಉತ್ತರಕರ್ನಾಟಕದಲ್ಲಿ ತಾಯಂದಿರು ತಲೆಮೇಲೆ ಬಟ್ಟೆ ಹಾಕ್ತಾರೆ. ನಾನು ಹಾಕಿರೋ ಮಾಸ್ಕ್ ಹಿಜಾಬಿದ್ದಂತೆ. ಕೋವಿಡ್ ನಲ್ಲಿ ಇದು ಒಳ್ಳೆಯದಲ್ವೇ ಎಂದರು.


ಇದನ್ನೂ ಓದಿ: ಶಿಕ್ಷಣ ವ್ಯವಸ್ಥೆಯಲ್ಲಿ ಮತೀಯವಾದ ತುರುಕಲು ಸಿದ್ದರಾಮಯ್ಯ ಪ್ರಯತ್ನ: ಬಿಜೆಪಿ ಆರೋಪ


ಮೈಸೂರಿನಲ್ಲಿ ಮುಖಂಡರ ಸಭೆ ಮಾಡಿದ್ದೇನೆ. ನಿನ್ನೆ ನಮ್ಮ ಮನೆಯಲ್ಲೂ ಸಭೆ ಮಾಡಿದ್ದೇನೆ. ಮುಸ್ಲಿಂ ಸಮುದಾಯದ ಧಾರ್ಮಿಕ ಗುರುಗಳ ಸಭೆ ಮಾಡಿದ್ದೆ. ಫೆ.14 ರಂದು ಹುಬ್ಬಳ್ಳಿಯಲ್ಲೊಂದು ಸಭೆ ಕರೆದಿದ್ದೇನೆ. ಜನತಾದಳದ ಪರವಾಗಿ ಒಲವು ಕಂಡು ಬಂದಿದೆ. ಸುತ್ತೂರು ಸ್ವಾಮಿಜಿಗಳ ಜೊತೆ ಚರ್ಚಿಸಿದ್ದೇನೆ. ಸ್ವಾಮೀಜಿಗಳು ಕೂಡ ನನಗೆ ಆಶೀರ್ವದಿಸಿದ್ದಾರೆ ಎಂದು ಹೇಳಿದರು.


ನನ್ನ ಮಠದ ಸಂಬಂಧ 50 ವರ್ಷಗಳದ್ದು. ಅಲಿಂಗ ಚಳವಳಿಯನ್ನ ಮಾಡುತ್ತೇವೆ. ಬಹುಸಂಖ್ಯಾತರು ನಮ್ಮನ್ನ ಅಪ್ಪಿಕೊಳ್ಳುವ ಚಳವಳಿ. ಸಮಾಜ ಹತ್ತಿರ ತರುವ ವ್ಯವಸ್ಥೆಯಾಗಿದೆ. ಬಸವಣ್ಣನವರು ಮಾಡಿದ್ದ ಚಳವಳಿ ನಾನು ಮಾಡ್ತೇನೆ ಎಂದು ತಿಳಿಸಿದರು.


ಜೆಡಿಎಸ್ (JDS) ಸೇರ್ಪಡೆ ಬಗ್ಗೆ ಹೇಳ್ತೇನೆ. ನಾನು ಕಾಂಗ್ರೆಸ್ ಪಕ್ಷದಿಂದ ಹೊರಬಿದ್ದಿದ್ದೇನೆ. ಎಂಎಲ್ ಸಿ ಸ್ಥಾನಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ. ಕಾರಣ ಮತಾಂತರ ನಿಷೇಧ ಕಾಯ್ದೆ ತರ್ತಿದ್ದಾರೆ. ಹಿಂದೆ ಕಾಯ್ದೆಗೆ ನಾನು ವಿರೋಧಿಸಿದ್ದೆ. ನಾನು ಈಗಲೇ ರಾಜೀನಾಮೆ ಕೊಟ್ರೆ ಆ ಬಿಲ್ ಪಾಸಾಗಿ ಬಿಡುತ್ತೆ. ಅಲ್ಲಿ ನಾನಿದ್ದರೆ ಕಷ್ಟವಾಗುತ್ತೆ. ಆ ಕಾರಣಕ್ಕಾಗಿ ನಾನು ಎಂಎಲ್ ಸಿ ಸ್ಥಾನಕ್ಕೆ ರಿಸೈನ್ ಮಾಡಿಲ್ಲ ಎಂಡು ಸ್ಪಷ್ಟ ಪಡಿಸಿದರು.


ಸಿದ್ದರಾಮಯ್ಯ (Siddaramaiah) ಅಹಿಂದ ಅಲ್ಲೇ ಬಿಟ್ಟಿದ್ದಾರೆ. ನಾವು ಅಲಿಂಗ ಚಳವಳಿ ಮಾಡ್ತಿದ್ದೇವೆ. ಯಡಿಯೂರಪ್ಪ ಜೊತೆಯೂ ಮಾತನಾಡಿದ್ದೇವೆ. ನಾನು ಜೆಡಿಎಸ್ ಗೆ ಹೋಗುತ್ತೇನೆ. ಬಿಜೆಪಿ ಏಳು ವರ್ಷದಿಂದ ಏನು ‌ಮಾಡಿದೆ, ಕಾಂಗ್ರೆಸ್ ಇಲ್ಲಿಯವರೆಗೆ ಏನು ಮಾಡಿದೆ ಗೊತ್ತು. ಇದರಿಂದ ಹೊರತಾದ ಥರ್ಡ್ ಪೋರ್ಸ್ ಬರಬೇಕು. ಜೆಡಿಎಸ್ ಆ ಲೆವೆಲ್ ಗೆ ಬರುತ್ತೆ ಅಂತ ನಮ್ಮ ಅಭಿಮತ ಎಂದರು.


ಇದನ್ನೂ ಓದಿ: ರಾಜ್ಯದ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನ ಬಳಕೆಗೆ ಅವಕಾಶ ನೀಡಲು ತೀರ್ಮಾನ


ದಿನೇಶ್ ಗುಂಡೂರಾವ್ ಯಾರೆಂದು ರಾಹುಲ್ ಗಾಂಧಿಗೆ ಗೊತ್ತೇ ಇಲ್ವಂತೆ. ದಿನೇಶ್ ಗುಂಡೂರಾವ್ (Dinesh Gundurao) ಯಾರು ಅಂತಾ ರಾಹುಲ್ ಗಾಂಧಿ ನನ್ನನ್ನೇ ಕೇಳಿದ್ರು. ಕೆಪಿಸಿಸಿ ಅಧ್ಯಕ್ಷರಾಗೋ ಮುನ್ನ ದಿನೇಶ್ ಗುಂಡೂರಾವ್ ಯಾರು ಅಂತಾ ಕಾಂಗ್ರೆಸ್ ಹೈಕಮಾಂಡ್ ಗೆ ಗೊತ್ತೇ ಇರಲಿಲ್ವಂತೆ ಎಂದು ಹೇಳಿದರು.


ರಾಜೀವ್ ಗಾಂಧಿಯಷ್ಟು ರಾಹುಲ್ ಗಾಂಧಿ (Rahul Gandhi) ರಾಜಕೀಯ ಚಾಣಾಕ್ಷ ಅಲ್ಲ. ರಾಜೀವ್ ಗಾಂಧಿಯಷ್ಟು (Rajeev Gandhi) ರಾಜಕೀಯ ಬುದ್ಧಶಕ್ತಿ ರಾಹುಲ್ ಗೆ ಬಂದಿಲ್ಲ. ದೇವರು ರಾಹುಲ್ ಗಾಂಧಿಗೆ ರಾಜಕೀಯ ಬುದ್ಧಿಶಕ್ತಿ ಕೊಡಲಿ ಎಂದ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.