ಬೆಂಗಳೂರು : ಆಪರೇಷನ್ ಗಂಗಾ ಮೂಲಕ 366 ಜನ ಇದುವರೆಗೆ ಬಂದಿದ್ದಾರೆ. ಇವತ್ತು 84 ವಿದ್ಯಾರ್ಥಿಗಳು ಬಂದಿದ್ದಾರೆ. 80 ಹುಡುಗರು ಜಸ್ಟ್ ದೆಹಲಿಗೆ ಬಂದಿದ್ದಾರೆ. ಅವರಿಗೆ ದೆಹಲಿಯ ಕರ್ನಾಟಕ ಭವನದಲ್ಲಿ ಇರಲು ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಇಲಾಖೆ ಪ್ರಾಧಿಕಾರ ಆಯುಕ್ತ ಮನೋಜ್ ರಾಜನ್ ಮಾಹಿತಿ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಆಯುಕ್ತ ಮನೋಜ್ ರಾಜನ್(Manoj Rajan), 24 ನೇ ತಾರೀಕಿನಿಂದ ಇಲ್ಲಿವರೆಗೆ ಒಟ್ಟು 666 ವಿದ್ಯಾರ್ಥಿಗಳು ಉಕ್ರೇನ್ ನಲ್ಲಿ ಸಿಲುಕಿದ್ದರು. ಈ ಪೈಕಿ ಇನ್ನು 300 ಮಂದಿ ವಾಪಸ್ ಬರೋದು ಬಾಕಿ ಇದೆ. ನಾನು ಅಲ್ಲಿ ಸಿಲುಕಿರುವ ವಿದ್ಯಾರ್ಥಿಗಳ ಜೊತೆ ನಿರಂತರ ಮಾತುಕತೆ ನಡೆಸ್ತಾ ಇದ್ದೇನೆ. ಅಲ್ಲಿ ಇರೋರಿಗೆ ಇಂಡಿಯನ್ ಎಂಬಾಸಿ ಕಡೆಯಿಂದ ಬಸ್ ವ್ಯವಸ್ಥೆ ಕೂಡ ಮಾಡಲಾಗ್ತಿದೆ. ಸ್ವಲ್ಪ ಜನ ನಮ್ ಹತ್ರ ದುಡ್ಡಿಲ್ಲ, ಕ್ಯಾಶ್ ಇಲ್ಲಾ ಅಂತ ಫೋನ್ ಮಾಡಿದ್ರು. ಈ ಹಿನ್ನೆಲೆ ಬಸ್ ಗಳನ್ನ ಅರೇಂಜ್ ಮಾಡಲಾಗ್ತಿದೆ. ಉಕ್ರೈನ್ ನಿಂದ ಬಾರ್ಡರ್ ವರೆಗೆ ಬರೋಕೆ ಬಸ್ ವ್ಯವಸ್ಥೆ ಮಾಡಲಾಗ್ತಿದೆ. ಪಿಸೋಚಿನ್ ಮತ್ತು ಬೊಬ್ಬಾಯಿ ಪ್ರದೇಶದಲ್ಲಿ ಬಸ್ ವ್ಯವಸ್ಥೆ ಮಾಡಲಾಗ್ತಿದೆ. ಈ ಭಾಗದಿಂದ ಪೋಲ್ಯಾಂಡ್ ಕರೆತಂದು ಅಲ್ಲಿಂದ ಭಾರತಕ್ಕೆ ಕರೆ ತರುತ್ತೇವೆ. ಸುಮಿ ಪ್ರದೇಶ ಸ್ವಲ್ಪ ಮಟ್ಟಿಗೆ ಕಷ್ಟ ಆಗ್ತಿದೆ, ಇಲ್ಲಿಯೂ ಸಹ ಬಸ್ ವ್ಯವಸ್ಥೆ ಮಾಡೋ ಪ್ರಯತ್ನ ನಡೀತಾ ಇದೆ ಎಂದರು.


ಇದನ್ನೂ ಓದಿ : Panditharadhya Shivacharya Swamiji : ಮನಷ್ಯನಲ್ಲಿ ಸ್ವಾರ್ಥ ಹೆಚ್ಚಾಗಿ ಯುದ್ಧ ನಡಿತಿದೆ : ಪಂಡಿತಾರಾದ್ಯ ಸ್ವಾಮೀಜಿಗಳು 


ಪಿಸೋಚಿನ್ ನಲ್ಲಿ 37 ಸುಮ್ಮಿಯಲ್ಲಿ 15-20 ಕನ್ನಡಿಗರು ಇದ್ದಾರೆ. ರಷ್ಯಾ, ಉಕ್ರೈನ್ ಎಂಬಾಸಿ(Embassy of India) ಸಹಾಯದೊಂದಿಗೆ ಬಸ್ ವ್ಯವಸ್ಥೆ ಮಾಡಲಾಗ್ತಿದೆ. ಇವತ್ತು 3 ಫ್ಲೈಟ್ ಬರಲಿದೆ. ನಾಳೆ 14 ಫ್ಲೈಟ್ ಉಕ್ರೈನ್ ಬಾರ್ಡರ್ ನಿಂದ ದೆಹಲಿಗೆ ಬರ್ತಾ ಇದೆ ದೆಹಲಿಗೆ 34 ಬ್ಯಾಚ್, ಮುಂಬೈಗೆ 5 ಬ್ಯಾಚ್ ಇದುವರೆಗೂ ಬಂದಿದೆ ಎಂದು ಹೇಳಿದರು.


ಹಾವೇರಿ ನವೀನ್(Naveen) ಮೃತದೇಹ ವಿಚಾರವಾಗಿ ಮಾತನಾಡಿದ ಅವರು, ನಾವು ಈ ಬಗ್ಗೆ ಮಾತಾಡಿದ್ದೇವೆ. ನಮ್ಮ ಎಂಬಾಸಿ ಈ ಬಗ್ಗೆ ಪ್ರಯತ್ನ ಮಾಡ್ತಾ ಇದೆ. ಮೃತ ದೇಹ ಇಲ್ಲಿ ರವಾನೆ ಮಾಡಬೇಕು ಅಂತ ಪ್ರೇಯತ್ನ ನಡೀತಾ ಇದೆ. ಈ ಬಗ್ಗೆ ಸಾಕಷ್ಟು ಪ್ರಯತ್ನ ನಡೀತಿದೆ. ಸದ್ಯದ ಮಟ್ಟಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲಾ. ಕೇಸ್ ಇನ್ವೆಸ್ಟಿಗೇಷನ್ ಆದಮೇಲೆ ನವೀನ್ ಮೇಲೆ ಬಾಂಬ್ ದಾಳಿಯೋ ಗುಂಡಿನ ದಾಳಿಯೋ ಅಂತ ತಿಳಿದುಬರಬೇಕಿದೆ. ಯಾರು ಮೊದಲು ರಿಜಿಸ್ಟರ್ ಮಾಡಿರ್ತಾರೆ, ಅವ್ರನ್ನ ಮೊದಲು ಕರೆತರಲಾಗ್ತಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : Congress : ಮೃತ ನವೀನ್ ಕುಟುಂಬಕ್ಕೆ ಸಾಂತ್ವಾನ ಹೇಳಿದ 'ಕೈ' ನಾಯಕರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.