ಬೆಂಗಳೂರು: ಒಮಿಕ್ರಾನ್ ಭೀತಿ ನಡುವೆ, ಕರ್ನಾಟಕ ಸರ್ಕಾರವು ಮಂಗಳವಾರ 2022 ರ ಹೊಸ ವರ್ಷದ ಆಚರಣೆಯ ಮೇಲೆ ನಿರ್ಬಂಧಗಳನ್ನು (New Year Guidelines) ಪ್ರಕಟಿಸಿದೆ. ಆದಾಗ್ಯೂ, ಚರ್ಚ್‌ಗಳಲ್ಲಿ ಕ್ರಿಸ್ಮಸ್ ಆಚರಣೆಗಳು ಮತ್ತು ಪ್ರಾರ್ಥನಾ ಸಭೆಗಳಿಗೆ ಯಾವುದೇ ನಿರ್ಬಂಧಗಳಿಲ್ಲ.


COMMERCIAL BREAK
SCROLL TO CONTINUE READING

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ತಮ್ಮ ಸಂಪುಟ ಸಹೋದ್ಯೋಗಿಗಳು, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೋವಿಡ್ ತಜ್ಞರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಿರ್ಬಂಧಗಳು (New Year 2022 Guidelines) ಜಾರಿಯಲ್ಲಿರುತ್ತವೆ ಎಂದು ತಿಳಿಸಿದರು.


ಹೊಸ ವರ್ಷಾಚರಣೆ ವೇಳೆ ಜನ ಗುಂಪುಗೂಡದಂತೆ ನಿರ್ಬಂಧ ವಿಧಿಸಲಾಗುವುದು. ಹೊಸ ವರ್ಷವನ್ನು ಸ್ವಾಗತಿಸಲು ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಮತ್ತು ಕರ್ನಾಟಕದಾದ್ಯಂತ ನಡೆಯುವ ಎಲ್ಲಾ ಸಾರ್ವಜನಿಕ ಕೂಟಗಳನ್ನು ನಿಷೇಧಿಸಲಾಗಿದೆ. ರಾಜ್ಯದ ಯಾವುದೇ ಭಾಗದಲ್ಲಿ ಯಾವುದೇ ಸಾರ್ವಜನಿಕ ಆಚರಣೆ ಮತ್ತು ವಿಶೇಷ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದರು.


ಪಬ್, ಬಾರ್ ಮತ್ತು ರೆಸ್ಟೋರೆಂಟ್, ಹೋಟೆಲ್​ಗಲ್ಲಿ ಅರ್ಧದಷ್ಟು ಜನರಿಗೆ ಸೇವೆ ಒದಗಿಸಬಹುದು. ಎಲ್ಲಾ ಸಿಬ್ಬಂದಿಗೆ 2 ಡೋಸ್​ ಕೊರೊನಾ ಲಸಿಕೆ ಹಾಕಿಸಿರಬೇಕು. ಆರ್​ಟಿಪಿಸಿಆರ್​ ಟೆಸ್ಟ್​ ಮಾಡಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗುವುದು. ಆದಾಗ್ಯೂ, ಡಿಜೆ ಕಾರ್ಯಕ್ರಮಗಳು, ಹೊಸ ವರ್ಷದ ಪಾರ್ಟಿಗಳನ್ನು ಆಯೋಜಿಸಲು ಯಾವುದೇ ಅನುಮತಿ ಇರುವುದಿಲ್ಲ ಎಂದು ಸಿಎಂ ಹೇಳಿದರು.


ಹೊಸ ವರ್ಷದ ಸಂದರ್ಭದಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸದಂತೆ ಅಥವಾ ಆಯೋಜಿಸದಂತೆ ದೊಡ್ಡ ವಸತಿ ಸಂಕೀರ್ಣಗಳಿಗೆ ನಿರ್ದೇಶನಗಳನ್ನು ನೀಡಲಾಗಿದೇ. ಆಯಾ ಆರ್‌ಡಬ್ಲ್ಯೂಎಗಳು ಅಥವಾ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳಿಗೆ ನಿಯಮವನ್ನು ಅನುಸರಿಸಲು ತಿಳಿಸಲಾಗಿದೆ ಎಂದು ಹೇಳಿದರು.


ಕ್ರಿಸ್​ಮಸ್​ ಹಬ್ಬಕ್ಕಿಲ್ಲ ನಿರ್ಬಂಧ:


ಕ್ರಿಸ್​ಮಸ್​ ಹಬ್ಬದಲ್ಲಿ ಚರ್ಚುಗಳಲ್ಲಿ ಪ್ರಾರ್ಥನೆ ನಡೆಸಲು ಯಾವುದೇ ನಿರ್ಬಂಧಗಳು ಇರುವುದಿಲ್ಲ. ಕೋವಿಡ್ ಪ್ರೋಟೋಕಾಲ್‌ಗಳನ್ನು ಅನುಸರಿಸುವ ಮೂಲಕ ಅವರು ಇಷ್ಟು ದಿನ ಮಾಡುತ್ತಿರುವಂತೆ ಚರ್ಚ್‌ಗಳ ಒಳಗೆ ನಿಯಮಿತವಾಗಿ ಪ್ರಾರ್ಥನೆಗಳನ್ನು ನಡೆಸಲಾಗುವುದು ಎಂದು ಹೇಳಿದರು.


ಇದನ್ನೂ ಓದಿ: ಕರ್ನಾಟಕ ಪೊಲೀಸ್ ಇಲಾಖೆಗೆ ಟ್ರಾನ್ಸ್‌ಜೆಂಡರ್‌ಗಳ ನೇಮಕ.. ತೃತೀಯ ಲಿಂಗಿಗಳಿಂದ ಸಬ್‌ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.