ಹಾಸನ: ಹಾಸನ ಸೇರಿದಂತೆ ರಾಜ್ಯಾದ್ಯಂತ ಕಾಡಾನೆ ದಾಳಿಯಿಂದ  ಉಂಟಾಗುತ್ತಿರುವ ಜೀವ ಹಾನಿ, ಅಂಗ ವೈಕಲ್ಯತೆ ಮತ್ತು ಬೆಳೆಹಾನಿಗಳಿಗೆ ನೀಡುತ್ತಿರುವ ಪರಿಹಾರವನ್ನು ದ್ವಿಗುಣಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ ಎಂದು ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಅರಕಲಗೂಡು ತಾಲೂಕಿನ ಹೊನ್ನೇನಹಳ್ಳಿಯಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಗಾಂಧಿ ವಸತಿ ಶಾಲೆ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.


ಇದನ್ನೂ ಓದಿ: DK Shivakumar challenges BJP: ಮೊದಲು ಪಾಲಿಕೆ ಚುನಾವಣೆ ನಡೆಸಲಿ: ಬಿಜೆಪಿಗೆ ಡಿಕೆಶಿ ಸವಾಲ್


ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಆನೆ ಹಾವಳಿ ತಡೆ ಕುರಿತು ಉನ್ನತಮಟ್ಟದ ಸಭೆ ಕರೆಯಲಾಗಿದೆ. ಜಿಲ್ಲೆಯ ಕಟ್ಟೆಪುರ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಗಳಲ್ಲಿ ಆನೆ ಕ್ಯಾಂಪ್ ತೆರೆಯಲು ಅನುಮತಿ ನೀಡಿಲಾಗಿದೆ ಎಂದು ಸಚಿವರು ತಿಳಿಸಿದರು.


ಪುಂಡಾನೆಗಳಿಗೆ ರೆಡಿಯೋ‌ ಕಾಲರ್ ಅಳವಡಿಕೆ, ಸೌರ ಬೇಲಿ ನಿರ್ಮಾಣಕ್ಕೆ ಸಬ್ಸಿಡಿ ಶೇ.75ಕ್ಕೆ ಏರಿಕೆ ಸೇರಿ ಹಲವು ಪ್ರಮುಖ ನಿರ್ಣಯ ಕೈಗೊಳ್ಳಲಾಗಿದೆ. ಹೊನ್ನೇನಹಳ್ಳಿಯಂತಹ ಕುಗ್ರಾಮದಲ್ಲಿ  ಒಂದೂವರೆ ವರ್ಷದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಇಂತಹ ಸುಸಜ್ಜಿತವಾದ ಶಾಲೆ ನಿರ್ಮಾಣಗೊಂಡಿರುವುದು ಸರ್ಕಾರ ಶಾಲಾ ಶಿಕ್ಷಣಕ್ಕೆ ನೀಡಿರುವ ಆದ್ಯತೆಗೆ ಸಾಕ್ಷಿಯಾಗಿದೆ ಎಂದು ಕೆ.ಗೋಪಾಲಯ್ಯ ಹೇಳಿದರು.


ಮ್ಯಾಂಡೋಸ್ ಪರಿಣಾಮ, ಸಿಎಂ ಬೊಮ್ಮಾಯಿ ಕಾರ್ಯಕ್ರಮದ ಸ್ಥಳ ಕೆಸರುಮಯ!


ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಶಿಕ್ಷಣ ಒದಗಿಸುವುದು ಸರ್ಕಾರದ ಉದ್ದೇಶ. ಜೊತೆಗೆ ಸ್ಥಳೀಯ ಶಾಸಕರು ಅಪಾರ  ಕಾಳಜಿವಹಿಸಿದ ಕಾರಣ ಇಂತಹ ಶಾಲೆ  ನಿರ್ಮಾಣವಾಗುತ್ತಿದೆ. ವಿದ್ಯಾರ್ಥಿಗಳಿಗೆ ಸಂಸ್ಕಾರ ‌ಮತ್ತು ಸಂಸ್ಕೃತಿ ಕಲಿಸಬೇಕು. ಬಡ ಮಕ್ಕಳಿಗೆ ಗುಣಮಟ್ಟದ ವಿದ್ಯಾಭ್ಯಾಸ ದೊರೆಯಬೇಕು. ತಾಲೂಕಿನ 5 ಕಡೆ ಇಂತಹದ್ದೇ ಅತ್ಯಂತ ಉತ್ತಮ ಶಿಕ್ಷಣ ಸಂಸ್ಥೆ ಪ್ರಾರಂಭವಾಗುತ್ತಿರುವುದು ಶಾಸಕರಾದ ಎ.ಟಿ.ರಾಮಸ್ವಾಮಿಯವರ ಕಾಳಜಿ ತೋರುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ಅರಕಲಗೂಡು ತಾಲೂಕಿನಲ್ಲಿ ಶಿಕ್ಷಣ   ಹಾಗೂ ಕುಡಿಯುವ ನೀರಿನ ಯೋಜನೆಗೆ ಆದ್ಯತೆ ನೀಡಲಾಗುತ್ತಿದೆ. ಕ್ಷೇತ್ರದಲ್ಲಿ ನೂತನವಾಗಿ ತಲಾ 25 ಕೋಟಿ ರೂ. ವೆಚ್ಚದಲ್ಲಿ 5 ವಸತಿ ಶಾಲೆ ಶಂಕುಸ್ಥಾಪನೆ ಮಾಡಿದ್ದು, 4 ಶಾಲೆಗಳನ್ನು ಉದ್ಘಾಟಿಸಲಾಗಿದೆ. ಅಲ್ಲದೆ 2  ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗಳಿಗೆ ತಲಾ 4 ಕೋಟಿ ರೂ. ಒದಗಿಸಿದ್ದು, ಒಟ್ಟಾರೆ  133 ಕೋಟಿ ರೂ. ಕ್ಷೇತ್ರಕ್ಕೆ ಒದಗಿಸಲಾಗಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅರ್ಚನಾ, ಜಿಪಂ ಸಿಇಒ ಕಾಂತರಾಜು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.