ಸರ್ಕಾರಿ ನೌಕರರೇ ಗಮನಿಸಿ! ಇನ್ಮುಂದೆ ಕಚೇರಿಯಿಂದ ಹೊರಡುವಾಗ ನಿಮ್ಮ ಬಳಿಯಿರುವ ನಗದು ಘೋಷಿಸಬೇಕು!
ನಗದು ಘೋಷಣೆ ವಹಿ ಸಂಬಂಧಪಟ್ಟ ವಿಭಾಗ ಅಥವಾ ಶಾಖೆಯ ಗ್ರೂಪ್ B ದರ್ಜೆಯ ಅಧಿಕಾರಿಯ ವಶದಲ್ಲಿರಬೇಕು. ಈ ಅಧಿಕಾರಿ ನಮೂದು ಮಾಡಿದ ಮೊತ್ತದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಬೆಂಗಳೂರು: ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗ(Government Employees)ಳಲ್ಲಿ ಇನ್ಮುಂದೆ ನಗದು ನಿರ್ವಹಣೆ ವಹಿ(Cash Register Circular) ಘೋಷಿಸುವಂತೆ ಸೂಚಿಸಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್(P Ravi Kumar) ಸೋಮವಾರ ಆದೇಶ ಹೊರಡಿಸಿದ್ದಾರೆ.
2021ರ ನ.10ರಂದು ಹೈಕೋರ್ಟ್(High Court of Karnataka) ನೀಡಿದ ಸೂಚನೆಯನ್ವಯ ಈ ಆದೇಶವನ್ನು ಹೊರಡಿಸಲಾಗಿದೆ. ಇನ್ನು ಮುಂದೆ ಸರ್ಕಾರಿ ಇಲಾಖೆಯ ಎಲ್ಲಾ ನೌಕರರು ತಾವು ಕಚೇರಿಗೆ ಆಗಮಿಸಿದಾಗ ಹಾಗೂ ಹೊರಡುವಾಗ ತಮ್ಮ ಬಳಿ ಇರುವ ನಗದನ್ನು ಘೋಷಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ: ಬಿಜೆಪಿ ಸರ್ಕಾರದಿಂದಲೇ ಹಿಜಾಬ್ ವಿವಾದ ಪ್ರಾರಂಭವಾಗಿದೆ: ಎಂ.ಬಿ.ಪಾಟೀಲ್
ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವುದಕ್ಕಾಗಿ ಈ ನಿಯಮವನ್ನು ಜಾರಿಗೆ ತರಲಾಗುತ್ತಿದ್ದು, ಇದರಿಂದ ಕಚೇರಿ ಅವಧಿಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಮಾಡಬಹುದು ಎಂದು ಸರ್ಕಾರವು ಭಾವಿಸಿದೆ. ಈ ನಿಯಮದನ್ವಯ ಪ್ರತಿಯೊಬ್ಬ ನೌಕರ(Government Employees)ನೂ ಕೆಲಸದ ಆರಂಭದಲ್ಲಿ ನಗದು ಘೋಷಣೆ ವಹಿಯನ್ನು ತೆರೆಯತಕ್ಕದ್ದು. ಹಾಜರಿ ಪುಸ್ತಕ ಅಥವಾ ಎಎಂಎಸ್ ನಲ್ಲಿ ಸಹಿ ಮಾಡಿದ ತಕ್ಷಣ ಈ ಘೋಷಣೆಯಾಗಬೇಕು ಎಂದು ತಿಳಿಸಲಾಗಿದೆ.
ನಗದು ಘೋಷಣೆ ವಹಿ(Cash Register Circular) ಸಂಬಂಧಪಟ್ಟ ವಿಭಾಗ ಅಥವಾ ಶಾಖೆಯ ಗ್ರೂಪ್ B ದರ್ಜೆಯ ಅಧಿಕಾರಿಯ ವಶದಲ್ಲಿರಬೇಕು. ಈ ಅಧಿಕಾರಿ ನಮೂದು ಮಾಡಿದ ಮೊತ್ತದ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಧಿಕಾರವನ್ನು ಹೊಂದಿರುತ್ತಾನೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಘೋಷಣೆ ಮಾಡಿದ್ದಕ್ಕಿಂತ ಹೆಚ್ಚಿನ ಮೊತ್ತವನ್ನು ಸರ್ಕಾರಿ ನೌಕರನು ಹೊಂದಿದ್ದರೆ ಅದನ್ನು ಅಕ್ರಮ ಸಂಪಾದನೆ ಎಂದು ಪರಿಗಣಿಸಲಾಗುತ್ತದೆ. ಮತ್ತು ಅದನ್ನು ಸಕ್ರಮ ಹಣ ಎಂದು ಸಾಬೀತುಪಡಿಸುವುದು ಆರೋಪಿತ ನೌಕರನ ಹೊಣೆಯಾಗಿರುತ್ತದೆ ಎಂದು ಎಲ್ಲ ಇಲಾಖೆಗಳಿಗೆ ಕಳುಹಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: "ಹಿಜಾಬ್ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ": ವಿಪಕ್ಷ ನಾಯಕ ಸಿದ್ದರಾಮಯ್ಯ
ನಗದು ಘೋಷಣೆ ವಹಿ(Cash Register Circular)ಯನ್ನು ಕಚೇರಿ ವೇಳೆಯ ಎಲ್ಲಾ ಸಮಯದಲ್ಲಿ ಯಾವುದೇ ಉನ್ನತ/ಸಕ್ಷಮ ಪ್ರಾಧಿಕಾರ/ಘಟಕದ ಮುಖ್ಯಸ್ಥರು/ವಿಭಾಗದ ಮುಖ್ಯಸ್ಥರ ತಪಾಸಣೆಗಾಗಿ ತೆರೆದಿರತಕ್ಕದ್ದು ಎಂದು ಸೂಚಿಸಲಾಗಿದ್ದು, ಈ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಖಡಕ್ ಎಚ್ಚರಿಕೆ ನೀಡಲಾಗಿದೆ. ಒಂದು ವೇಳೆ ಯಾವುದೇ ಕರ್ತವ್ಯಲೋಪ ಕಂಡುಬಂದಲ್ಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.