`KSRTC ಮತ್ತು BMTC ನೌಕರರಿಗೆ `ಭರ್ಜರಿ ಗುಡ್ ನ್ಯೂಸ್` ನೀಡಿದ ರಾಜ್ಯ ಸರ್ಕಾರ!
ಕೆಎಸ್‌ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಡಿಸೆಂಬರ್ ತಿಂಗಳ ಸಂಬಳವನ್ನು 10 ದಿನದೊಳಗೆ
ಬೆಂಗಳೂರು: ಕೆಎಸ್‌ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ಸಿಕ್ಕಿದ್ದು, ಡಿಸೆಂಬರ್ ತಿಂಗಳ ಸಂಬಳವನ್ನು 10 ದಿನದೊಳಗೆ ನೀಡುತ್ತೇವೆ ಎಂದು ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ರ ಕಲಾಪದಲ್ಲಿ ಸಾರಿಗೆ ನೌಕರರಿಗೆ ಸಂಬಳ(Salary) ನೀಡದ ವಿಚಾರದ ಕುರಿತಂತೆ ಶಾಸಕ ಹರ್ಷವರ್ಧನ್ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ ಸವದಿ ನವೆಂಬರ್ ತಿಂಗಳ ತನಕ ಎಲ್ಲಾ ನೌಕರರಿಗೆ ಸಂಬಳ ನೀಡಲಾಗಿದೆ. ಡಿಸೆಂಬರ್ ತಿಂಗಳ ಸಂಬಳವನ್ನು 8 ರಿಂದ 10 ದಿನದೊಳಗೆ ನೀಡಲಾಗುವುದು ಎಂದು ಹೇಳಿದ್ದಾರೆ.
ಹನುಮಾನ್ ದೇವಾಲಯ ನಿರ್ಮಾಣಕ್ಕೆ ಜಮೀನು ನೀಡಿದ ಮುಸ್ಲಿಂ
ಇನ್ನು ಸಾರಿಗೆ ನೌಕರರನ್ನು ಸರ್ಕಾರಿ ನೌಕರರಾಗಿ ಮಾಡುವಂತೆ ಶಾಸಕ ಜಿ.ಟಿ. ದೇವೇಗೌಡ ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಲಕ್ಷ್ಮಣ ಸವದಿ, ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಈಗಿರುವ ಆರ್ಥಿಕ ಪರಿಸ್ಥಿತಿಯಲ್ಲಿ ಅವರ ಬೇಡಿಕೆ ಈಡೇರಿಸಲು ಕಷ್ಟವಾಗಲಿದೆ ಎಂದರು.
ವರ್ತೂರು ಪ್ರಕಾಶ್ ಅವರಿಗೂ ಕಾಂಗ್ರೆಸ್ ಗೂ ಯಾವುದೇ ಸಂಬಂಧವಿಲ್ಲ: ಡಿ.ಕೆ ಶಿವಕುಮಾರ್ ಸ್ಪಷ್ಟನೆ