ಬೆಂಗಳೂರು: ಕೋವಿಡ್-19 (Covid 19) ನೆಪ ಹೇಳಿ ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ (Kannada University) ಅನುದಾನ ಸ್ಥಗಿತಗೊಳಿಸಿದ್ದು, ಹತ್ತು ತಿಂಗಳಿಂದ ಅತಿಥಿ ಉಪನ್ಯಾಸಕರಿಗೆ ಹಾಗೂ ವಿವಿಯ ಅಧ್ಯಾಪಕರಿಗೆ ಸಂಬಳ ನೀಡಲಾಗದ ಪರಿಸ್ಥಿತಿ ಬಂದಿದೆ.


COMMERCIAL BREAK
SCROLL TO CONTINUE READING

ಇದಲ್ಲದೆ ಪಿಂಚಣಿ, ವಿದ್ಯಾರ್ಥಿಗಳ ಫೆಲೋಶಿಪ್ ಸೇರಿದಂತೆ ಆರೋಗ್ಯ ಬಿಲ್ ಗಳನ್ನೂ ಪಾವತಿ ಮಾಡಲು ಹಣವಿಲ್ಲದ ದುಃಸ್ಥಿತಿಗೆ ಕನ್ನಡ ವಿವಿ ಬಂದಿಳಿದಿದೆ.


ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ:


ಈ ಸಂಬಂದಕ್ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಕನ್ನಡ ವಿಶ್ವವಿದ್ಯಾಲಯಕ್ಕೆ ಅಗತ್ಯ ಅನುದಾನ ಕೊಡದೆ ಅನ್ಯಾಯವೆಸಗಿದ ಸರ್ಕಾರ, ಸಂಸ್ಕೃತ ವಿವಿಗೆ (Sanskrit University) ಬಹು ಕಾಳಜಿಯಿಂದ ₹359 ಕೋಟಿ, 100 ಎಕರೆ ಜಾಗ ನೀಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


 


ಲಾಕ್ ಡೌನ್ ವಿಚಾರ ಇಲ್ಲ, ಯಾರಿಗೋ ಸ್ವಲ್ಪ ಲಾಭವಾಗುತ್ತೆ ಅಂತ ರಿಲ್ಯಾಕ್ಸ್ ಮಾಡಲ್ಲ: ಸಚಿವ ಆರ್.ಅಶೋಕ್


ಇನ್ನೂ ದೊರಕಿಲ್ಲ ಅನುದಾನ:


ಸರಕಾರದಿಂದ ಅನುದಾನ ಕೋರಿ ಈ ವರ್ಷ ಮೇ ತಿಂಗಳಿಂದ ಉಪಕುಲಪತಿ ಎಸ್.ಸಿ.ರಮೇಶ್ ಅವರು ಪ್ರತಿ ವರ್ಷ ವಿಶ್ವವಿದ್ಯಾಲಯದ ವೇತನ ಸೇರಿದಂತೆ ಆಡಳಿತಾತ್ಮಕ ವೆಚ್ಚಗಳನ್ನ ಪೂರೈಸಲು, ವಾರ್ಷಿಕ ₹6 ಕೋಟಿ ನಿಗದಿಪಡಿಸಿ, ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೆ ಈ ವರೆಗೆ ಇದಕ್ಕೆ ಪ್ರತಿಯಾಗಿ ಅನುದಾನ ದೊರಕಿಲ್ಲ.


ಕನ್ನಡ ವಿವಿ ನಡೆಸಲು ಹಣವಿಲ್ಲ:


2020-21ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳಿಗೆ ಸರ್ಕಾರ ₹50 ಲಕ್ಷ ಮಾತ್ರ ಮೀಸಲಿಟ್ಟಿದ್ದು, ಇಲ್ಲಿಯವರೆಗೆ ಕೇವಲ ಒಂದು ಭಾಗ ಮಾತ್ರ ಬಿಡುಗಡೆಯಾಗಿದೆ. ಕನ್ನಡ ವಿಶ್ವವಿದ್ಯಾನಿಲಯವನ್ನು ನಡೆಸಲು ಯಾವುದೇ ಹಣವಿಲ್ಲ ಎಂದು ಉಪಕುಲಪತಿ ಎಸ್.ಸಿ.ರಮೇಶ್ ಹೇಳಿದರು.


ರಾಜ್ಯ ಸರ್ಕಾರವು (Karnataka Government) ಪ್ರತಿ ವರ್ಷ ₹4 ಕೋಟಿಯಿಂದ ₹6 ಕೋಟಿಯವರೆಗೆ ನಿಯಮಿತವಾಗಿ ಅನುದಾನ ನೀಡುತ್ತಿತ್ತು. 2018-19 ರಿಂದ ಅನುದಾನದಲ್ಲಿ ಕುಸಿತ ಕಂಡುಬಂದಿದ್ದು, ಸರ್ಕಾರವು ಕೇವಲ ₹1.5 ಕೋಟಿ ಮೀಸಲಿಟ್ಟಿದೆ. ನಂತರ 2019-20 ರಲ್ಲಿ ₹1 ಕೋಟಿ ಅನುದಾನದಲ್ಲಿ ಕುಸಿತವಾಗಿದೆ.


ಸಂಸ್ಕೃತ ವಿವಿಗೆ ₹359 ಕೋಟಿ ಅನುದಾನ:


ಈ ಮಧ್ಯೆ ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ₹359 ಕೋಟಿ, 100 ಎಕರೆ ಜಾಗ ನೀಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ. 


ಇಡೀ ದೇಶಕ್ಕೆ ಒಂದೇ ಕನ್ನಡ ವಿಶ್ವವಿದ್ಯಾಲಯ:


ಇಡೀ ದೇಶಕ್ಕೆ ಒಂದೇ ಕನ್ನಡ ವಿಶ್ವವಿದ್ಯಾಲಯ. ಆದರೆ ಸಂಸ್ಕೃತಕ್ಕೆ 16 ವಿವಿಗಳು. ಈಗ ರಾಜ್ಯದಿಂದಲ್ಲೂ ಮತ್ತಷ್ಟು ಅನುದಾನ. ಒಂದು ಪಕ್ಷ ಶಿವಾಜಿ ಬಗ್ಗೆ, ಮತ್ತೊಂದು ಪಕ್ಷ ಟಿಪ್ಪು ಬಗ್ಗೆ ಹೇಳಿಕೊಟ್ಟಿದ್ದು ಸಾಕು. ಮುಂದಿನ ಪೀಳಿಗೆಗೆ ಪುಲಿಕೇಶಿ, ಗಂಗರು, ರಾಷ್ಟ್ರಕೂಟರು"ಕರ್ಣಾಟಬಲ" ಬಗ್ಗೆ ತಿಳಿಸಿಕೊಡುವಂತಾಗಲಿ ಎಂದು ನಿರ್ದೇಶಕ ಸಿಂಪಲ್ ಸುನಿ (Simple Suni) ಟ್ವೀಟ್ ಮಾಡಿದ್ದಾರೆ. 


 


ಕರ್ನಾಟಕದ ಕಾಲೇಜುಗಳು ಮುಸ್ಲಿಮರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತಿವೆ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆರೋಪ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.