ಬೆಂಗಳೂರು : ಚೀನಾ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಮತ್ತೆ ಕೊರೋನಾ ವೈರಸ್ ಮತ್ತೆ ಉಲ್ಬಣಗೊಂಡಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರವು ಸಹ ಎಚ್ಚೆತ್ತುಕೊಂಡಿದ್ದು, ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗಾವಿಯ ಸುವರ್ಣ ಸೌಧದಲ್ಲಿ ಆರೋಗ್ಯ ಇಲಾಖೆಯ ಸಭೆ ನಡೆಸಿದರು. ಸಭೆಯ ನಂತರ ಸರ್ಕಾರದ ಅಧಿಕೃತ ಕೊರೋನಾ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ. ಅವು ಈ ಕೆಳಗಿವೆ ನೋಡಿ..


COMMERCIAL BREAK
SCROLL TO CONTINUE READING

* ILI ಹಾಗೂ SARI ಪ್ರಕರಣಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಲಾಗಿದೆ.


* ಸೋಂಕಿನ ಲಕ್ಷಣ ಇರುವವರಿಗೂ ಕೋವಿಡ್ ಪರೀಕ್ಷೆ ಕಡ್ಡಾಯ


* ಕೊರೋನಾ‌ ನಿಯಂತ್ರಣ ತಂಡವನ್ನು ರಚಿಸಲು ಬಿಬಿಎಂಪಿ ಹಾಗೂ ಜಿಲ್ಲಾಡಳಿತಕ್ಕೆ ಸೂಚನೆ


ಇದನ್ನೂ ಓದಿ : ಕೊರೊನಾ ಪ್ರಕರಣ ಹೆಚ್ಚಳ ಹಿನ್ನೆಲೆ,ರಾಜ್ಯ ಸರ್ಕಾರದಿಂದ ಮಹತ್ವದ ನಿರ್ಧಾರ


* ಬೆಂಗಳೂರು ಏರ್ಪೋರ್ಟ್, ಮಂಗಳೂರು ಏರ್ಪೋರ್ಟ್ ನಲ್ಲಿ 2% ರ್ಯಾಡಮ್ ಟೆಸ್ಟ್ ಕಡ್ಡಾಯ


* ಕೋವಿಡ್ ಪಾಸಿಟಿವ್ ಸ್ಯಾಂಪಲ್ಸ್ ಅನ್ನು ಜಿನೋಮಿಕ್ ಸೀಕ್ವೆಮ್ಸಿಂಗ್ ಗೆ ಕಳುಹಿಸುವುದು ಕಡ್ಡಾಯ


* ಬೂಸ್ಟರ್ ಡೋಸ್ ಲಸಿಕೆಯನ್ನು ಜನವರಿ 2023ರ ಒಳಗಾಗಿ 50% ದಾಟಬೇಕು


* ಎಲ್ಲಾ ಜಿಲ್ಲಾಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ ಕೊರೋನಾ ಬೆಡ್ ಮೀಸಲು ಕಡ್ಡಾಯ


* ಕೋವಿಡ್ ಏರಿಕೆಯಾದ ಸಂಧರ್ಭದಲ್ಲಿ ಎಲ್ಲಾ ಖಾಸಗಿ‌ ಆಸ್ಪತ್ರೆಗಳು ಸೃವ ರೀತಿಯಲ್ಲೂ ಸೇವೆ ನೀಡಲು ಸನದ್ಧವಾಗಿರಬೇಕು


* ಎಲ್ಲಾ ಆಸ್ಪತ್ರೆಗಳಲ್ಲಿರುವ ಆಕ್ಸಿಜನ್ ಪೂರೈಕಾ ಘಟವನ್ನು ಪ್ರತಿ 15 ದಿನಕ್ಕೊಕ್ಕೆ ಡ್ರೈ ರನ್ ಮಾಡಬೇಕು


* ಆಸ್ಪತ್ರೆಗೆ ಭೇಟಿ ಕೊಡುವ ಎಲ್ಲಾ ಮಾದರಿಯ ಜನರು ಮಾಸ್ಕ್ ಧರಿಸುವುದು ಕಡ್ಡಾಯ


* ಮುಚ್ಚಿದ ಜಾಗ, ಬಾರ್, ಪಬ್, ಸಿನಿಮಾ‌ ಮಂದಿರ, ಶಾಪಿಂಗ್ ಮಾಲ್, ಕಚೇರಿಗಳು, ಬಸ್ , ರೈಲು, ವಿಮಾನ ಪ್ರಯಾಣಿಕರು ಮಾಸ್ಕ್ ಧರಿಸಿದರೆ ಉತ್ತಮ


* ಅರ್ಹರು ಆದಷ್ಡು ಬೇಗ ಬೂಸ್ಟರ್ ಡೋಸ್ ಪಡೆಯಲು ಮನವಿ


* ಉಸಿರಾಟದ ಸಮಸ್ಯೆ ಇರುವವರು ಕೋವಿಡ್ ಪರೀಕ್ಷೆ ನಡೆಸಲು ಸೂಚನೆ, ಪಾಸಿಟಿವ್ ಬಂದಲ್ಲ ಸೆಲ್ಫ್ ಕ್ವಾರಂಟೀನ್


* ಇಮ್ಯೂನಿಟಿಗಾಗಿ ಯೋಗ ಮಾಡಲು ಆರೋಗ್ಯ ಇಲಾಖೆ ಸಾರ್ವಜನಿಕರಿಗೆ ಸಲಹೆ


ಸಾರ್ವಜನಿಕ ಸಭೆ ಹಾಗೂ ಸಮಾರಂಭ ಮಾಡುವಾಗ ಪಾಲಿಸಬೇಕಾದ ಮಾರ್ಗಸೂಚಿ


* ಕಾರ್ಯಕ್ರಮ ಆಯೋಜನೆಗೆ ತೆರೆದ ಜಾಗ ಆಯ್ಕೆ ಮಾಡುವುದು


* ಮುಂಜಾನೆ ಹಾಗೂ ಸಂಜೆಯ ಶೀತ ಗಾಳಿ ಅವಾಯ್ಡ್ ಆಗುವಂತೆ ಕಾರ್ಯಕ್ರಮ ಆಯೋಜನೆಗೆ ಒತ್ತು


* ಒಳಾಂಗಣದಲ್ಲಿ ಕಾರ್ಯಕ್ರಮ ನಡೆದರೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ


* ಒಳಾಂಗಣ ಕಾರ್ಯಕ್ರಮಕ್ಕೆ ಸೀಮಿತವಾಗಿ ಜನ ಸೇರಿಸಿ


ಇದನ್ನೂ ಓದಿ : BBMP : ರಾಜಕಾಲುವೆ ನುಂಗಿದ್ದವರಿಗೆ ನೀರು ಕುಡಿಸಿದ ಪಾಲಿಕೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.