ಬೆಂಗಳೂರು : ಕೊರೋನಾ ಪ್ರಕರಣಗಳು ಜಾಸ್ತಿ ಇರುವ 11 ಜಿಲ್ಲೆಗಳಲ್ಲಿ ಜೂನ್ 14ರಿಂದ 21ರವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದ್ದು, ಬೆಂಗಳೂರು ಸೇರಿದಂತೆ ಉಳಿದ ಜಿಲ್ಲೆಗಳಲ್ಲಿ ಅನ್ ಲಾಕ್ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅನ್ ಲಾಕ್ ಕುರಿತ ಹೊಸ ಮಾರ್ಗಸೂಚಿ ಪ್ರಕಟಿಸಿದೆ.


COMMERCIAL BREAK
SCROLL TO CONTINUE READING

ಕೊರೋನಾ ನಿಯಂತ್ರಣಕ್ಕೆ ಬಂದಿರುವ ಜಿಲ್ಲೆಗಳಲ್ಲಿ ಜೂನ್ 14ರಿಂದ ಅನ್ ಲಾಕ್(Unlock) ಆರಂಭವಾಗಲಿದ್ದು, ರಾಜ್ಯಾದ್ಯಂತ ನೈಟ್ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಲಾಗುತ್ತಿದೆ. 


ಇದನ್ನೂ ಓದಿ : BS Yediyurappa : ಸಿಎಂ ಬದಲಾವಣೆ ಚರ್ಚೆಗೆ ಸೆಡ್ಡು ಹೊಡೆದ ಯಡಿಯೂರಪ್ಪ!


ಸಂಜೆ 7ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ(Night Curfew) ಜಾರಿಯಲ್ಲಿರಲಿದ್ದು, ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆಳಿಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿರಲಿದೆ.


ಇದನ್ನೂ ಓದಿ : Heavy Rain : ರಾಜ್ಯದಲ್ಲಿ ಇಂದಿನಿಂದ ಒಂದು ವಾರ ಭಾರೀ ಮಳೆ..!


ಹೊಸ ಮಾರ್ಗಸೂಚಿಗಳು :


- KSRTC, BMTC, ಖಾಸಗಿ ಬಸ್ ಸಂಚಾರಕ್ಕೆ ನಿರ್ಬಂಧ


- ಬೆಂಗಳೂರಿನಲ್ಲಿ ಮೆಟ್ರೋ(Namma Metro) ಸಂಚಾರಕ್ಕೆ ನಿರ್ಬಂಧ


ಇದನ್ನೂ ಓದಿ : ರಾಜ್ಯದಲ್ಲಿ ಕೆಲವು ವಿನಾಯಿತಿಯೊಂದಿಗೆ ಜೂನ್ 21 ರವರೆಗೆ ಲಾಕ್ ಡೌನ್ ವಿಸ್ತರಣೆ


- ಹೋಟೆಲ್ ಗಳಲ್ಲಿ ಪಾರ್ಸೆಲ್(Food Parcel ) ಗೆ ಅವಕಾಶ


- ಆಟೋ, ಟ್ಯಾಕ್ಸಿಗಳಲ್ಲಿ ಇಬ್ಬರು ಪ್ರಯಾಣಿಸಲು(Travel) ಅವಕಾಶ


- ಮದುವೆಗಳಲ್ಲಿ(Marriage) 40 ಜನರಿಗೆ ಮಾತ್ರ ಭಾಗಿಯಾಗಲು ಅವಕಾಶ


ಇದನ್ನೂ ಓದಿ : Karnataka Lockdown Update : ರಾಜ್ಯದ ಈ 8 ಜಿಲ್ಲೆಗಳಲ್ಲಿ ಮತ್ತೆ '1 ವಾರ ಲಾಕ್ ಡೌನ್' ಮುಂದುವರಿಕೆ!


- ಅಂತ್ಯಕ್ರಿಯೆ(Funeral)ಯಲ್ಲಿ 5 ಜನರಿಗೆ ಮಾತ್ರ ಅವಕಾಶ


- ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಸಮಯ ವಿಸ್ತರಣೆ


- ಮಧ್ಯಾಹ್ನ 2 ಗಂಟೆಯವರೆಗೆ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ


ಇದನ್ನೂ ಓದಿ : Arun Singh : ಕರ್ನಾಟಕದಲ್ಲಿ ಸಿಎಂ ಬದಲಾವಣೆ ಇಲ್ಲ : ಅರುಣ್ ಸಿಂಗ್ ಸ್ಪಷ್ಟನೆ


- ಶೇ.50ರಷ್ಟು ಸಿಬ್ಬಂದಿ ಬಳಸಿ ಎಲ್ಲಾ ಕಾರ್ಖಾನೆಗಳು ಆರಂಭ


- ಗಾರ್ಮೆಂಟ್ಸ್ ಗಳಲ್ಲಿ ಶೇ.30ರಷ್ಟು ಸಿಬ್ಬಂದಿಗೆ ಅವಕಾಶ


- ಸಿಮೆಂಟ್, ಸ್ಟೀಲ್ ಅಂಗಡಿ ತೆರೆಯಲು ಅವಕಾಶ


- ಕಟ್ಟಡ ನಿರ್ಮಾಣ ಕಾಮಗಾರಿಗೆ ಅವಕಾಶ


ಇದನ್ನೂ ಓದಿ : Heavy Rain in Karnataka : ರಾಜ್ಯದಲ್ಲಿ ಮುಂದಿನ ವಾರ ಭಾರೀ ಮಳೆ : ಕರಾವಳಿ ಜಿಲ್ಲೆಗಳಲ್ಲಿ 'ರೆಡ್' ಅಲರ್ಟ್'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.