ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ಶುಕ್ರವಾರದಂದು ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡುವ ನಿಟ್ಟಿನಲ್ಲಿ 7 ಸದಸ್ಯರನ್ನೊಳಗೊಂಡ  ತಜ್ಞರ ಸಮಿತಿಯೊಂದನ್ನು ರಚಿಸಿದೆ.


COMMERCIAL BREAK
SCROLL TO CONTINUE READING

ಇತ್ತೀಚಿಗೆ ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎಂದು ಎಂದು ಲಿಂಗಾಯತ ಸಮುದಾಯದ ಸ್ವಾಮೀಜಿಗಳು, ರಾಜಕಾರಣಿಗಳು ಸೇರಿ ಧಾರ್ಮಿಕ ಸಮಾವೇಶ ಹಾಗೂ ಹೋರಾಟದ ಮೂಲಕ ಸ್ವತಂತ್ರ ಧರ್ಮದ ಬೇಡಿಕೆಯನ್ನು ಇಟ್ಟಿದ್ದರು.  ಸಮುದಾಯದ ಬೇಡಿಕೆಗೆ ಸಕಾರಾತ್ಮಕವಾಗಿ  ಸ್ಪಂಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಈಗ ಪ್ರತ್ಯೇಕ  ಲಿಂಗಾಯತ ಧರ್ಮದ ವಿಷಯವಾಗಿ ಸಮಗ್ರವಾಗಿ ಅಧ್ಯಯನ ನಡೆಸಿ ನಾಲ್ಕು ವಾರಗಳೊಳಗಾಗಿ ವರದಿ ಸಲ್ಲಿಸುವಂತೆ  ತಜ್ಞರ ಸಮಿತಿಗೆ ಸೂಚಿಸಿದೆ. ತಜ್ಞರು ಸೂಚಿಸಿದ ವರದಿಯ ಆಧಾರದ ಮೇಲೆ ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ವಿಚಾರಕ್ಕೆ ಸಂಬಂಧಿಸಿದ ಅಂತಿಮ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.


ಮಾಜಿ ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಚ್.ಎನ್.ನಾಗಮೊಹನದಾಸ್ರವರ ನೇತೃತ್ವದಲ್ಲಿನ  ಈ ಸಮಿತಿಯಲ್ಲಿ  ಕನ್ನಡ ಅಭಿವೃದ್ದಿ ಪ್ರಾಧಿಕಾರದ  ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಉಪನ್ಯಾಸಕರು ರಾಮಕೃಷ್ಣ ಮರಾಥೆ, ಪತ್ರಕರ್ತ ಸರಜೂ ಕಾಟ್ಕರ್, ರಾಜಕೀಯತಜ್ಞ  ಮುಜಾಫರ್ ಅಸ್ಸಾದಿ ,ಪುರುಷೋತ್ತಮ ಬಿಳಿಮಲೆ ಜೆಎನ್ಯು ಕನ್ನಡ ಅಧ್ಯಯನ ಪೀಠ , ಸಿ.ಎಸ್.ದ್ವಾರಕಾನಾಥ್, ಅನೀಜ ಸಿರಾಜ್ರವರು ತಜ್ಞರ ಸಮಿತಿಯಲ್ಲಿದ್ದಾರೆ.