ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) 2022ರ ಫಲಿತಾಂಶಗಳನ್ನು ಇಂದು(ಜುಲೈ 30) ಬೆಳಿಗ್ಗೆ 11 ಗಂಟೆಗೆ ಬಿಡುಗಡೆ ಮಾಡುತ್ತದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥ್ ನಾರಾಯಣ್ ಫಲಿತಾಂಶ ಪ್ರಕಟಿಸಲಿದ್ದು, ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್‌ಗಳಾದ kea.kar.nic.in, karresults.nic.in ನಲ್ಲಿ ಪರಿಶೀಲಿಸಬಹುದು.


COMMERCIAL BREAK
SCROLL TO CONTINUE READING

ಈ ವರ್ಷ ಕೆಸಿಇಟಿ ಪರೀಕ್ಷೆಯನ್ನು ಜೂನ್ 16, 17 ಮತ್ತು 18ರಂದು ನಡೆಸಲಾಗಿತ್ತು. ಜೂನ್ 22ರಂದು ತಾತ್ಕಾಲಿಕ ಉತ್ತರ ಕೀ(provisional answer key) ಬಿಡುಗಡೆ ಮಾಡಲಾಗಿತ್ತು. ನಂತರ ಆಕ್ಷೇಪಣೆಗಳನ್ನು ಸಲ್ಲಿಸಲು ಅಭ್ಯರ್ಥಿಗಳಿಗೆ ಜೂನ್ 25ರವರೆಗೆ ಸಮಯ ನೀಡಲಾಗಿತ್ತು. ಎಲ್ಲಾ ಆಕ್ಷೇಪಗಳನ್ನು ಪರಿಗಣಿಸಿ ಇದೀಗ ಫಲಿತಾಂಶವನ್ನು ಅಂತಿಮಗೊಳಿಸಲಾಗಿದೆ.


ಇದನ್ನೂ ಓದಿ: ಐಎಎಸ್ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್!


ಕರ್ನಾಟಕ KCET ಫಲಿತಾಂಶ ಪರಿಶೀಲಿಸುವುದು ಹೇಗೆ?


ಹಂತ 1: KCET ಅಧಿಕೃತ ವೆಬ್‌ಸೈಟ್ kea.kar.nic.in, karresults.nic.in ಗೆ ಭೇಟಿ ನೀಡಿ


ಹಂತ 2: ಮುಖಪುಟದಲ್ಲಿ ಲಭ್ಯವಿರುವ KCET 2022 ಫಲಿತಾಂಶ ಲಿಂಕ್ ಅನ್ನು ಕ್ಲಿಕ್ ಮಾಡಿ.


ಹಂತ 3: ಲಾಗಿನ್ ಮಾಡಲು ಅಗತ್ಯವಿರುವ ಎಲ್ಲಾ ರುಜುವಾತು(credentials)ಗಳನ್ನು ನಮೂದಿಸಿ.


ಹಂತ 4: ಈಗ ನಿಮ್ಮ ಸ್ಕೋರ್ ಕಾರ್ಡ್ ಸ್ಕ್ರೀನ್ ಮೇಲೆ ಗೋಚರಿಸುತ್ತದೆ.


ಹಂತ 5: ಸ್ಕೋರ್ ಕಾರ್ಡ್ ಡೌನ್‌ಲೋಡ್ ಮಾಡಿ ಮತ್ತು ಸೇವ್ ಮಾಡಿಟ್ಟುಕೊಳ್ಳಿರಿ.


ಫಲಿತಾಂಶ ಪ್ರಕಟವಾದ ಬಳಿಕ ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಕೌನ್ಸೆಲಿಂಗ್ ಸುತ್ತಿಗೆ ಕರೆಯಲಾಗುವುದು. ಈ ಕೌನ್ಸೆಲಿಂಗ್ ಸುತ್ತುಗಳ ವಿವರಗಳನ್ನು ಶೀಘ್ರದಲ್ಲೇ ಅಭ್ಯರ್ಥಿಗಳಿಗೆ ಪೋರ್ಟಲ್‌ನಲ್ಲಿ ಅಥವಾ ಅವರ ನೋಂದಾಯಿತ ಸಂಪರ್ಕ ವಿವರಗಳ ಮೂಲಕ ತಿಳಿಸಲಾಗುತ್ತದೆ.


ಇದನ್ನೂ ಓದಿ: ಒಟ್ಟು 61 ಯೋಜನೆಯ ₹3829 ಕೋಟಿ ಬಂಡವಾಳ ಹೂಡಿಕೆ ಅನುಮೋದನೆ- ಸಚಿವ ನಿರಾಣಿ


KCET 2022 ಪರೀಕ್ಷೆ ಮತ್ತು ಕೌನ್ಸೆಲಿಂಗ್ ಸುತ್ತುಗಳಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು BVSc ಮತ್ತು AH, B.Sc ನಂತಹ ಹಲವಾರು ಎಂಜಿನಿಯರಿಂಗ್, ವಾಸ್ತುಶಿಲ್ಪ ಮತ್ತು ತಂತ್ರಜ್ಞಾನ(architecture and technology) ಕೋರ್ಸ್‌ಗಳಿಗೆ ರಾಜ್ಯದ ಭಾಗವಹಿಸುವ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಅರ್ಹತೆ ಪಡೆಯುತ್ತಾರೆ. BVSc ಮತ್ತು AH, B.Sc. (Hons) Agriculture, B.Sc. (Hons) Agriculture, Business Management, B.Sc. (Hons) Sericulture, B. Pharma, B.Sc (Hons) Forestry, B.Tech (Bio-Technology), Bachelor of Yoga ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‍ಗಳಿಗೆ ಅಭ್ಯರ್ಥಿಗಳು ಅರ್ಹತೆ ಪಡೆಯಲಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.