ಹಾಸನ : ಎಲ್ಲರಿಗೂ ಒಂದೊಂದು ಸಂಘ ಇರುವಾಗ ನಾವ್ಯಾಕೆ ಸುಮ್ಮನೆ ಇರಬೇಕು ಅಂತ ನಿರ್ಧರಿಸಿರುವ ಹಾಸನ ಮದ್ಯ ಪ್ರಿಯರು ಸಂಘ ಒಂದನ್ನು ತೆರೆಯಲು ಸಿ‍ದ್ದರಾಗಿದ್ದಾರೆ. ಅಲ್ಲದೆ, ಸಂಘದ ಉದ್ಘಾಟನೆಗೆ ದಿನ ಬರುವ ಅತಿಥಿಗಳಿಗೆ ಉಚಿತ ಎಣ್ಣೆ, ಚಿಕ್ಕನ್ ಬಿರಿಯಾನಿ ನೀಡುವುದಾಗಿ ಹೇಳಿದ್ದಾರೆ. ವಿಶೇಷ ಅಂದ್ರೆ, ಸಂಘದ ಉದ್ಘಾಟನೆಗೆ ಅಬಕಾರಿ ಸಚಿವ ಗೋಪಾಲಯ್ಯ ಅವರನ್ನು ಕರೆಸಲು ಸಂಘದ ಪದಾಧಿಕಾರಿಗಳು ಸಜ್ಜಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ʼನಿತ್ಯ ದುಡಿ ಸತ್ಯ ನುಡಿ ಸ್ವಲ್ಪ ಕುಡಿ ಮನೆಗೆ ನಡೆʼ ಎಂಬ ಧ್ಯೇಯ ವಾಕ್ಯದೊಂದಿದೆ ಆರಂಭವಾಗಿರುವ ಕರ್ನಾಟಕ ಮದ್ಯಪಾನ ಪ್ರಿಯರ ಹೋರಾಟ ಸಂಘದ ಪದಾಧಿಕಾರಿಗಳು ಹೇಳಿದ ಮಾತುಗಳನ್ನು ಕೇಳಿದರೆ ನಿಜವಾಗಲೂ ನೀವು ಶಾಕ್ ಆಗ್ತೀರಾ. ಸರ್ಕಾರ ರಾಜ್ಯದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧ ಮಾಡಲಿ ಇಲ್ಲವಾದರೆ ನಮ್ಮ ಬೇಡಿಕೆಗಳನ್ನು ಸಂಪೂರ್ಣವಾಗಿ ಈಡೇರಿಸಲಿ. ಇಲ್ಲದಿದ್ದರೆ ನಮ್ಮ ಸಂಘದ ವತಿಯಿಂದ ಉಗ್ರವಾದ ಹೋರಾಟ ಹಮ್ಮಿಕೊಳ್ಳುತೇವೆ ಎಂದು ಮದ್ಯಪ್ರಿಯರ ಸಂಘದ ಸದಸ್ಯರು ಹೇಳುತ್ತಿದ್ದಾರೆ.


ಇದನ್ನೂ ಓದಿ: BMTC ಪ್ರಯಾಣಿಕರ ಗಮನಕ್ಕೆ : ಬಸ್​ನಲ್ಲಿ ಪ್ರಯಾಣಿಸಲು ಮಾಸ್ಕ್ ಕಡ್ಡಾಯ!


ಈ ಸಂಘದ ಉದ್ಘಾಟನೆಯನ್ನು ಅಬಕಾರಿ ಸಚಿವರಾದ ಕೆ. ಗೋಪಾಲಯ್ಯನವರ ಕೈಯಿಂದ ಮಾಡಿಸುವುದಾಗಿ ಮತ್ತು ಕಾರ್ಯಕ್ರಮದ ರೂಪರೇಷೆ ಹೇಗಿರುತ್ತೆ ಅಂತ ಪ್ರಧಾನ ಕಾರ್ಯದರ್ಶಿಯಾದಂತಹ ರಮೇಶ್ ಅವರು ಹೇಳಿದ್ದಾರೆ. ಆದ್ರೆ ಹಳ್ಳಿ ಹಳ್ಳಿಗಳಲ್ಲಿ ಮಧ್ಯದ ಅಂಗಡಿ ಬೇಡ ಎಂದು ಮಹಿಳಾ ಸಂಘಟನೆಗಳು ಒತ್ತಾಯ ಮಾಡುತ್ತಿದ್ದಾರೆ. ಇದರ ನಡುವೆ ಮದ್ಯಪಾನ ಪ್ರಿಯರ ಹೋರಾಟ ಸಂಘ ಕಟ್ಟಿಕೊಂಡು ಇವರು ಹೋರಾಟ ಮಾಡುವುದಕ್ಕೆ ಹೊರಟಿದ್ದಾರೆ. ಇವರು ಸಮಾಜಕ್ಕೆ ಕೊಡುತ್ತಿರುವ ಸಂದೇಶವೇನಾದರೂ ಏನು ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.