Karnataka MLC Election: ಬಿಜೆಪಿಯಿಂದ 20 ಅಭ್ಯರ್ಥಿಗಳ ಪಟ್ಟಿ ಪ್ರಕಟ
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣಾ ಕಣ ರಂಗೇರಿದ್ದು, ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿಗಳ ಆಯ್ಕೆಯಲ್ಲಿ ನಿರತವಾಗಿವೆ.
ಬೆಂಗಳೂರು: ರಾಜ್ಯದ ಒಟ್ಟು 25 ಕ್ಷೇತ್ರಗಳಿಗೆ ಡಿ.10 ರಂದು ವಿಧಾನಪರಿಷತ್ ಚುನಾವಣೆ(Karnataka MLC Election 2021) ನಡೆಯಲಿದೆ. ಈ ಹಿನ್ನೆಲೆ ಬಿಜೆಪಿ 20 ಸ್ಥಾನಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಹಾಲಿ ಸದಸ್ಯರ ಪೈಕಿ ಕೊಡಗು ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದೆ. ಹಾಲಿ ಎಂಎಲ್ಸಿ ಸುನಿಲ್ ಸುಬ್ರಮಣಿ ಸಹೋದರ ಸುಜಾ ಕುಶಾಲಪ್ಪಗೆ ಟಿಕೆಟ್ ನೀಡಲಾಗಿದೆ. ಶಿವಮೊಗ್ಗದಲ್ಲಿ ವಿಧಾನಪರಿಷತ್ನ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ(DH Shankaramurthy) ಪುತ್ರ ಅರುಣ್ಗೆ ಟಿಕೆಟ್ ನೀಡಲಾಗಿದೆ.
ಚುನಾವಣೆ(MLC Election)ಗೆ ನಾಮಪತ್ರ ಸಲ್ಲಿಸಲು ನವೆಂಬರ್ 23 ಕೊನೆಯ ದಿನವಾಗಿದ್ದು, ನ.14ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ನ.26 ಕೊನೆ ದಿನವಾಗಿರಲಿದೆ. ಡಿ.10ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಡಿ.14ರಂದು ಫಲಿತಾಂಶ ಹೊರಬೀಳಲಿದೆ.
"ಕೃಷಿ ಕಾಯ್ದೆಗಳ ವಾಪಸ್ ಪಡೆಯುವ ಹೇಳಿಕೆ ಮತ ಫಸಲಿಗೆ ಮಾಡಿದ ಹೈಡ್ರಾಮಾ ಆಗದಿರಲಿ"
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ
ಕೊಡಗು- ಸುಜಾ ಕುಶಾಲಪ್ಪ
ದಕ್ಷಿಣ ಕನ್ನಡ- ಕೋಟ ಶ್ರೀನಿವಾಸ ಪೂಜಾರಿ
ಚಿಕ್ಕಮಗಳೂರು- ಎಂ.ಕೆ.ಪ್ರಾಣೇಶ್
ಶಿವಮೊಗ್ಗ- ಡಿ.ಎಸ್.ಅರುಣ್
ಧಾರವಾಡ- ಪ್ರದೀಪ್ ಶೆಟ್ಟರ್
ಬೆಳಗಾವಿ- ಮಹಾಂತೇಶ್ ಕವಟಗಿಮಠ
ಕಲಬುರಗಿ- ಬಿ.ಜಿ. ಪಾಟೀಲ್
ಚಿತ್ರದುರ್ಗ- ಕೆ.ಎಸ್.ನವೀನ್
ಮೈಸೂರು- ರಘು ಕೌಟಿಲ್ಯ
ಹಾಸನ- ವಿಶ್ವನಾಥ್
ಉತ್ತರ ಕನ್ನಡ- ಗಣಪತಿ ಉಳ್ವೇಕರ್
ಬೀದರ್- ಪ್ರಕಾಶ್ ಖಂಡ್ರೆ
ಬೆಂಗಳೂರು ನಗರ- ಗೋಪಿನಾಥ್ ರೆಡ್ಡಿ
ಮಂಡ್ಯ- ಕೆ.ಆರ್.ಪೇಟೆ ಮಂಜು
ಕೋಲಾರ- ಡಾ.ಕೆ.ಎನ್.ವೇಣುಗೋಪಾಲ್
ರಾಯಚೂರು- ವಿಶ್ವನಾಥ್ ಬನಹಟ್ಟಿ
ಬೆಂಗಳೂರು ಗ್ರಾಮಾಂತರ- ಬಿ.ಎಂ.ನಾರಾಯಣಸ್ವಾಮಿ
ಬಳ್ಳಾರಿ- ವೈ.ಎಮ್.ಸತೀಶ್
ತುಮಕೂರು- ಎನ್.ಲೋಕೇಶ್
ವಿಜಯಪುರ- ಪಿ.ಹೆಚ್.ಪುಜಾರ್
ಇದನ್ನೂ ಓದಿ: ಪಕ್ಷಕ್ಕಾಗಿ ದುಡಿದ ಸೂರಜ್ ರೇವಣ್ಣಗೆ ಟಿಕೆಟ್!: ದೊಡ್ಡಗೌಡರ ಕುಟುಂಬ ರಾಜಕಾರಣಕ್ಕೆ ಬಿಜೆಪಿ ವ್ಯಂಗ್ಯ
ಸಂದೇಶ್ ನಾಗರಾಜ್ಗೆ ಭಾರೀ ನಿರಾಸೆ
ಈ ಬಾರಿ ಬಿಜೆಪಿ ಟಿಕೆಟ್ಗಾಗಿ ಪ್ರಯತ್ನಿಸಿದ್ದ ಜೆಡಿಎಸ್ ಸದಸ್ಯ ಸಂದೇಶ್ ನಾಗರಾಜ್(Sandesh Nagaraj)ಗೆ ಭಾರೀ ನಿರಾಸೆ ಉಂಟಾಗಿದೆ. ಮೈಸೂರಿನಿಂದ ಸಂದೇಶ್ ನಾಗರಾಜ್, ಕೋಲಾರದಿಂದ ಸಿ.ಆರ್.ಮನೋಹರ್, ಬೆಳಗಾವಿಯಿಂದ ಲಖನ್ ಜಾರಕಿಹೊಳಿ ಸ್ಪರ್ಧಿಸುತ್ತಾರೆಂದು ಊಹಾಪೋಹಗಳು ಎದ್ದಿದ್ದವು. ಪಕ್ಷದ ತೀರ್ಮಾನದಂತೆ ಬಿಜೆಪಿಯು ದ್ವಿಸದಸ್ಯ ಕ್ಷೇತ್ರಗಳಲ್ಲಿ 1 ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತಿದೆ. ಸಹೋದರ ಲಖನ್ ಜಾರಕಿಹೊಳಿ(Lakhan Jarkiholi)ಗೆ ಟಿಕೆಟ್ ನೀಡುವಂತೆ ನಾನು ಕೇಳುವುದಿಲ್ಲವೆಂದು ಶಾಸಕ ರಮೇಶ ಜಾರಕಿಹೊಳಿ(Ramesh Jarkiholi)ಹೇಳಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.