ಕರ್ನಾಟಕದ ರಾಜಕೀಯದಲ್ಲಿ ಈಗ ಮಾಟ ಮಂತ್ರದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ, ಹೌದು ಇದಕ್ಕೆ ಪೂರಕ ಎನ್ನುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಈಗ ರಾಜಕೀಯ ವಲಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ತಮ್ಮ ರಾಜಕೀಯ ವಿರೋಧಿಗಳು ಮಾಟಮಂತ್ರ ಮಾಡುತ್ತಿದ್ದಾರೆ ಇದಕ್ಕೆ ಪೂರಕ ಎನ್ನುವಂತೆ ಕೇರಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶತ್ರು ಭೈರವಿ ಯಾಗ’ ನಡೆಸಲಾಗುತ್ತಿದೆ.ಈ ಯಾಗದಲ್ಲಿ ಪ್ರಾಣಿಗಳನ್ನು ಬಲಿಕೊಡಲಾಗುತ್ತದೆ ಎಂದು ಅವರು ದೂರಿದ್ದಾರೆ.ಆದರೆ ಇದೆಲ್ಲವನ್ನೂ ಮಾಡುತ್ತಿರುವವರು ಯಾರು ಎನ್ನುವುದನ್ನು ಅವರು ಸ್ಪಷ್ಟಪಡಿಸಲಿಲ್ಲ.


COMMERCIAL BREAK
SCROLL TO CONTINUE READING

ಮಾಟಮಂತ್ರದ ಯಾಗದಲ್ಲಿ ಕೆಲವು ಅಘೋರಿಗಳು ಭಾಗಿಯಾದ್ದಾರೆ, ಈ ಮಾಟಮಂತ್ರಕ್ಕಾಗಿ 21 ಕೆಂಪು ಮೇಕೆ, ಮೂರು ಎಮ್ಮೆ, 21 ಕಪ್ಪು ಕುರಿ, ಐದು ಹಂದಿಗಳನ್ನು ಕರೆತಂದಿರುವ ಮಾಹಿತಿ ಬಂದಿದ್ದು, ಇವುಗಳನ್ನು ಬಲಿ ನೀಡಲಾಗುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.


ಕರ್ನಾಟಕ ರಾಜಕೀಯದ ಮೇಲೆ ಮೂಢನಂಬಿಕೆಯ ಛಾಯೆ


ಕರ್ನಾಟಕದ ರಾಜಕೀಯದಲ್ಲಿ ಮೂಢನಂಬಿಕೆಯ ಛಾಯೆ ಇಂದು ನಿನ್ನೆಯದಲ್ಲ, ಆಗ ಸಿಎಂ ಆಗಿದ್ದ ಜೆ.ಎಚ್ ಪಟೇಲ್ ಚುನಾವಣೆಯಲ್ಲಿ ಸೋತ ನಂತರ ವಿಧಾನ ಸಭೆಯಲ್ಲಿನ ದಕ್ಷಿಣದ್ವಾರ ಬಾಗಿಲನ್ನು ಶಾಪಗ್ರಸ್ತವೆಂದು ಭಾವಿಸಿ ಬಾಗಿಲನ್ನು ಮುಚ್ಚಿದ್ದರು. ಇದಾದ ನಂತರ ಸುಮಾರು 25 ವರ್ಷಗಳ ಕಾಲ ಇದಕ್ಕೆ ಬೀಗ ಹಾಕಲಾಗಿತ್ತು.ನಂತರ ಬಂದಂತಹ ಮುಖ್ಯಮಂತ್ರಿಗಳು ಸಹ ಈ ಬಾಗಿಲನ್ನು ಯಾರು ಬಳಸುತ್ತಾರೋ ಅವರು ಮುಂದಿನ ಚುನಾವಣೆಯಲ್ಲಿ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ ಎನ್ನುವ ಮೂಢನಂಬಿಕೆ ಗಾಢವಾಗಿತ್ತು.ಹಾಗಾಗಿ ಈ ಬಾಗಿಲನ್ನು ಅಪಶಕುನವೆಂದು ಭಾವಿಸಿ ಈ ಬಾಗಿಲನ್ನು ತೆರೆಯುವ ಸಾಹಸ ಮಾಡಿರಲಿಲ್ಲ.ಆದರೆ ಜೂನ್ 2023 ರಲ್ಲಿ ಸಿಎಂ ಸಿದ್ದರಾಮಯ್ಯ ಅಂತಿಮವಾಗಿ ಆ ಬಾಗಿಲನ್ನು ತೆರೆದರು.ಅಂದು ಶನಿವಾರವಾಗಿದ್ದರಿಂದ ಅದು ಶನಿದೇವನ ವಾರ ಎಂದು ಭಾವಿಸಿ ಆ ದಿನವನ್ನು ಬಾಗಿಲು ತೆರೆಯಲು ಆಯ್ಕೆ ಮಾಡಿಕೊಂಡಿದ್ದರು.


ಕೇವಲ ಇಷ್ಟೇ ಅಲ್ಲದೆ ಕಳೆದ ವರ್ಷ ವಿಧಾನಸಭಾ ಚುನಾವಣೆ ವೇಳೆ ಹಲವು ಅಭ್ಯರ್ಥಿಗಳು ಮೂಢನಂಬಿಕೆ, ಮಾಟಮಂತ್ರದ ಮೊರೆ ಹೋಗಿದ್ದರು.ನಾಮನಿರ್ದೇಶನ ಸಲ್ಲಿಸುವ ಮೊದಲು ಹಲವು ತಂತ್ರಿಗಳು ಅಘೋರಿಗಳ ಸಹಾಯವನ್ನು ಸಹ ಪಡೆದಿದ್ದರು.2011ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಅಂದಿನ ಸಿಎಂ ಬಿಎಸ್ ಯಡಿಯೂರಪ್ಪ ಅವರು ತಮ್ಮ ವಿರೋಧಿಗಳು ತಂತ್ರ-ಮಂತ್ರದಲ್ಲಿ ತೊಡಗಿದ್ದರು ಹೇಳಿಕೆ ನೀಡಿದ್ದರು.ಇದನ್ನು ಹೋಗಲಾಡಿಸಲು ಅವರು ನದಿಯಲ್ಲಿ ಹಲವು ರೀತಿಯ ಪೂಜಾ ಕಾರ್ಯಗಳಿಗೆ ಮೊರೆಹೊಗಿದ್ದರು.


ಕರ್ನಾಟಕದಲ್ಲಿ ಮೂಢನಂಬಿಕೆ ವಿರುದ್ಧದ ಕಾನೂನು


ಕರ್ನಾಟಕದಲ್ಲಿ ಮೂಢನಂಬಿಕೆಗೆ ಸಂಬಂಧಿಸಿದ ಸಂಪ್ರದಾಯಗಳು ಚಾಲ್ತಿಯಲ್ಲಿವೆ. ಅದರಲ್ಲಿ ಪ್ರಮುಖವಾಗಿ ದೇವಾಲಯಗಳಲ್ಲಿ ಮಡೆ ಸ್ನಾನ ಹಾಗೂ ಉರಿಯುತ್ತಿರುವ ಬೆಂಕಿಯ ಮೇಲೆ ನಡೆಯುವುದು ಮತ್ತು ದೇವಾಲಯದ ಛಾವಣಿಯಿಂದ ಬಟ್ಟೆಗಳ ಮೇಲೆ ಮಕ್ಕಳನ್ನು ಎಸೆಯುವುದು ಸೇರಿವೆ.2014ರಲ್ಲಿ ಸಿದ್ದರಾಮಯ್ಯ ಸರ್ಕಾರ ಮಡೆ ಸ್ನಾನ, ಮಾಟಮಂತ್ರ ಸೇರಿದಂತೆ ಹಲವು ಆಚರಣೆಗಳನ್ನು ನಿಷೇಧಿಸಲು ಮುಂದಾಗಿತ್ತು. ಆಗ ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಮಸೂದೆಯನ್ನು 2017 ರಲ್ಲಿ ವಿಧಾನಸಭೆ ಅಂಗೀಕರಿಸಿತು, ಆದರೆ ಅದು ಮುಂದಿನ ಮೂರು ವರ್ಷಗಳವರೆಗೆ ಜಾರಿಗೆ ಬಂದಿಲ್ಲ. ಅಂತಿಮವಾಗಿ ಈ ಕಾನೂನನ್ನು ಜನವರಿ 2020 ರಿಂದ ಜಾರಿಗೆ ತರಲಾಯಿತು.


ಈ ಕಾನೂನಿನ ಅಡಿಯಲ್ಲಿ, ಯಾವುದೇ ರೀತಿಯ ಮಾಟಮಂತ್ರ, ಅಮಾನವೀಯ ಕೃತ್ಯಗಳು ಮತ್ತು ಚಿನ್ನದ ನಿಧಿ ಹುಡುಕುವ ಅಭ್ಯಾಸಗಳು, ದೈಹಿಕ ಮತ್ತು ಲೈಂಗಿಕ ಕಿರುಕುಳ ಸೇರಿದಂತೆ ತಾಂತ್ರಿಕ ಕಾರ್ಯಗಳು, ಜನರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವ ಅಭ್ಯಾಸಗಳು, ಅಮಾನವೀಯ ಕೃತ್ಯಗಳನ್ನು ಪ್ರೋತ್ಸಾಹಿಸುವುದನ್ನು ನಿಷೇಧಿಸಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.