ಸಿಐಡಿ ನೋಟಿಸ್ ಕೊಟ್ರು ಪ್ರಿಯಾಂಕ್ ಖರ್ಗೆ ಡೋಂಟ್ ಕೇರ್: ವಿಚಾರಣೆಗೆ ಗೈರಾದ ಮಾಜಿ ಸಚಿವ
ವಿಚಾರಣೆಗೆ ಗೈರಾಗಿರುವ ಪ್ರಿಯಾಂಕ್ ಖರ್ಗೆಗೆ ಮತ್ತೆ ಸಿಐಡಿ ನೋಟಿಸ್ ಕೊಟ್ಟು ಸಾಕ್ಷ್ಯಧಾರಗಳನ್ನು ನೀಡುವಂತೆ ಕೇಳುವ ಸಾಧ್ಯತೆ ಇದೆ.
ಬೆಂಗಳೂರು: 545 ಪಿಎಸ್ಐ ಹುದ್ದೆ ನೇಮಕಾತಿ ಅಕ್ರಮದ ಬಗ್ಗೆ ಸುದ್ದಿಗೋಷ್ಟಿ ನಡೆಸಿದ್ದ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಕ್ರಮದ ಬಗ್ಗೆ ಆಡಿಯೋ ಬಿಡುಗಡೆ ಮಾಡಿದ್ದರು. PSI ಹುದ್ದೆಗಳ ನೇಮಕಾತಿ ಅಕ್ರಮದ ಬಗ್ಗೆ ತನ್ನ ಬಳಿ ಸಾಕ್ಷ್ಯ ಇದೆ ಎಂದಿದ್ದರು.
ಸೋಮವಾರ ಬೆಳಗ್ಗೆ 11.30ಕ್ಕೆ ಸಿಐಡಿ ಕಚೇರಿಗೆ ಬಂದು ತಮ್ಮ ಬಳಿಯಿರುವ ಸಾಕ್ಷಿ ಮತ್ತು ದಾಖಲೆಗಳನ್ನು ಒದಗಿಸುವಂತೆ ಪ್ರಿಯಾಂಕ್‍ಗೆ ನೋಟಿಸ್ ನೀಡಲಾಗಿತ್ತು. ಆದರೆ ಮಾಜಿ ಸಚಿವ ಪ್ರಿಯಾಂಕ್ ಮಾತ್ರ ಸಿಐಡಿ ಕಚೇರಿಯತ್ತ ಮುಖ ಮಾಡಿಲ್ಲ. ಮಾಹಿತಿ ನೀಡಿದವರಿಗೆ ನೋಟಿಸ್ ಕೋಡ್ತಿರಾ ಅಂತಾ ಬಿಜೆಪಿ ಸರ್ಕಾರದ ವಿರುದ್ಧ ಪ್ರಿಯಾಂಕ್ ಕೆಂಡ ಕಾರಿದ್ದಾರೆ.
ಕಾಂಗ್ರೆಸ್ ಇಬ್ಭಾಗವಾಗಲಿದೆ; ಬಿಜೆಪಿಗೆ ರಾಜ್ಯದಲ್ಲಿ ಮತ್ತೆ ಅಧಿಕಾರದ ಯೋಗ- ನಳಿನ್‍ಕುಮಾರ್ ಕಟೀಲ್
ವಿಚಾರಣೆಗೆ ಗೈರಾಗಿರುವ ಪ್ರಿಯಾಂಕ್ ಖರ್ಗೆಗೆ ಮತ್ತೆ ಸಿಐಡಿ ನೋಟಿಸ್ ಕೊಟ್ಟು ಸಾಕ್ಷ್ಯಧಾರಗಳನ್ನು ನೀಡುವಂತೆ ಕೇಳುವ ಸಾಧ್ಯತೆ ಇದೆ. ಮತ್ತೊಂದು ಕಡೆ ಇಂದು ಸಹ ಸಿಐಡಿಯಲ್ಲಿ 50 ಅಭ್ಯರ್ಥಿಗಳ ಸರಣಿ ವಿಚಾರಣೆ ನಡೆಸಲಾಗಿದೆ. ಕೆಲ ಅಭ್ಯರ್ಥಿಗಳು ಹಣ ಕೊಟ್ಟು ಪಟ್ಟಕ್ಕೆ ಏರಿದ್ರೆ. ಇನ್ನೂ ಕೆಲ ಪ್ರತಿಭಾವಂತರು ಮೂಲೆ ಗುಂಪಾಗುವಂತಾಗಿದೆ. ಈ ಪ್ರಕರಣದಲ್ಲಿ ದೊಡ್ಡ ದೊಡ್ಡ ತಿಮಿಂಗಲಗಳ ಹೆಸರು ತಳಕು ಹಾಕಿಕೊಳ್ತಿದೆ. ಕೆಲ ಪ್ರಭಾವಿಗಳು ಅಂದರ್ ಆಗಿದ್ರೆ, ಮೇನ್ ಕಿಂಗ್ ಪಿನ್ ದಿವ್ಯಾ ಹಾಗರಗಿ ತಲೆಮರೆಸಿಕೊಂಡಿದ್ದಾಳೆ. ಈಗಾಗಲೇ ಅಫಜಲಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಂತೇಶ್ ಪಾಟೀಲ್ ಮತ್ತು ಅವರ ಸಹೋದರ ರುದ್ರಗೌಡ ಪಾಟೀಲ್ ಸೇರಿದಂತೆ ಅನೇಕರನ್ನು ಸಿಐಡಿ ಪೊಲೀಸರು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಕಳೆದ ಒಂದು ವಾರದಿಂದ ದಿವ್ಯಾ ಹಾಗರಗಿ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿದ್ದಾರೆ.
ದಿವ್ಯಾ ಹಾಗರಗಿ ಒಡೆತನದ ಜ್ಞಾನಜೋತಿ ಶಾಲೆಯಲ್ಲಿಯೇ ಅಕ್ರಮ ನಡೆದಿತ್ತು. ಇದೇ ಪರೀಕ್ಷಾ ಕೇಂದ್ರದಲ್ಲಿ 11ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮವಾಗಿ ಪರೀಕ್ಷೆ ಬರೆದಿದ್ದರು. ಕಳೆದ ಒಂದು ವಾರದಿಂದ ರಾಜ್ಯ, ನೆರೆ ರಾಜ್ಯಗಳಲ್ಲಿ ದಿವ್ಯಾರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆದರೆ, ಫೋನ್ ಸ್ವಿಚ್ ಆಫ್ ಮಾಡಿಕೊಂಡಿರೋ ದಿವ್ಯಾ ಹಾಗರಗಿ ಖಾಕಿಪಡೆಯ ಕೈಗೆ ಸಿಗದೆ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: Umesh Katti : ಸಿದ್ದರಾಮಯ್ಯಗೆ ತಲೆ ಕೆಟ್ಟಿದೆ : ಸಚಿವ ಉಮೇಶ ಕತ್ತಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.