ಚಾಮರಾಜನಗರ : ಸುವರ್ಣಾವತಿ ನದಿ ಉಕ್ಕೇರಿದ ಪರಿಣಾಮ ಯಳಂದೂರು  ಪಟ್ಟಣ ಮತ್ತು ತಾಲೂಕಿನ ಹಲವು ಭಾಗ ತತ್ತರಿಸಿ ಹೋಗಿದ್ದು ಹಲವು ಕಟ್ಟಡಗಳು ಜಲಾವೃತವಾಗಿದೆ.


COMMERCIAL BREAK
SCROLL TO CONTINUE READING

ನಸುಕಿನಲ್ಲಿ ಮನೆಯಿಂದ ಹೊರ ಬಂದ ಜನರು ನೀರು ಹೆದ್ದಾರಿಯಲ್ಲಿ ತುಂಬಿ ಹರಿಯುತ್ತಿರುವುದನ್ನು ಕಂಡು ಅವಕ್ಕಾದರು. ರಾಜ ಕಾಲುವೆ, ಕಚೇರಿಗಳು, ಜಲಾವೃತವಾಗಿದ್ದು ವಾಹನಗಳು ತುಂಬಿ ಹರಿಯುತ್ತಿದ್ದ ನೀರಿನ ನಡುವೆ ಸಾಗುತ್ತಿದ್ದ ದೃಶ್ಯ ಕಂಡು ಬಂದಿದೆ. ಅಗರದಿಂದ  ಉತ್ತಂಬಳ್ಳಿ ಹೋಗುವ ಸಂಪರ್ಕ ಕಡಿತಗೊಂಡಿದೆ. 


ಇದನ್ನೂ ಓದಿ : Video : ತನ್ನ ಕ್ಷೇತ್ರವೇ ಮಳೆಯಲ್ಲಿ ಕೊಚ್ಚಿ ಹೋಗ್ತಿದ್ರೂ ಜನರನ್ನು ದೋಸೆ ಸವಿಯಲು ಕರೆಯುತ್ತಿರುವ ಸಂಸದ ತೇಜಸ್ವಿ ಸೂರ್ಯ


ಯಳಂದೂರಿನಲ್ಲಿರುವ ವಲಯ ಅರಣ್ಯ ಇಲಾಖೆ, ಚೆಸ್ಕಾಂ ಇಲಾಖೆ, ಪದವಿಪೂರ್ವ ಕಾಲೇಜು, ಮಾರಮ್ಮನ ದೇವಾಲಯ, ಪೊಲೀಸ್ ವಸತಿ ಗೃಹ, ಸಮಾಜ ಕಲ್ಯಾಣ ಇಲಾಖೆ, ಪ್ರವಾಸಿ ಮಂದಿರ ಪ್ರವಾಸಿ ಮಂದಿರದ ವಸತಿಗೃಹ ಸಂಪೂರ್ಣ ಜಲಾವೃತಗೊಂಡಿದ್ದು ಯಾರೂ ಕಾಲಿಡಲಾಗದ ಸ್ಥಿತಿ ಇದೆ.


ಮಾಂಬಳ್ಳಿ ಠಾಣೆ ಮುಳುಗಡೆಯಾಗಿದ್ದು, ತೆಪ್ಪದ ಮೂಲಕ ಸಿಬ್ಬಂದಿ ಹೊರಕ್ಕೆ:


ಮಾಂಬಳ್ಳಿ ಠಾಣೆ ಸಂಪೂರ್ಣ ಮುಳುಗಡೆಯಾಗಿದ್ದು ತೆಪ್ಪದ ಮೂಲಕ ಪಿಎಸ್ಐ ಸೇರಿದಂತೆ ಸಿಬ್ಬಂದಿ ತೆಪ್ಪದ ಮೂಲಕ ಠಾಣೆಯಿಂದ ಹೊರಬಂದಿದ್ದಾರೆ.  ಇನ್ನು , ಠಾಣೆಯಲ್ಲಿಟ್ಟಿದ್ದ ಕಡತಗಳನ್ನು ಮೊದಲನೇ ಅಂತಸ್ತಿನಲ್ಲಿಡಲಾಗಿದೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ : ಬಡಾವಣೆಗಳು ಜಲಾವೃತ, ಕಾಂಗ್ರೆಸ್ ಸರ್ಕಾರದ ದುರಾಡಳಿತದ ಫಲ : ಸಿಎಂ ಬೊಮ್ಮಾಯಿ



ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.