ಬೆಂಗಳೂರು: ಕರ್ನಾಟಕದಲ್ಲಿ ಭಾನುವಾರ 34,047 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರಿನಲ್ಲಿ 21,071 ಮತ್ತು ಏಳು ಸಾವುಗಳು ಸೇರಿವೆ.ಕಳೆದ 24 ಗಂಟೆಗಳಲ್ಲಿ ರಾಜ್ಯದ ಪಾಸಿಟಿವಿಟಿ ಪ್ರಮಾಣ ಶೇ.19.29ಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕಾಗಿ ಕೇಂದ್ರ ಸರ್ಕಾರ ದೇಶದ ಕ್ಷಮೆ ಕೇಳಬೇಕು-ಸಿದ್ಧರಾಮಯ್ಯ


ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಾರ, ರಾಜ್ಯದಲ್ಲಿ 34,047 ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,97,982 ಕ್ಕೆ ತಲುಪಿದೆ.ಕಳೆದ 24 ಗಂಟೆಗಳಲ್ಲಿ ಒಟ್ಟು 5,902 ಜನರು ವೈರಸ್‌ನಿಂದ ಚೇತರಿಸಿಕೊಂಡಿದ್ದಾರೆ.ಇಲ್ಲಿಯವರೆಗೆ 479 ಓಮಿಕ್ರಾನ್ ರೂಪಾಂತರ ಪ್ರಕರಣಗಳು ವರದಿಯಾಗಿವೆ.


ಡಿ.ಕೆ.ಶಿವಕುಮಾರ್ ಈ ರೀತಿ ಬೇಜವಾಬ್ದಾರಿಯ ಹೇಳಿಕೆ ಕೊಡುವುದು ಸರಿಯಲ್ಲ: ಸಚಿವ ಅಶ್ವತ್ಥ ನಾರಾಯಣ


ಬೆಂಗಳೂರು ನಗರದಲ್ಲಿ 21,071 ಹೊಸ ಪ್ರಕರಣಗಳು ಮತ್ತು ಐದು ಸಾವುಗಳು, ಮೈಸೂರಿನಲ್ಲಿ 1,892 ಹೊಸ ಕೋವಿಡ್ 19 ಪ್ರಕರಣಗಳು ಮತ್ತು ತುಮಕೂರಿನಲ್ಲಿ 1,373 ಹೊಸ ಪ್ರಕರಣಗಳು ವರದಿಯಾಗಿವೆ. ದಕ್ಷಿಣ ಕನ್ನಡದಲ್ಲಿ ಇಬ್ಬರು, ಹಾಸನ, ಕಲಬುರ್ಗಿ, ಮಂಡ್ಯ, ರಾಮನಗರ, ಮೈಸೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: ಪ್ರಧಾನಿ ಕಿವಿಮಾತಿಗೆ ತಲೆದೂಗಿದ ರಾಜ್ಯ ಸರ್ಕಾರಗಳು: 'Lockdown' ಪದ ಬಳಕೆಯಿಂದ ದೂರ


ಕರ್ನಾಟಕದಲ್ಲಿ ಪ್ರಸ್ತುತ 1,97,982 ಸಕ್ರಿಯ ಕೋವಿಡ್ 19 ರೋಗಿಗಳಿದ್ದಾರೆ. ಬೆಂಗಳೂರು ನಗರ ಜಿಲ್ಲೆಯೊಂದರಲ್ಲೇ 1,46,200 ಸಕ್ರಿಯ ಕೋವಿಡ್ 19 ಪ್ರಕರಣಗಳಿದ್ದು, ಮೈಸೂರಿನಲ್ಲಿ 5,603 ಮತ್ತು ತುಮಕೂರಿನಲ್ಲಿ 5,357 ಪ್ರಕರಣಗಳಿವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.