ಬೆಂಗಳೂರು: ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 39,047 ಕೊರೊನಾ ಪ್ರಕರಣಗಳೊಂದಿಗೆ ಹೊಸ ಸಾರ್ವಕಾಲಿಕ ದಾಖಲೆಯನ್ನು ನಿರ್ಮಿಸಿದೆ,ಆ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 14.39 ಲಕ್ಷಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.ಇನ್ನೊಂದೆಡೆಗೆ ಬೆಂಗಳೂರಿನಲ್ಲಿ ಒಟ್ಟು 22, 596 ಪ್ರಕರಣಗಳು ಕಳೆದ 22 ಗಂಟೆಗಳಲ್ಲಿ ದಾಖಲಾಗಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ -ಮಹಾರಾಷ್ಟ್ರದಲ್ಲಿ 15 ದಿನಗಳವರೆಗೆ ಲಾಕ್ ಡೌನ್ ವಿಸ್ತರಣೆ


ಕರ್ನಾಟಕದಲ್ಲಿ ಈಗ ಮೂರು ಲಕ್ಷಕ್ಕೂ ಹೆಚ್ಚು ಸಕ್ರಿಯ ಪ್ರಕರಣಗಳಿವೆ,ಅದರಲ್ಲಿ ಎರಡು ಲಕ್ಷ ಪ್ರಕರಣಗಳು ಬೆಂಗಳೂರಿನಲ್ಲಿವೆ.ಕರೋನವೈರಸ್ ರೋಗಿಗಳಿಗೆ ಲಭ್ಯವಿರುವ ಹಾಸಿಗೆಗಳ ಸಂಖ್ಯೆಯು ಬೇಡಿಕೆಗೆ ಅನುಗುಣವಾಗಿರದ ಬೆಂಗಳೂರಿನ ಪರಿಸ್ಥಿತಿಯನ್ನು ಕರ್ನಾಟಕ ಹೈಕೋರ್ಟ್ ಆತಂಕಕಾರಿ ಎಂದು ಕರೆದಿದೆ. ಹಿಂದಿನ ದಿನ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರು ಸೋಂಕಿನ ಸರಪಳಿಯನ್ನು ಮುರಿಯಲು ನಿಯಮಗಳನ್ನು ಪಾಲಿಸಬೇಕೆಂದು ಜನರಿಗೆ ಮನವಿ ಮಾಡಿದರು.


ಇದನ್ನೂ ಓದಿ - Pulse Oximeter: ಆಕ್ಸಿಮೀಟರ್ ಸಿಗುತ್ತಿಲ್ಲವೇ? ಚಿಂತಿಸಬೇಡಿ, ಇಲ್ಲಿದೆ ಅಗ್ಗದ ಆಯ್ಕೆ


"ಕೋವಿಡ್ ವೈರಸ್ ಸರಪಳಿಯನ್ನು ಮುರಿಯಲು 2 ವಾರಗಳ ಕಟ್ಟುನಿಟ್ಟಿನ ನಿಯಮಗಳು ಪ್ರಾರಂಭವಾಗಿವೆ. ಎಲ್ಲರಿಗೂ ನನ್ನ ಮನವಿ ಏನೆಂದರೆ : ಮಾರ್ಗಸೂಚಿಗಳನ್ನು ಅನುಸರಿಸಿ, ಸರ್ಕಾರದೊಂದಿಗೆ ಸಹಕರಿಸಿ, ಮನೆಯೊಳಗೆ ಇರಿ ಮತ್ತು ತುರ್ತು ಪರಿಸ್ಥಿತಿಯಲ್ಲಿದ್ದರೆ ಮಾತ್ರ ಹೊರಗುಳಿಯಿರಿ. ಒಟ್ಟಾಗಿ, ನಾವೆಲ್ಲರೂ ಕೋವಿಡ್ ಅನ್ನು ಸೋಲಿಸಬಹುದು "ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.


COVID-19 ಹರಡುವಿಕೆಯನ್ನು ನಿಯಂತ್ರಿಸಲು ಕರ್ನಾಟಕದಲ್ಲಿ ಮಂಗಳವಾರ ರಾತ್ರಿ 14 ದಿನಗಳ ಲಾಕ್‌ಡೌನ್ ಜಾರಿಗೆ ಬಂದಿತು.ಒಂದೇ ದಿನದಲ್ಲಿ 30,000 ಕೋವಿಡ್ -19 ಪ್ರಕರಣಗಳನ್ನು ರಾಜ್ಯ ವರದಿ ಮಾಡಿದ ದಿನವೇ ಲಾಕ್‌ಡೌನ್ ವಿಧಿಸಲಾಗಿದೆ. ಕರ್ನಾಟಕದಲ್ಲಿ ಮಂಗಳವಾರ 31,000 ಕ್ಕೂ ಹೆಚ್ಚು ಕರೋನವೈರಸ್ ಪ್ರಕರಣಗಳು ವರದಿಯಾಗಿವೆ.


ಇದನ್ನೂ ಓದಿ - ಕರೋನಾ ಎರಡನೇ ಅಲೆಯಿಂದ ಬಚಾವಾಗಲು ಏನು ತಿನ್ನಬೇಕು ಏನು ತಿನ್ನಬಾರದು? ಏನು ಹೇಳುತ್ತೆ WHO


ಏತನ್ಮಧ್ಯೆ, 18-44 ವರ್ಷದೊಳಗಿನ ಜನಸಂಖ್ಯೆಯ ಲಸಿಕೆಗಾಗಿ ರಾಜ್ಯ ಸರ್ಕಾರವು ಒಂದು ಕೋಟಿ ಡೋಸ್ COVID-19 ಲಸಿಕೆಗಳಿಗೆ ಆದೇಶ ನೀಡಿದೆ. ತಯಾರಕರ ಸರಬರಾಜಿನ ವೇಳಾಪಟ್ಟಿಯನ್ನು ಸ್ವೀಕರಿಸಿದ ನಂತರ 18-44 ವರ್ಷಗಳ ಮೂರನೇ ಹಂತದ COVID-19 ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.