ಬೆಂಗಳೂರು:ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಜಾಗರಣಾ ಮಂಚ್ ಸೋಮವಾರ ಕನಕಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ 114 ಅಡಿ ಎತ್ತರದ ಜೀಸಸ್ ಕ್ರಿಸ್ಟ್ ಪ್ರತಿಮೆಯ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಈ ಹಿಂದೂ ಸಂಘಟನೆಗಳ ವಿರೋಧ ಪ್ರದರ್ಶನದ ಹಿನ್ನೆಲೆ ನಗರದಲ್ಲಿ ಬಿಗುವಿನ ವಾತಾವರಣ ಮನೆಮಾಡಿದೆ. ಇದನ್ನು ಮನಗಂಡ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಇಲ್ಲಿ ಸುಮಾರು1000 ಪೋಲೀಸರನ್ನು ನಿಯೋಜಿಸಿದೆ.


COMMERCIAL BREAK
SCROLL TO CONTINUE READING

ಕನಕಪುರದಲ್ಲಿ ನಿರ್ಮಾಣಗೊಳ್ಳುತ್ತಿರುವ ಯೇಸು ಕ್ರಿಸ್ತನ ಪ್ರತಿಮೆಯ ಹಿನ್ನೆಲೆ ಬಿಜೆಪಿ-RSS ವಿರೋಧ ಪ್ರದರ್ಶನ ನಡೆಸುತ್ತಿದ್ದು,  ನಗರದಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣಗೊಂಡಿದೆ. ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಅವರು ಯೇಸು ಕ್ರಿಸ್ತನ ಈ ಪ್ರತಿಮೆ ನಿರ್ಮಾಣ ಮಾಡಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.



ಈ ಪ್ರತಿಭಟನೆಯ ಅಂಗವಾಗಿ BJP-RSS ಜಂಟಿಯಾಗಿ 'ಚಲೋ ಕನಕಪುರ'ಗೆ ಚಳುವಳಿ ಹಮ್ಮಿಕೊಂಡಿವೆ. BJPಯ ಈ ಪ್ರತಿಭಟನೆಯ ಹಿನ್ನೆಲೆ ಕನಕಪುರದಲ್ಲಿ ಸದ್ಯ ಕೂಡ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ಕುರಿತು ಹೇಳಿಕೆ ನೀಡಿರುವ ಕನಕಪುರದ ಶಾಸಕ ಡಿ.ಕೆ ಶಿವಕುಮಾರ, ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ 114 ಅಡಿ ಎತ್ತರದ ಯೇಸು ಕ್ರಿಸ್ತನ ಪ್ರತಿಮೆ ನಿರ್ಮಾಣದ ನಿರ್ಣಯ ತಮ್ಮದಲ್ಲ ಹಾಗೂ ಕ್ರೈಸ್ತ ಸಮುದಾಯಕ್ಕೆ ಸೇರಿದ ಗ್ರಾಮಸ್ಥರು ಈ ಮೂರ್ತಿಯನ್ನು ನಿರ್ಮಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಕೇವಲ ಓರ್ವ ಶಾಸಕನಾಗಿ ತಾವು ಅವರಿಗೆ ಸಹಾಯ ಒದಗಿಸುತ್ತಿರುವುದಾಗಿ ಹೇಳಿದ್ದಾರೆ. ಪ್ರತಿಮೆ ನಿರ್ಮಾಣಕ್ಕೆ ಜಿಲ್ಲಾಡಳಿತದ ವತಿಯಿಂದ ಭೂಮಿ ನೀಡಲಾಗಿದ್ದು, ಎಲ್ಲ ಪ್ರಕ್ರಿಯೆಗಳನ್ನು ಕಾನೂನಾತ್ಮಕವಾಗಿ ಪೂರ್ಣಗೊಳಿಸಲಾಗಿದೆ ಎಂದು ಡಿಕೆಶಿ ಹೇಳಿದ್ದಾರೆ.