Karnataka SSLC Result 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) 10 ನೇ ತರಗತಿಯ ಪರೀಕ್ಷೆಗಳ ಫಲಿತಾಂಶಗಳನ್ನು ಇಂದು ಮೇ 9, 2024 ರಂದು ಬೆಳಿಗ್ಗೆ 10:30 ಕ್ಕೆ ಪ್ರಕಟಿಸಲಾಗುತ್ತದೆ. ಫಲಿತಾಂಶಗಳು ಪ್ರಕಟವಾದ ನಂತರ, SSLC 10 ನೇ ತರಗತಿ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ - karresults.nic.in ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ನೋಡಬಹುದಾಗಿದೆ.


COMMERCIAL BREAK
SCROLL TO CONTINUE READING

Karnataka SSLC Result 2024 : ಹೇಗಿತ್ತು ಈ ಹಿಂದೆ ಈ ಜಿಲ್ಲೆಗಳ ಶೇಕಡಾವಾರು ಉತೀರ್ಣ ಫಲಿತಾಂಶ..? (Pass Percentage Over The Years)


ಕಳೆದ ವರ್ಷ (2022-2023), ಎಸ್‌ಎಸ್‌ಎಲ್‌ಸಿ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಮಾರ್ಚ್ 31 ರಿಂದ ಜೂನ್ 19 ರವರೆಗೆ ನಡೆದವು ಮತ್ತು ಫಲಿತಾಂಶಗಳನ್ನು ಮೇ 8 ರಂದು ಪ್ರಕಟಿಸಲಾಯಿತು. ಈ ವರ್ಷ ಒಟ್ಟಾರೆ ಉತ್ತೀರ್ಣ ಶೇಕಡಾ 83.89 ರಷ್ಟಿತ್ತು. 2021-2022 ರ ಹಿಂದಿನ ಶೈಕ್ಷಣಿಕ ವರ್ಷದಲ್ಲಿ, ಮಾರ್ಚ್ 28 ರಿಂದ ಏಪ್ರಿಲ್ 11 ರವರೆಗೆ ಪರೀಕ್ಷೆಗಳನ್ನು ನಡೆಸಲಾಯಿತು ಮತ್ತು ಮೇ 19 ರಂದು ಫಲಿತಾಂಶಗಳನ್ನು ಪ್ರಕಟಿಸಲಾಯಿತು, ಒಟ್ಟು ಶೇಕಡಾ 85.63 ರಷ್ಟು ತೇರ್ಗಡೆಯಾಗಿದೆ. 2021 ರಲ್ಲಿ, ಅಚ್ಚರಿ ಎನ್ನುವಂತೆ ಶೇ 99.99 ರಷ್ಟು ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.


ಇದನ್ನೂ ಓದಿ: Lok Sabha Election 2024: ಹಸೆಮಣೆ ಏರುವ ಮುನ್ನ ವೋಟ್​ ಮಾಡಿ ಹಕ್ಕು ಚಲಾಯಿಸಿದ ವಧು!!


2023 ರಲ್ಲಿ, ಒಟ್ಟು 8,35,102 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಅವರಲ್ಲಿ 7,00,619 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಚಿತ್ರದುರ್ಗ ಜಿಲ್ಲೆ ಕರ್ನಾಟಕದಲ್ಲಿ ಶೇ.96.8ರಷ್ಟು ಉತ್ತೀರ್ಣರಾಗುವ ಮೂಲಕ ಅತ್ಯಧಿಕ ಅಂಕ ಗಳಿಸಿದ್ದರೆ, ಮಂಡ್ಯ (ಶೇ.96.7) ಮತ್ತು ಹಾಸನ (ಶೇ.96.6) ನಂತರದ ಸ್ಥಾನದಲ್ಲಿವೆ. ಯಾದಗೀರ್ (ಶೇ. 75.49), ಬೀದರ್ (ಶೇ. 78.73) ಮತ್ತು ಬೆಂಗಳೂರು ದಕ್ಷಿಣ (ಶೇ. 78.95) ಜಿಲ್ಲೆಗಳಲ್ಲಿ ಅತಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.