ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಇಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ನನ್ನ ತಂಡದ ನಾಲ್ಕು ಜನರಿಗೆ‌ ಟಿಕೆಟ್‌ ಸಿಕ್ಕಿದ್ದು‌,‌ ಬಿ.‌ವೈ.ವಿಜಯೇಂದ್ರ ಅವರಿಗೆ ಬೇರೆ ಬೇರೆ ಅವಕಾಶಗಳು ಇವೆ ಎಂದು ಜಗನ್ನಾಥ ಭವನದಲ್ಲಿ ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಡ್ಯಾಮ್‌ ಗೋಡೆ ಮೇಲೆ ಯುವಕನ ಚೆಲ್ಲಾಟ: ಬ್ಯಾಲೆನ್ಸ್‌ ತಪ್ಪಿ ಕೆಳಗೆ ಬಿದ್ದ ದೃಶ್ಯ ನೋಡಿ!


ಕೋರ್ ಕಮಿಟಿ ಸಭೆಯಲ್ಲಿ ವಿಜಯೇಂದ್ರ ಅವರ ಹೆಸರನ್ನು ಸರ್ವ ಸಮ್ಮತಿಯಿಂದ ಶಿಫಾರಸು ಮಾಡಿದ್ದೆವು. ಆದರೆ ಅವರಿಗೆ ಬೇರೆ ಬೇರೆ ಅವಕಾಶಗಳು ಇವೆ. ಹಾಗಾಗಿ ಎಲ್ಲ ಲೆಕ್ಕಾಚಾರಗಳನ್ನು ಹಾಕಿಯೇ ಈಗ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಸದ್ಯ ವಿಜಯೇಂದ್ರ ರಾಜ್ಯದ ಉಪಾಧ್ಯಕ್ಷರು, ಅವರು ಇನ್ನಷ್ಟು ಕಾರ್ಯಗಳನ್ನು ಮಾಡಬೇಕಿದೆ‌. ಅವರ ಹೆಸರನ್ನು ನಮ್ಮ ಕಡೆಯಿಂದ ಘೋಷಣೆ ಮಾಡಲಾಗಿತ್ತು. ಆದರೆ ರಾಷ್ಟ್ರೀಯ ನಾಯಕರು ಎಲ್ಲ ವಿಚಾರಗಳನ್ನು ತಿಳಿದುಕೊಂಡೇ ಯೋಚನೆ ಮಾಡಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವಿಜಯೇಂದ್ರಗೆ ಟಿಕೆಟ್ ಕೈತಪ್ಪಿದ ಬಗ್ಗೆ ವಿವರಿಸಿದರು.


ನಾವು ರಾಜ್ಯದಿಂದ 20 ಹೆಸರುಗಳನ್ನು ಕಳಿಸಿಕೊಟ್ಟಿದ್ದೆವು. ಆದರೆ ನಾಲ್ಕು ಸ್ಥಾನ ಮಾತ್ರ ಇದ್ದಿದ್ದು ಹಾಗಾಗಿ ನಾಲ್ಕು ಜನಕ್ಕೆ ಅವಕಾಶ ಕೊಟ್ಟಿದ್ದಾರೆ. ಒಳ್ಳೆಯ ಮಾನದಂಡದಿಂದ ನಾಲ್ವರ ಆಯ್ಕೆಮಾಡಲಾಗಿದೆ ಮುಂದಿನ ದಿನಗಳಲ್ಲಿ 20 ಜನರಿಗೂ ಅವಕಾಶ ಸಿಗಲಿದೆ ಎಂದರು.


ಲಕ್ಷ್ಮಣ ಸವದಿ ರಾಜ್ಯದ ಉಪಾಧ್ಯಕ್ಷರಾಗಿದ್ದಾರೆ, ಹೇಮಲತಾ ನಾಯಕ್ ಕಾರ್ಯದರ್ಶಿಯಾಗಿದ್ದಾರೆ, ಚಲವಾದಿ ನಾರಾಯಣಸ್ವಾಮಿ ಎಸ್ ಸಿ ಮೋರ್ಚಾ ರಾಜ್ಯಾಧ್ಯಕ್ಷ, ಕೇಶವಪ್ರಸಾದ್ ಕಾರ್ಯದರ್ಶಿ ಮತ್ತು ಪ್ರಭಾರಿಯಾಗಿದ್ದಾರೆ. ನಮ್ಮ ತಂಡದ ನಾಲ್ಕು ಜನ ಇವತ್ತು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆಯಾಗುತ್ತಿರುವುದರಿಂದ ಇದು ಬಹಳ ಸಂತೋಷದ ದಿನವಾಗಿದೆ ಎಂದರು.


ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ್ ಹೊರಟ್ಟಿ ಅವರ ಹೆಸರನ್ನು ಪ್ರಕಟಿಸಿದ್ದಾರೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಬಹಳ ವರ್ಷಗಳ ಅನುಭವ ಇರುವ, ಹಿರಿತನ ಇರುವ ನಾಯಕರು ಹೊರಟ್ಟಿ. ಬಹಳ ವರ್ಷ ಜೆಡಿಎಸ್ ವಿಚಾರಧಾರೆಯಲ್ಕಿದ್ದು, ಈಗ ನಮ್ಮ ವಿಚಾರದಲ್ಲಿ ಬಂದು ನಮ್ಮ ಅಭ್ಯರ್ಥಿಯಾಗಿದ್ದಾರೆ ಎಂದರು.


ಇದನ್ನೂ ಓದಿ: ಕೊನೆ ಕ್ಷಣದಲ್ಲಿ ಬಿಎಸ್‌ವೈ ಪುತ್ರನಿಗೆ ಟಿಕೆಟ್‌ ಮಿಸ್‌... ಕಟೀಲ್‌ ಹೀಗ್ಯಾಕೆ ಹೇಳಿದ್ರು?


ನಮ್ಮ ಅಭ್ಯರ್ಥಿಗಳ ಆಯ್ಕೆಯಲ್ಲಿ ವಿಳಂಬವಾಗಿಲ್ಲ, ನಾವೇನು ಅಭ್ಯರ್ಥಿಗಳ ಹುಡುಕಿ ತರಬೇಕಿರಲಿಲ್ಲ. ನಮಗೆ ಅಂತಹ ಅವಶ್ಯಕತೆಗಳು ಇರಲಿಲ್ಲ.ನಮ್ಮ ರಾಷ್ಟ್ರೀಯ ನಾಯಕರು ಕುಳಿತು ಚರ್ಚೆ ಮಾಡಬೇಕಿತ್ತು ಅದಕ್ಕೆ ಸಮಯ ತೆಗೆದುಕೊಂಡಿದ್ದಾರೆ ಅಷ್ಟೇ. ಈಗ ಘೋಷಣೆ ಮಾಡಿದ್ದಾರೆ. ಇನ್ನೂ ಸಮಯ ಇದೆ,ಇದು ವಿಳಂಬವಲ್ಲ ಎಂದು ಸಮರ್ಥಿಸಿಕೊಂಡರು.


ನಮ್ಮಲ್ಲಿ ಪಕ್ಷಕ್ಕೆ ಸೇರಿದ ನಂತರ ಮೂಲ, ವಲಸಿಗ ಪ್ರಶ್ನೆ ಬರಲ್ಲ. ನಮ್ಮದು ಕುಟುಂಬ ಪರಿವಾರದ ಸಂಕಲ್ಪ ಇರುವ ಪಕ್ಷ. ಕುಟುಂಬದಲ್ಲಿ ಸೊಸೆ ಬಂದರೆ ಅವಳು ಮನೆಯ ಮಗಳೇ ಆಗುತ್ತಾಳೆ, ಅವಳನ್ನ ಪ್ರತ್ಯೇಕವಾಗಿ ಕಾಣುವುದಿಲ್ಲ, ಬರುವವರ ಆಚಾರ-ವಿಚಾರ, ಕಾರ್ಯವೈಕರಿ ನೋಡಿ ಅವಕಾಶ ಕೊಡಲಾಗುತ್ತದೆ ಅದರಂತೆ ಛಲವಾದಿ ನಾರಾಯಣಸ್ವಾಮಿ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದು ವಲಸಿಗರಿಗೆ ಟಿಕೆಟ್ ನೀಡಿರುವುದನ್ನು ಸಮರ್ಥಿಸಿಕೊಂಡರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.