ಬೆಂಗಳೂರು : ಪಂಚರಾಜ್ಯಗಳ ಚುನಾವಣೆ ಫಲಿತಾಂಶ 4 ರಾಜ್ಯಗಳಲ್ಲಿ ಕಮಲ ಅರಳುವ ವಿಶ್ವಾಸ ವ್ಯಕ್ತಪಡಿಸಿ ಸಂಭ್ರಮ ಆಚರಣೆ ಮಾಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರೈತರ ಕಾಯಿದೆ ಬಿಜೆಪಿಗೆ ಮುಳುವಾಯ್ತಾ? ರೈತರ ಪರವಾಗಿ ಬಿಜೆಪಿ ಇದೆ, ರೈತರ ಪ್ರತಿಭಟನೆ ನಮಗೆ ಯಾವುದೇ ಹೊಡೆತ ನೀಡಿಲ್ಲ. ರೈತರೂ ಕೂಡ ನಮ್ಮ ಪರವಾಗಿ ಕೊನೆವರೆಗೂ ಇರಲಿದ್ದಾರೆ ಎಂದರು.


COMMERCIAL BREAK
SCROLL TO CONTINUE READING

ಬಿಜೆಪಿ(BJP) ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮ ನಂತರ ಸುದ್ದಿಗೋಷ್ಠಿಯಲ್ಲಿ ಮಾತನ್ನಾಡಿದ ಇವರು, ನಾಲ್ಕೂ ಕಡೆ ನಮ್ಮದೇ ಸರ್ಕಾರ ಇತ್ತು, ಮತ್ತೆ ನಾಲ್ಕು ಕಡೆ ಅಧಿಕಾರಕ್ಕೆ ಬರಲಿದ್ದೇವೆ.


ಇದನ್ನೂ ಓದಿ : ಪಂಚರಾಜ್ಯಗಳ ಚುನಾವಣೆ: ಪಂಜಾಬ್ ನಲ್ಲೂ ಸಿದ್ದು-ಕರ್ನಾಟಕದಲ್ಲೂ ಸಿದ್ದು; ಕಾಂಗ್ರೆಸ್ ನಾಶ!: ಶೆಟ್ಟರ್


ಪಂಜಾಬ್‌(Punjab Election Result 2022)ನಲ್ಲಿ ಕಾಂಗ್ರೆಸ್ ಇತ್ತು, ಆಪ್ ಬಂದಿದೆ. ದೆಹಲಿ ಬಳಿಕ ಆಪ್ ನಿಧಾನವಾಗಿ ಮೇಲೆಳುತ್ತಿದೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ,ನಮ್ಮದು ರಾಷ್ಟ್ರೀಯ ಪಕ್ಷ, ಪಂಜಾಬ್‌ನಲ್ಲಿ ಇದ್ದದ್ದು ಕಾಂಗ್ರೆಸ್.ನಮಗೆ ಯಾವುದೇ ಸಮಸ್ಯೆ ಆಗಿಲ್ಲ ಎಂದರು.


ಇನ್ನು ಡಿಸೆಂಬರ್‌ನಲ್ಲಿ ಚುನಾವಣೆಗೆ(Election 2022) ಹೋಗುವ ವಿಚಾರಕ್ಕೆ ಉತ್ತರಿಸಿದ ಇವರು,ಹತ್ತಾರು ಜನ ಹತ್ತಾರು ತರ ಕನಸು ಕಾಣ್ತಿದ್ದಾರೆ.ಯಾರ ಕನಸು ನನಸಾಗೋದಿಲ್ಲ.ರಾಜ್ಯದಲ್ಲಿ ಸದ್ಯ ಯಾವುದೇ ನಾಯಕತ್ವ ಬದಲಾವಣೆ ಇಲ್ಲ.ಎಲ್ಲವೂ ಮುಂದುವರೆಯಲಿದೆ ಎಂದರು.


ಇದನ್ನೂ ಓದಿ : Five State Election Results: ಪಂಚರಾಜ್ಯಗಳ ಫಲಿತಾಂಶದ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.