BY vijayendra : ರಾಜಕಾರಣ ಅಂದರೆ ತಂತಿ ಮೇಲೆ ನಡೆದ ಹಾಗೆ : ಬಿವೈ ವಿಜಯೇಂದ್ರ
ಮುಂದೆ ಬರುವ ದಿನದಲ್ಲಿ ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು ಚದುರಂಗದಾಟ ಕೂಡ ಗೊತ್ತಿರಬೇಕು. ಈ ಹಿನ್ನೆಲೆಯಲ್ಲಿ ಆ ಮಾತನ್ನು ಹೇಳಿದ್ದೇನೆ ಎಂದರು.
ಬಾಗಲಕೋಟೆ : ನಿಕಟಪೂರ್ವ ಸಿಎಂ ನಮ್ಮ ತಂದೆ ಸ್ಪಷ್ಟವಾಗಿ ಹೇಳಿದಾರೆ.. ನಾನು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುತ್ತೇನೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕಾರಣದಿಂದ ಹಿಂದೆ ಸರಿದ ವಿಚಾರ ಹೇಳಿದ್ದಾರೆ.
ಇಳಕಲ್ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಬಿವೈ ವಿಜಯೇಂದ್ರ, ನೀವು ಯಾರಾದರೂ ಶಿಕಾರಿಪುರದಲ್ಲಿ ಸ್ಪರ್ಧಿಸ್ತಿರಾ ಎಂದು ಕ್ಷೇತ್ರದ ಮುಖಂಡರನ್ನು ಕೇಳಿದರು.. ಕ್ಷೇತ್ರದ ಜನತೆ ಮುಂದೆ ಹೇಳಿದಾಗ ಜನತೆ, ತಾವೆ ನಿಲ್ಲಬೇಕು ಇಲ್ಲ ನಿಮ್ಮ ಮಗನನ್ನು ನಿಲ್ಲಿಸಿ ಅಂತ ಕ್ಷೇತ್ರದ ಮುಖಂಡರು ,ಕಾರ್ಯಕರ್ತರು ಹೇಳಿದರು. ಆ ಹಿನ್ನೆಲೆ ಪೂಜ್ಯ ತಂದೆಯವರು ನನ್ನ ಬಗ್ಗೆ ಹೇಳಿಕೆ ಕೊಟ್ಟಿದಾರೆ. ಆದರೆ ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಆಯ್ಕೆಯಾಗಬೇಕಾದರೂ. ಅಂತಿಮವಾಗಿ ನಮ್ಮ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರು ತೀರ್ಮಾನ ಮಾಡಬೇಕು. ಮಾನ್ಯ ಯಡಿಯೂರಪ್ಪ ಕೂಡ ಇದನ್ನು ಸ್ಪಷ್ಟವಾಗಿ ಹೇಳಿದಾರೆ. ಹಾಗಾಗಿ ಮುಂದಿನ ದಿನಮಾನದಲ್ಲಿ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ : NavyaShree Rao : ಪೊಲೀಸ್ ವಿಚಾರಣೆಗೆ ಹಾಜರಾಗಿದ ನವ್ಯಶ್ರೀ ರಾವ್..!
ಮರಿ ಯಡಿಯೂರಪ್ಪ ಎಂಬ ತಮ್ಮ ಹೇಳಿಕೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ರಾಜಕಾರಣ ಅಂದರೆ ತಂತಿ ಮೇಲೆ ನಡೆದ ಹಾಗೆ.. ಮುಂದೆ ಬರುವ ದಿನದಲ್ಲಿ ರಾಜಕಾರಣದಲ್ಲಿ ಯಶಸ್ವಿಯಾಗಬೇಕಾದರೆ, ಕಬಡ್ಡಿನೂ ಗೊತ್ತಿರಬೇಕು ಚದುರಂಗದಾಟ ಕೂಡ ಗೊತ್ತಿರಬೇಕು. ಈ ಹಿನ್ನೆಲೆಯಲ್ಲಿ ಆ ಮಾತನ್ನು ಹೇಳಿದ್ದೇನೆ ಎಂದರು.
ಇಂದು ಕರ್ನಾಟಕದಲ್ಲಿ ವಿರೋಧ ಪಕ್ಷದವರು ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಡುತ್ತಿದ್ದಾರೆ. ಬೀದಿನಾಟಕ ಆಗಿ ಪರಿವರ್ತನೆಯಾಗಿದೆ ವಿರೋಧ ಪಕ್ಷದ ನಡುವಳಿಕೆಗಳು. ಅದರಲ್ಲೂ ಕಾಂಗ್ರೆಸ್ ಪಕ್ಷದ ಕಿತ್ತಾಟ. ರಾಜ್ಯದ ಜನ ಇಂದು ಕಾಂಗ್ರೆಸ್ ಸ್ಥಿತಿ ನೋಡಿ ಹಾಸ್ಯ ಮಾಡ್ತಿದ್ದಾರೆ ನಗ್ತಿದ್ದಾರೆ. ಯಡಿಯೂರಪ್ಪ ಬಡವರ ಬಗ್ಗೆ ರೈತರ ಬಗ್ಗೆ ತುಳಿತಕ್ಕೆ ಒಳಗಾದವನ್ನು ಹೇಗೆ ಸಮನಾಗಿ ತೆಗೆದುಕೊಂಡು ಹೋಗ್ತಿದ್ದರೋ.. ಅದೇ ರೀತಿ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : 'ಒಕ್ಕಲಿಗರ ಬಗ್ಗೆ ನಾನು ಎಲ್ಲಿಯೂ ತಪ್ಪು ಮಾತನಾಡಿಲ್ಲ'
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.