ಬೆಂಗಳೂರು : ಕೋವಿಡ್ ರಾಜ್ಯ ಆರ್ಥಿಕ ಸ್ಥಿತಿಗೆ ಮೇಲೆ ಕರಾಳ ಛಾಯೆ ಬೀರಿದ್ದು, ಲಾಕ್ ಡೌನ್ ಹಾಗೂ ಆರ್ಥಿಕ ಚುಟುವಟಿಕೆ ನಿರ್ಬಂಧಗಳಿಂದ ಕಳೆದ ವರ್ಷ ತೆರಿಗೆ ರೂಪದಲ್ಲಿ ರಾಜ್ಯ ಬೊಕ್ಕಸಕ್ಕೆ ಬರುವ ಆದಾಯದಲ್ಲಿ ಇಳಿಕೆ ಕಂಡಿದೆ ಹಾಗೂ ಬದ್ದ ವೆಚ್ಚದಲ್ಲಿ ಏರಿಕೆ ಕಂಡಿದೆ.


COMMERCIAL BREAK
SCROLL TO CONTINUE READING

ಆರ್ಥಿಕ ಸಂಕಷ್ಟದ ನಡುವೆ ಸಿಎಂ ಬಸವರಾಜ್ ಬೊಮ್ಮಾಯಿ(Basavaraj Bommai) ಮೊದಲ ಬಜೆಟ್ ಮಂಡನೆಗೆ ಮುಂದಾಗಿದ್ದಾರೆ. 2023ರ ಚುನಾವಣೆಯ ಹೊಸ್ತಿಲಲ್ಲಿ ಇರುವ ಆಡಳಿತ ಬಿಜೆಪಿ ಸರ್ಕಾರ ಜನಪ್ರಿಯ ಬಜೆಟ್ ನೀಡಲು ಸಿದ್ಧತೆಗಳನ್ನ ನಡೆಸುತ್ತಿದೆ. ಹಾಗಾದರೆ ರಾಜ್ಯ ಆರ್ಥಿಕ ಸ್ಥಿತಿಗತಿ ವರದಿ ಇಲ್ಲಿದೆ..


ಇದನ್ನೂ ಓದಿ : Rama Japa: ಬೆಳಿಗ್ಗೆ ಅಜ್ಹಾನ್ ಮಾದರಿಯಲ್ಲಿ ರಾಮ ಜಪ ಮಾಡಿದ ಕಾಳಿಮಠ ಸ್ವಾಮಿ!


ರಾಜ್ಯದ ಆರ್ಥಿಕ ಸ್ಥಿತಿ ಹೇಗಿದೆ?


2019-20 ಆರ್ಥಿಕ ವರ್ಷದ ಹೋಲಿಕೆಯಲ್ಲಿ 2020-21 ಆರ್ಥಿಕ ಸ್ಥಿತಿ ಸುಧಾರಿಸಿದರೂ, ಈ ಭಾರಿ ತೆರಿಗೆ ಸಂಗ್ರಹ(Tax Collection) ನಿರೀಕ್ಷೆ ಗುರಿ ಮುಟ್ಟಿಲ್ಲ. ಈ ಹಿನ್ನಡೆಗೆ ಮುಖ್ಯ ಕಾರಣ ಮೂರನೇ ಅಲೆಯ ಭೀತಿಯಿಂದ ಮತ್ತೆ ವಿಧಿಸಿದ ನೈಟ್ ಕರ್ಫ್ಯು ಹಾಗೂ ವಾರಾಂತ್ಯ ಲಾಕ್ ಡೌನ್ ಎನ್ನಲಾಗುತ್ತಿದೆ.


ಶೇ.102 ರಷ್ಟು ಬದ್ದ ವೆಚ್ಚದಲ್ಲಿ ಏರಿಕೆ ಆಗಿದ್ದು, ಆದಾಯ ಇಲ್ಲದೆ ವೆಚ್ಚವೇ ಹೆಚ್ವಾಗಿರುವ ಕಾರಣದಿಂದ ಮುಂದಿನ ಬಜೆಟ್ ಗೆ ಮುಖ್ಯಮಂತ್ರಿ ಬೊಮ್ಮಾಯಿಗೆ ಜನಪ್ರಿಯ ಬಜೆಟ್(Budget 2022) ಗೆ ಹಣಕಾಸು ಹೊಂದಿಸುವ ದೊಡ್ಡ ಸವಾಲು ಎದುರಾಗಿದೆ.


ತೆರಿಗೆ ಸಂಗ್ರಹದ ಸ್ಥಿತಿಗತಿ:


ಅಬಕಾರಿ ಸಂಗ್ರಹ- 19,434 ಕೋಟಿ ರೂ.


ಒಟ್ಟು ಗುರಿ ಸಾಧನೆ- 80%


ಮುದ್ರಾಂಕ ಹಾಗೂ ನೋಂದಣಿ- 9,767 ಕೋಟಿ ರೂ.


ಒಟ್ಟು ಗುರಿ ಸಾಧನೆ- 77%


ಮೋಟಾರು ವಾಹನ ತೆರಿಗೆ ಸಂಗ್ರಹ- 4,644 ಕೋಟಿ ರೂ.


ಒಟ್ಟು ಗುರಿ ಸಾಧನೆ- 62%


ವಾಣಿಜ್ಯ ತೆರಿಗೆ ಸಂಗ್ರಹ- 50,276 ಕೋಟಿ ರೂ. 


ಒಟ್ಟು ಗುರಿ ಸಾಧನೆ- 78.85%


ಇತರೆ ತೆರಿಗೆ ಸಂಗ್ರಹ- 1,380 ಕೋಟಿ ರೂ. 


ಒಟ್ಟು ಗುರಿ ಸಾಧನೆ- 46%


ಇದನ್ನೂ ಓದಿ : ಶಾಸಕ-ಸಚಿವರ ಜಟಾಪಟಿ: ಕಟ್ಟಡ ಉದ್ಘಾಟನೆಗೆ ನಾ ಮುಂದು ತಾ ಮುಂದು ಎಂದ ಶರತ್ ಬಚ್ಚೇಗೌಡ-ಎಂಟಿಬಿ ನಾಗರಾಜ್


ಡಿಸೆಂಬರ್ ವರೆಗೆ ಸರ್ಕಾರ ಒಟ್ಟು ರಾಜಸ್ವ ಸ್ವೀಕೃತಿಯಲ್ಲಿ 75% ಗುರಿ ಸಾಧಿಸಿದ್ದು, ₹ 1,72,271 ಕೋಟಿ ರಾಜಸ್ವ ಗುರಿಯಲ್ಲಿ ₹ 1,29,490 ಕೋಟಿ ಸಂಗ್ರಹಿಸಿದೆ. ಒಟ್ಟು ₹42,781 ಕೋಟಿ ರಾಜಸ್ವ ಸಂಗ್ರಹ ಬಾಕಿ ಉಳಿದುಕೊಂಡಿದೆ.ಇನ್ನು ವಿತ್ತೀಯ ಕೊರತೆ ₹15,273 ಕೋಟಿ ಇದೆ. ರಾಜಸ್ವ ಕೊರತೆ ಸುಮಾರು ₹7,466 ಕೋಟಿ ಇದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು  Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.