Cabinet meeting approves : ಶಿಕ್ಷಕರ ನೇಮಕಾತಿ ವಯೋಮಿತಿ ಏರಿಕೆ : ಅಂಜನಾದ್ರಿ ಬೆಟ್ಟ ಅಭಿವೃದ್ಧಿಗೆ 100 ಕೋಟಿ
ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ
ಬೆಂಗಳೂರು : ಶಿಕ್ಷಕರ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಎಲ್ಲ ವರ್ಗಗಳಿಗೂ ವಯೋಮಿತಿಯಲ್ಲಿ 2 ವರ್ಷ ಏರಿಕೆ ಮಾಡಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ 1, ವಿಕಲಚೇತನರಿಗೆ 47 ವರ್ಷ ಮೀರಬಾರದು. ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಗೆ 45 ವರ್ಷ ಹಾಗೂ ಸಾಮಾನ್ಯ ವರ್ಗಗಳಿಗೆ 42 ವರ್ಷ ಮೀರಬಾರದು. ಇನ್ನೂ ಶಿಕ್ಷಕರಾಗಿ ಆಯ್ಕೆಯಾಗಲು ಇದ್ದ ಕಟ್ ಆಫ್ಅಂಕಗಳನ್ನು 60 ರಿಂದ 50 ಕ್ಕೆ ಇಳಿಸಲು ಸರ್ಕಾರ ಮುಂದಾಗಿದೆ.
ಇದನ್ನೂ ಓದಿ : Karnataka Lokayukta : ಲೋಕಾಯುಕ್ತದಲ್ಲಿ ಬಾಕಿಯಿರುವ ಕೇಸುಗಳು ಎಷ್ಟು?
ಕ್ಯಾಬಿನೆಟ್ ನಲ್ಲಿ ತೆಗೆದುಕೊಂಡ ಪ್ರಮುಖ ನಿರ್ಧಾರಗಳು
- ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಓಬಿಸಿ ಮೀಸಲಾತಿ ಸಂಬಂಧ ಭಕ್ತವತ್ಸಲ ಕಮಿಟಿ ಶಿಫಾರಸು ಅನುಮೋದನೆ ನೀಡಿದೆ. ಶೇ. 50 ಕ್ಕೂ ಮೀರದಂತೆ ಮೀಸಲಾತಿ ನೀಡಲಾಗುತ್ತಿದೆ. ಎಸ್ಸಿ, ಎಸ್ಟಿ, ಓಬಿಸಿ ಶೇಕಡಾ 50 ಮೀರುವಂತಿಲ್ಲ ಎಂದು ತಿಳಿಸಿದೆ. ವರದಿಯ ಪ್ರಾಥಮಿಕ ಶಿಫಾರಸುಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ. ಶೇ. 33 ರಷ್ಟು ಮೀಸಲಾತಿ ಕೊಡಲು ನಿರ್ಧಾರ ಕೈಗೊಳ್ಳಲಾಗಿದೆ.
- ಬಿಬಿಎಂಪಿ ಮೇಯರ್, ಉಪಮೇಯರ್ ಮೀಸಲಾತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಡುವ ಬಗ್ಗೆ ಸುಪ್ರೀಂ ಗಮನಕ್ಕೆ ತರಲು ಒಪ್ಪಿಗೆ ನೀಡಿದೆ.
- ಇಂದಿನ ಸಂಪುಟ ಸಭೆಯಲ್ಲಿ ಹೈ ಕೋರ್ಟ್ ಎಸಿಬಿ ರದ್ದು ಮಾಡುವ ವಿಚಾರವಾಗಿ ಚರ್ಚೆ ನಡೆಸಲಾಯಿತು.
- ಅಡ್ವೋಕೇಟ್ ಜನರಲ್,ಕಾನೂನು ತಜ್ಞರ ಸಲಹೆ ಪಡೆದು ಮುಂದುವರೆಯಲು ಇಗತ್ತಿನ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.
- ಶ್ರೀಶೈಲದಲ್ಲಿ ಯಾತ್ರಿ ನಿವಾಸ ಕಟ್ಟಲು 85 ಕೋಟಿ ರೂಪಾಯಿ ನೀಡಲು ತೀರ್ಮಾನ ಮಾಡಲಾಗಿದೆ. ಅಲ್ಲದೆ, ಅಂಜನಾದ್ರಿ ಬೆಟ್ಟದಲ್ಲಿ ಮೂಲ ಸೌಕರ್ಯಗಳ ಅಭಿವೃದ್ಧಿ ಗೆ 100 ಕೋಟಿ ಬಿಡುಗಡೆ ಗೆ ಅನುಮೋದನೆ ನೀಡಿದೆ.
- ಕೆಎಸ್ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಖರೀದಿ ಗೆ 539 ಕೋಟಿ ಬಿಡುಗಡೆಗೆ ಅಸ್ತು ನೀಡಲಾಗಿದೆ.
- ನಂಜುಂಡಪ್ಪ ವರದಿ ಪುನರ್ ಪರಿಶೀಲಿಸಿ ಅಪೌಷ್ಟಿಕತೆ,ಶಿಕ್ಷಣ ಹಾಗು ಅಭಿವೃದ್ಧಿಯಲ್ಲಿ ಹಿಂದುಳಿದ ತಾಲ್ಲೂಕುಗಳ ಗುರುತಿಸಲು ನಿರ್ಧಾರ ಮಾಡಲಾಗಿದೆ.
ಇದನ್ನೂ ಓದಿ : Priyank kharge : 'ನಮಗೆ ಬಿಜೆಪಿಯವರಿಂದಲೇ ಸಿಎಂ ಬದಲಾವಣೆ ಬಗ್ಗೆ ಮಾಹಿತಿ ಬರ್ತಿದೆ'
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.