ಬೆಂಗಳೂರು: ರಾಜ್ಯದಲ್ಲೂ ರಾಷ್ಟ್ರೀಯ ನಾಗರಿಕರ ನೋಂದಣಿಯನ್ನು (ಎನ್‌ಆರ್‌ಸಿ) ಪರಿಚಯಿಸಲು ಚಿಂತನೆ ನಡೆಸುತ್ತಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಗುರುವಾರ ತಿಳಿಸಿದ್ದಾರೆ.   


COMMERCIAL BREAK
SCROLL TO CONTINUE READING

'ಭಾರತದಾದ್ಯಂತ ಎನ್ಆರ್ಸಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದೆ. ಗಡಿಯುದ್ದಕ್ಕೂ ಜನರು ಬಂದು ನೆಲೆಸುತ್ತಿರುವ ರಾಜ್ಯಗಳಲ್ಲಿ ಕರ್ನಾಟಕವೂ ಸಹ ಒಂದು. ಇಲ್ಲಿ ಬಹಳಷ್ಟು ಸಮಸ್ಯೆಗಳಿವೆ. ಆದ್ದರಿಂದ ನಾವು ಎಲ್ಲಾ ಮಾಹಿತಿಯನ್ನು ಸಂಗ್ರಹಿಸುತ್ತಿದ್ದೇವೆ, ನಾವು ಕೇಂದ್ರ ಗೃಹ ಸಚಿವರೊಂದಿಗೆ ಚರ್ಚಿಸಿ ನಂತರ ಮುಂದುವರಿಯುತ್ತೇವೆ ಎಂದು ಬೊಮ್ಮಾಯಿ ಪಿಟಿಐಗೆ ತಿಳಿಸಿದ್ದಾರೆ.


ಬುಧುವಾರದಂದು ಹಾವೇರಿಯಲ್ಲಿ ಅವರು ಮಾತನಾಡುತ್ತಾ 'ಈಗಾಗಲೇ ಎನ್‌ಆರ್‌ಸಿಯನ್ನು ಜಾರಿಗೆ ತರಲು ಎರಡು ಸಭೆಗಳನ್ನು ನಡೆಸಲಾಗಿದೆ, ಇದನ್ನು ಕೆಲವು ರಾಜ್ಯಗಳು ಒಪ್ಪಿಕೊಂಡಿವೆ ಎಂದು ಹೇಳಿದರು. 'ನಾನು ಕಾನೂನು ಅಧ್ಯಯನ ಮಾಡಲು ಹಿರಿಯ ಅಧಿಕಾರಿಗಳನ್ನು ಕೇಳಿದ್ದೇನೆ. ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ವಿದೇಶಿಯರು ಬಂದು ನೆಲೆಸಿದ್ದಾರೆ. ಅವರು ಅಪರಾಧದಲ್ಲಿ ಪಾಲ್ಗೊಳ್ಳುತ್ತಾರೆ ಎಂಬುದು ನಮ್ಮ ಗಮನಕ್ಕೆ ಬಂದಿದೆ ಮತ್ತು ಅವರಲ್ಲಿ ಕೆಲವರನ್ನು ಸಹ ಬಂಧಿಸಲಾಗಿದೆ. ನಾವು ಈ ವಾರ ಎನ್‌ಆರ್‌ಸಿ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು  ಬೊಮ್ಮಾಯಿ ತಿಳಿಸಿದರು.


ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಎನ್‌ಆರ್‌ಸಿಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಮತ್ತು ಎಲ್ಲಾ ಅಕ್ರಮ ವಲಸಿಗರನ್ನು ಕಾನೂನು ವಿಧಾನಗಳ ಮೂಲಕ ಹೊರಹಾಕಲಾಗುವುದು ಎಂದು ಮಂಗಳವಾರ ಪುನರುಚ್ಚರಿಸಿದ್ದರು.