Karnataka rain: ತಮಿಳುನಾಡನ್ನು ಸದ್ಯ ಬಾದಿಸುತ್ತಿರುವ 'ಫೆಂಗಲ್' ಚಂಡಮಾರುತ ಕರಾವಳಿ ಜಿಲ್ಲೆಗಳನ್ನು ತಲ್ಲಣಿಸಿದೆ. ಚಳಿಯಿಂದ ನಡುಗುತ್ತಿದ್ದ ರಾಜ್ಯದ ಜನರಿಗೆ ಮಳೆಯ ಕಿರಿಕಿರಿ ಹೆಚ್ಚಾಗಿದೆ. ಮಳೆ, ಶೀತದ ವಾತಾವರಣ ಹಾಗೂ ಚಳಿ ಇರಲಿದೆ ಎಂದು ಹವಮಾನ ಇಲಾಕೆ ಮಾಹಿತಿ ನೀಡಿದ್ದು, ಈ ಚಂಡಮಾರುತ ಇನ್ನೂ ಎಷ್ಟು ದಿನ ಇರಲಿದೆ ಎಂಬ ಮಾಹಿತಿಯನ್ನು ತಿಳಿಯಲು ಮುಂದೆ ಓದಿ...


COMMERCIAL BREAK
SCROLL TO CONTINUE READING

'ಫೆಂಗಲ್' ಚಂಡಮಾರುತ ಶನಿವಾರ ಅಂದರೆ ನ.30 ರಂದು ಕರಾವಳಿ ಭಾಗಕ್ಕೆ ಅಪ್ಪಳಿಸಿತ್ತು, ಒಂದೆರೆಡು ದಿನಗಳಲ್ಲಿ ಇದು ಕಡಿಮೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ದಿನೇ ದಿನೇ ಚಂಡಮಾರುತ ಹೆಚ್ಚಾಗುವ ಮೂಲಕ ರಾಜ್ಯದ ಜನತೆಗೆ ಶಾಕ್‌ ಕೊಟ್ಟಿದೆ. ನಿನ್ನೆ (ಡಿ.02) ರಂದು ಸೈಕ್ಲೋನ್‌ ಅಬ್ಬರ ಮುಂದುವರೆದಿದೆ. 


ಡಿ. 03 ರಂದು ಆಗ್ನೇಯ ದಿಕ್ಕಿನತ್ತ ಹೆಚ್ಚಾಗಿ ಬೀಸುವ ಸಾಧ್ಯತೆ ಇದ್ದು, ಉತ್ತರ ಕೇರಳ-ಕರ್ನಾಟಕ ಹಾಗೂ ಕರಾವಳಿಯ ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮಾರ್ಗದ ಕಡೆಗೆ ಸಾಗುವ ನಿರೀಕ್ಷೆ ಇದೆ. 


ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್‌ ಘೋಷನೆ ಮಾಡಲಾಗಿದ್ದು, ರಾಜ್ಯದ 10 ಜೆಲಲ್ಲಿಗಳಲ್ಲಿ ಬಾರಿ ಮಳೆಯ ಮುನ್ಸೂಚನೆಯ ಕಾರಣ ರಜೆ ಘೊಷಣೆ ಮಾಡಲಾಗಿದೆ. ಕರಾವಳಿ ಮಲೆನಾಡು ಭಾಗದ ದಕ್ಷಿಣ ಕನ್ನಡ, ಕೊಡಗು, ಮೈಸೂರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದಾರೆ.  ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆಯಿದೆ.



ರಾಜ್ಯದ ಹಲವು ಜಾಗಗಳಲ್ಲಿ ಚಂಡಮಾರುತ ವಿಸ್ತರಣೆ ಆಗುವ ಕಾರಣ, ಮುಂದಿನ 20 ಗಂಟೆಯಲ್ಲಿ 200ಮಿ.ಮಿ ಮಳೆ ನಿರೀಕ್ಷೆ ಇದೆ ಎಂದು ಹವಮಾನ ಇಲಾಕೆ ಹೇಳಿದ್ದು, ರಾಜ್ಯದ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಮೈಸೂರು ಸೇರಿ 10 ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್‌ ಘೋಷಣೆ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.