ಮುಂಬೈ ಕರ್ನಾಟಕದ ದ್ವಾರಬಾಗಿಲು ಎಂದೇ ಪ್ರಸಿದ್ಧಿಯಾದ  ಧಾರವಾಡದಲ್ಲಿ ೧೯೫೬ ರಲ್ಲಿ ಜನ್ಮ ತಾಳಿದ ಕರ್ನಾಟಕ ವಿಶ್ವವಿದ್ಯಾಲಯವು ಕಳೆದ ೭೫ ವರ್ಷಗಳಿಂದ ಉತ್ತರ ಕರ್ನಾಟಕದಲ್ಲಿ ಉಚ್ಛ ಶಿಕ್ಷಣದಲ್ಲಿ ಕ್ರಾಂತಿಯನ್ನು ಮಾಡಿದೆ. ಈ ಭಾಗದ ಯುವ ಜನತೆಗೆ ಜ್ಞಾನ ಪ್ರಸಾರ ಮಾಡುವ ಕಾರ್ಯದಲ್ಲಿ ಸಂಪೂರ್ಣ ಕೃತಕೃತ್ಯವಾಯಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: "ಹಿಜಾಬ್ ಪ್ರಕರಣ ವಿಚಾರದಲ್ಲಿ ಸುಪ್ರೀಂಕೋರ್ಟ್ ನ ಅಂತಿಮ ತೀರ್ಪು ಬಹಳ ಮುಖ್ಯ"


ಆಧುನಿಕ ಸಂಸ್ಕೃತಿಯ ಹೆಗ್ಗುರುತಾಗಿ ಯುವಕರ ತಿಳುವಳಿಕೆಯ ಜ್ಞಾನ ಕ್ಷೀತಿಜವನ್ನು ವಿಸ್ತಾರಗೊಳಿಸಿ ಇಡೀ ಭರತಖಂಡದಲ್ಲಿಯೇ ಪ್ರಖ್ಯಾತಿ ಹೊಂದಿ ಕಳೆದ ೨೫ ವರ್ಷಗಳಿಂದ ‘ಎ’ ಗ್ರೇಡ್ ಮಾನ್ಯತೆಯನ್ನು ಉಳಿಸಿಕೊಂಡು ಬಂದಿರುವುದು ಶಿಕ್ಷಣ ಕಾಶಿಗೆ ಹೆಗ್ಗುರುತಾಗಿದೆ. ಕಲೆ, ವಿಜ್ಞಾನ, ತಂತ್ರಜ್ಞಾನ, ಸಾಮಾಜಿಕ ಜ್ಞಾನಗಳನ್ನು ಆಧುನಿಕರಿಗೆ ಬಿತ್ತುವಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ವಿಶೇಷ ಪಾತ್ರವನ್ನು ಗಳಿಸಿಕೊಂಡು ಬಂದಿದೆ.


ಇಂಥ ದೂರದೃಷ್ಟಿ ಆಶಯವನ್ನು ಇಟ್ಟುಕೊಂಡು ಇಲ್ಲಿ ಆಡಳಿತ ನಡೆಸಿದ ಶ್ರೀ ಆರ್.ಎ.ಜಾಗೀರದಾರ, ಶ್ರೀ.ಸಿ.ಸಿ.ಹುಲಕೋಟಿ, ಡಾ.ಡಿ.ಸಿ.ಪಾವಟೆ, ಡಾ.ಎ.ಎಸ್.ಅಡಕೆ, ಶ್ರೀಮತಿ ಜಯಲಕ್ಷಮ್ಮಣ್ಣಿ, ಡಾ.ಆರ್.ಸಿ.ಹಿರೇಮಠ, ಪ್ರೊ.ಸದಾಶಿವ ಒಡೆಯರ, ಡಾ.ಡಿ.ಎಂ.ನಂಜುಂಡಪ್ಪ, ಡಾ.ಎಸ್.ಜಿ.ದೇಸಾಯಿ, ಡಾ.ಜಿ.ಕೆ.ನಾರಾಯಣರೆಡ್ಡಿ, ಡಾ.ಎಸ್.ರಾಮೇಗೌಡ, ಡಾ.ಎ.ಎಂ.ಪಠಾಣ, ಡಾ.ಎಂ.ಖಾಜಾಪೀರ, ಡಾ.ಎಸ್.ಕೆ.ಸೈದಾಪೂರ, ಡಾ.ಎಚ್.ಬಿ.ವಾಲಿಕಾರ, ಡಾ.ಪಿ.ಬಿ.ಗಾಯಿ ಹಾಗೂ ಇಂದಿನ ಪ್ರಸ್ತುತ ಕುಲಪತಿಗಳಾದ ಪ್ರೊ.ಕೆ.ಬಿ.ಗುಡಸಿ ಅವರ ವರೆಗೆ ಬೆಳೆದುಕೊಂಡು ಬಂದಿದೆ. ಇವರ ತಮ್ಮ ಆಡಳಿತಾವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಮಹತ್ವವಾದ ಆಡಳಿತಾತ್ಮಕ ಕೊಡುಗೆಗಳನ್ನು ನೀಡಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್ ನವರದ್ದು 85 % ಸರ್ಕಾರ. : ಸಿಎಂ ಬೊಮ್ಮಾಯಿ


ಇದರಲ್ಲಿ ವಿಶೇಷವಾಗಿ ಪ್ರೊ.ಕೆ.ಬಿ.ಗುಡಸಿ ಅವರ ಕುಲಪತಿಗಳ ಆಡಳಿತ ಅವಧಿಯಲ್ಲಿ ಪ್ರಪ್ರಥಮ ಬಾರಿಗೆ ವಿಶ್ವವಿದ್ಯಾಲಯದಿಂದ ‘ಅರಿವೇ ಗುರು’ ಎಂಬ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡುವ ಕಾರ್ಯವನ್ನು ಜಾರಿಗೆ ತಂದಿರುವುದು ಕರ್ನಾಟಕದ ಜನತೆಗೆ ಸಂದ ಗೌರವದ ಅಭೂತಪೂರ್ವವಾದ ಕೊಡುಗೆಯಾಗಿದೆ.ಈ ದೆಸೆಯಲ್ಲಿ ಕ.ವಿ.ವಿ. ಕುಲಪತಿಗಳು ದಿನಾಂಕ ೧೨-೧೦-೨೦೨೨ ರಂದು ವಿಶ್ವವಿದ್ಯಾಲಯದಲ್ಲಿ ಸಭೆಯನ್ನು ನಡೆಸಿ ಪ್ರಶಸ್ತಿ ನೀಡಲು ತೀರ್ಮಾನಿಸಿರುವುದು ವಿಶ್ವವಿದ್ಯಾಲಯದ ಕೀರ್ತಿಯನ್ನು ಹೆಚ್ಚಿಸಿದೆ.


ಈ ವರ್ಷದ ಕರ್ನಾಟಕ ರಾಜ್ಯೋತ್ಸವ ದಿನದಂದೇ  ‘ಅರಿವೇ ಗುರು’ ಎಂಬ ಹೆಸರಿನಲ್ಲಿ ಕಲೆ, ಸಮಾಜವಿಜ್ಞಾನ ಹಾಗೂ ವಿಜ್ಞಾನ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಮೂರು ಜನ ಸಾಧಕರಿಗೆ ರಾಜ್ಯಮಟ್ಟದ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದು. ಪ್ರಶಸ್ತಿಯು ತಲಾ ೨೫,೦೦೦/- ರೂಪಾಯಿ ನಗದು ಬಹುಮಾನ, ಹಾಗೂ ಪ್ರಶಸ್ತಿ ಪತ್ರಗಳನ್ನು ಒಳಗೊಂಡಿರುತ್ತದೆ. ಪ್ರಶಸ್ತಿಗಳ ಪಾರದರ್ಶಕ ಆಯ್ಕೆಗಾಗಿ ಉನ್ನತ ಮಟ್ಟದ ಶೋಧನಾ ಸಮಿತಿಯನ್ನು ಕೂಡಾ ರಚಿಸಲಾಗಿದೆ. ಪ್ರಶಸ್ತಿ ನೀಡುವ ಈ ಪ್ರಕ್ರಿಯೆಯು ಪ್ರತಿವರ್ಷ ಮುಂದುವರಿಯುವುದೆAದು ಕ.ವಿ.ವಿ.ಕುಲಸಚಿವರಾದ ಶ್ರೀ ಯಶಪಾಲ್ ಕ್ಷೀರಸಾಗರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.