ಕರ್ನಾಟಕದ ಅಮರನಾಥ ಯಾತ್ರಾರ್ಥಿಗಳು ಸುರಕ್ಷಿತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಅಮರನಾಥದಲ್ಲಿ ಸಿಲುಕಿದ್ದ ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರು, ಜುಲೈ 08 :ಅಮರನಾಥದಲ್ಲಿ ಸಿಲುಕಿದ್ದ ಕರ್ನಾಟಕದ ಯಾತ್ರಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಅವರು ಇಂದು ವನಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಅಮರನಾಥ್ ನಲ್ಲಿ ಸಿಲುಕಿರುವ ಕರ್ನಾಟಕದ ಯಾತ್ರಾರ್ಥಿಗಳ ರಕ್ಷಣೆಗೆ ಕಂದಾಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಶ್ಮಿಯವರನ್ನು ನೇಮಿಸಲಾಗಿದೆ.ಮಳೆಯಾಗುತ್ತಿರುವುದರಿಂದ ಅವರನ್ನು ಹೆಲಿಕಾಪ್ಟರ್ ಅಥವಾ ವಿಮಾನದ ಮೂಲಕ ರಕ್ಷಿಸಲಾಗುತ್ತಿಲ್ಲ.ನಮ್ಮ ಅಧಿಕಾರಿಗಳು ಅಲ್ಲಿನ ಪ್ರಾದೇಶಿಕ ಆಯುಕ್ತರು ಹಾಗೂ ಡಿಸಿ, ಮತ್ತು ಪೊಲೀಸರೊಂದಿಗೆ ಮಾತನಾಡಿದ್ದಾರೆ.ಮಳೆ ಕಡಿಮೆಯಾದ ನಂತರ ರಕ್ಷಣಾ ಕಾರ್ಯ ನಡೆಸಲಾಗುತ್ತದೆ ಎಂದರು.
ಇದನ್ನೂ ಓದಿ: ಮೆಟ್ರೋ ಕಾಮಗಾರಿ ವೇಳೆ ಏಕಾಏಕಿ ಕುಸಿದ ಕ್ರೈನ್, ತಪ್ಪಿದ ಅನಾಹುತ
ಅರಣ್ಯ ಬೆಳೆಸಲು ಸರ್ಕಾದ ಜೊತೆ ಜನರು ಕೈಜೋಡಿಸಬೇಕು:
ಅರಣ್ಯ ಬೆಳೆಸುವುದು ಸರ್ಕಾರದ ಹಾಗೂ ಜನರ ಕರ್ತವ್ಯ.ವೈಜ್ಞಾನಿಕವಾಗಿ ಅಗತ್ಯವಿರುವಷ್ಟು ಅರಣ್ಯ ಪ್ರದೇಶ ನಮ್ಮಲ್ಲಿ ಇಲ್ಲ. ಪ್ರತಿ ವರ್ಷ ಸಸಿ ನೆಡಲು ಹಣ ಖರ್ಚು ಮಾಡಿದರೂ ನಮಗೆ ಅಗತ್ಯವಿರುವಷ್ಟು ಅರಣ್ಯವಿಲ್ಲ. ಕಾಡು ಬೆಳೆಸುವ ಭಾವನೆ ಜನರಲ್ಲಿಯೂ ಮೂಡಿ ಸರ್ಕಾರದ ಜೊತೆಗೆ ಸಹಕರಿಸಬೇಕು ಎಂದರು.ಈ ವರ್ಷ 5 ಕೋಟಿ ಗಿಡ ನೀಡಬೇಕೆಂಬ ಉದ್ದೇಶವಿದೆ.ಐದು ಕೋಟಿ ಸಸಿಗಳೂ ಬದುಕುವುದಿಲ್ಲ.ಶೇ 50 ಕ್ಕಿಂತಲೂ ಕಡಿಮೆ ಗಿಡಗಳು ಬದುಕುಳಿಯುತ್ತವೆ.ಹಾಗಾಗಿ ನಿರೀಕ್ಷಿತ ಪ್ರಮಾಣದಲ್ಲಿ ಕಾಡು ಬೆಳೆದಿಲ್ಲ ಎಂದರು.
ತೆಂಗಿನ ಸಸಿ ನೆಟ್ಟ ಸಿಎಂ: ನಿರ್ಮಾಪಕ ಎನ್.ಎಂ.ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ
ಇಂದು ಸ್ವಾಭಿಮಾನಿ ಪಾರ್ಕ್ ಹಾಗೂ ವನಮಹೋತ್ಸವ ಉದ್ಘಾಟಿಸಿದ್ದು, ತೆಂಗಿನ ಸಸಿಯನ್ನು ನೆಟ್ಟಿರುವುದಾಗಿ ತಿಳಿಸಿದರು.ಹಿಂದೆಯೂ ಒಂದು ಗಿಡ ನೆಟ್ಟಿದ್ದು ಅದು ಚೆನ್ನಾಗಿ ಬೆಳೆದಿದೆ ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.