ಧಾರವಾಡ : ಸ್ವಾತಂತ್ರ್ಯೋತ್ಸವ ಅಮೃತ್ ಮಹೋತ್ಸವದ ಅಂಗವಾಗಿ ಹಾಗೂ ಯೋಗವನ್ನು ಕಡ್ಡಾಯ ವಿಷಯವನ್ನಾಗಿ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅಳವಡಿಸಿಕೊಂಡಿರುವುದರಿಂದ, ರಾಷ್ಟ್ರೀಯ ಶಿಕ್ಷಣ ನೀತಿಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಸಹಭಾಗಿತ್ವದಲ್ಲಿ ಕಳೆದ ಅಂತರರಾಷ್ಟ್ರೀಯ ಯೋಗ ದಿನವಾದ ಜೂನ್ 21, 2022 ರಂದು ಯೋಗಥಾನ್ ಕಾರ್ಯಕ್ರಮವನ್ನು ರಾಷ್ಟ್ರದಾದ್ಯಂತ ಆರಂಭಿಸಲಾಗಿದೆ.


COMMERCIAL BREAK
SCROLL TO CONTINUE READING

ಕರ್ನಾಟಕವು 26ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಆತಿಥ್ಯ ವಹಿಸುತ್ತಿರುವ ಹಿನ್ನಲೆಯಲ್ಲಿ ಯೋಗಥಾನ್ ಕಾರ್ಯಕ್ರಮದ ಅಂತಿಮ ಘಟ್ಟವನ್ನು ಜನವರಿ 15, 2023ರಂದು 10 ಸಾವಿರ ಯೋಗಬೋಧಕರು ಮತ್ತು 10 ಲಕ್ಷಕ್ಕೂ ಅಧಿಕ ಯೋಗಾಸಕ್ತರಿಂದ ಗಿನ್ನೆಸ್ ವಿಶ್ವದಾಖಲೆ ಪ್ರಯತ್ನವನ್ನು ಹಮ್ಮಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಪ್ರಧಾನಿ ರೋಡ್‌ ಶೋ ವೇಳೆ ಭದ್ರತಾ ಲೋಪ : ಗೇಟ್‌ ಹಾರಿ ಮೋದಿ ಕಡೆ ಬಂದ ವ್ಯಕ್ತಿ - ವಿಡಿಯೋ ನೋಡಿ


ಹುಬ್ಬಳ್ಳಿ-ಧಾರವಾಡದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವಜನೋತ್ಸವದಲ್ಲಿ ಜನವರಿ 15 ರಂದು ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ರಾಣಿ ಚೆನ್ನಮ್ಮ ಕ್ರೀಡಾಂಗಣ, ಕೃಷಿ ವಿಶ್ವವಿದ್ಯಾಲಯದ ಕ್ರೀಡಾಂಗಣ ಮತ್ತು ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣ ಮತ್ತು ಹುಬ್ಬಳ್ಳಿಯ ರೈಲ್ವೆ ಕ್ರಿಕೇಟ್ ಮೈದಾನದಲ್ಲಿ ಬೃಹತ್ ಯೋಗಾಥಾನ್ ಸಂಘಟಿಸಲು ಜಿಲ್ಲಾಡಳಿತ ಭರದ ಸಿದ್ಧತೆ ಮಾಡಿಕೊಂಡಿದೆ.


ಅಂದು ಬೆಳಿಗ್ಗೆ ಅವಳಿ ನಗರದ ಈ ನಾಲ್ಕು ಮೈದಾನಗಳಲ್ಲಿ ಬೆಳಿಗ್ಗೆ 6-30 ರಿಂದ 9-30 ಗಂಟೆಯವರೆಗೆ ಯೋಗಾಥಾನ್ ನಡೆಯಲಿದೆ. ಇದರಲ್ಲಿ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿವಿಧ ರಾಜ್ಯಗಳಿಂದ ಆಗಮಿಸಿರುವ 7,500 ಪ್ರತಿನಿಧಿಗಳು ಮತ್ತು ಧಾರವಾಡ ಜಿಲ್ಲೆಯ ಸುಮಾರು 22 ಸಾವಿರ ಯೋಗಾಸಕ್ತರು ಭಾಗವಹಿಸಲಿದ್ದಾರೆ.


ಕ್ರೀಡಾಂಗಣಗಳಲ್ಲಿ ಯೋಗಾಥಾನ್ ಯಶಸ್ವಿಗಾಗಿ ಸ್ವಚ್ಛತೆ, ಕುಡಿಯುವ ನೀರು ಮತ್ತು ಶೌಚಾಲಯಗಳ ವ್ಯವಸ್ಥೆ ಮಾಡಲಾಗುತ್ತಿದೆ. ಕ್ರೀಡಾಂಗಣಗಳಲ್ಲಿ ಪ್ರತಿ ಯೋಗಾಪಟುಗೆ ನಿರ್ಧಿಷ್ಟ ಸ್ಥಳ ಗುರುತಿಸಿ, ಸುಣ್ಣದ ಗೆರೆ ಹಾಕಿ, ಯೋಗಪಟುಗಳು ಶಿಸ್ತುಬದ್ಧವಾಗಿ ಭಾಗವಹಿಸಲು ಅನುಕೂಲವಾಗುವಂತೆ ಮಾಡಲಾಗಿದೆ.


ಯುವಜನೋತ್ಸವಕ್ಕೆ ಆಗಮಿಸಿರುವ ವಿವಿಧ ರಾಜ್ಯಗಳ 7500 ಪ್ರತಿನಿಧಿಗಳಿಗೆ ಯುಪ್ಲೆಕ್ಸ್ ಮತ್ತು ಟಾಟಾ ಇಟಾಚಿ ಕಂಪನಿಗಳು ಉತ್ತಮ ಗುಣಮಟ್ಟದ ಯೋಗಾ ಮ್ಯಾಟ್‍ಗಳನ್ನು ಕೊಡುಗೆಯಾಗಿ ನೀಡಿವೆ. ಸ್ವಾಗತ ಸಮಿತಿಯು ಪ್ರತಿನಿಧಿಗಳ ವೆಲ್‍ಕಂ ಕಿಟ್‍ದೊಂದಿಗೆ ಈ ಮ್ಯಾಟ್‍ಗಳನ್ನು ಸಹ ನೀಡಿದೆ.


ಇದನ್ನೂ ಓದಿ: CM Basavaraj Bommai: ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ: ಸಿಎಂ ಬೊಮ್ಮಾಯಿ


ರಾಜ್ಯ ಸರ್ಕಾರವು ಯೋಗ ತರಬೇತಿ ಮತ್ತು ಪ್ರದರ್ಶನಕ್ಕೆ ವಿಶೇಷ ಆಧ್ಯತೆ ನೀಡಿ ಅನುಷ್ಠಾನಗೊಳಿಸುತ್ತಿದೆ. ರಾಜ್ಯದ ಹಲವು ವಿಶ್ವವಿದ್ಯಾಲಯಗಳಲ್ಲಿ ಯೋಗ ಒಂದು ಅಧ್ಯಯನ ವಿಷಯವಾಗಿ ಮತ್ತು ಸಂಶೋಧನಾ ವಿಷಯವಾಗಿ ಬಹು ಹಿಂದಿನಿಂದಲೂ ಯೋಗಾಸಕ್ತ ವಿದ್ಯಾರ್ಥಿಗಳು, ಬೋಧಕರು ಅಳವಡಿಸಿಕೊಂಡಿದ್ದಾರೆ. ಪ್ರಧಾನಮಂತ್ರಿಗಳ ವಿಶೇಷ ಆಸಕ್ತಿ ಮತ್ತು ಆಧ್ಯತೆಯಿಂದಾಗಿ ಇಡೀ ವಿಶ್ವವೇ ಇಂದು ಯೋಗದತ್ತ ಹೊರಳುತ್ತಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಯೋಗಾಥಾನ್ ಕಾರ್ಯಕ್ರಮದ ಮೂಲಕ ಹೊಸ ದಾಖಲೆ ಸೃಷ್ಟಿಸಲು ಮುಂದಾಗಿದೆ. ರಾಜ್ಯವು ಯೋಗ ಸಾಕ್ಷರ ರಾಜ್ಯವಾಗಲು ಆಸಕ್ತಿ ಹೊಂದಿದೆ.


ಈ ಹಿಂದೆ ರಾಜಸ್ಥಾನದಲ್ಲಿ ಸುಮಾರು 1.6 ಲಕ್ಷ ಜನರಿಂದ ನಿರ್ಮಿಸಲಾಗಿದ್ದ ಯೋಗ ದಾಖಲೆಯನ್ನು ಯೋಗಥಾನ್ ಕಾರ್ಯಕ್ರಮದ ಮೂಲಕ ಅಳಿಸಿ ಹಾಕಲಾಗುತ್ತದೆ. ಈ ಮೂಲಕ ಕರ್ನಾಟಕವನ್ನು ದೇಶದ ಮೊದಲ ಯೋಗ ಸಾಕ್ಷರತಾ ರಾಜ್ಯವನ್ನಾಗಿ ಮಾಡಲಾಗುತ್ತಿದೆ.


ಸುಮಾರು 13 ಲಕ್ಷ ವಿದ್ಯಾರ್ಥಿಗಳು, 12,000 ಯೋಗಬೋಧಕರು ಮತ್ತು 8,000 ಕ್ಕೂ ಅಧಿಕ ಶಿಕ್ಷಣ ಸಂಸ್ಥೆಗಳು ವೆಬ್ www.yogathon2022.com ಪೆÇೀರ್ಟ್‍ಲ್‍ದಲ್ಲಿ ಈವರೆಗೂ ನೋಂದಣಿ ಮಾಡಿಕೊಂಡಿರುತ್ತಾರೆ.


ದೆಹಲಿಯ ಮೊರಾರ್ಜಿ ದೇಸಾಯಿ ರಾಷ್ಟ್ರೀಯ ಯೋಗ ಶಿಕ್ಷಣ ಸಂಸ್ಥೆಯು ಈ ಕಾರ್ಯಕ್ರಮದ ಜ್ಞಾನ ಪಾಲುದಾರ (Knowledge Partner) ವಾಗಿದ್ದು, ಯೋಗಪಟುಗಳಿಗೆ ತರಬೇತಿಗೆ ಸಂಬಂಧಿಸಿದ ವಿಷಯಗಳಲ್ಲಿ ಮಾರ್ಗದರ್ಶನ ನೀಡುತ್ತಿದೆ.


ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗೆ ಆಗುವ ಪ್ರಯೋಜನಗಳು: 100 ವಿದ್ಯಾರ್ಥಿಗಳನ್ನು ಯೋಗ ಸರ್ಟಿಫಿüಕೇಶನ್ ಬೋರ್ಡ್‍ನ ಯೋಗ ಫಾರ್ ವೆಲೆನೆಸ್ ಕಾರ್ಯಕ್ರಮಕ್ಕೆ ದಾಖಲು ಮಾಡುವ ಶಿಕ್ಷಣ ಸಂಸ್ಥೆಗೆ 10,000 ಪ್ರೋತ್ಸಾಹ ಧನವನ್ನು ಯೋಗ ಸರ್ಟಿಫಿಕೇಶನ್ ಬೋರ್ಡ್‍ನಿಂದ ನೀಡಲಾಗುತ್ತದೆ.


ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಯೋಗಥಾನ್ ಕಾರ್ಯಕ್ರಮಕ್ಕೆ ನೋಂದಾಯಿಸಲು ಪ್ರಥಮ ಮೂರು ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ಬಹುಮಾನ ನೀಡಲಾಗುವುದು.


500-1000 ವಿದ್ಯಾರ್ಥಿಗಳನ್ನು ಯೋಗಥಾನ್ ಕಾರ್ಯಕ್ರಮಕ್ಕೆ ನೋಂದಾಯಿಸುವ ಶಾಲೆ, ಕಾಲೇಜು ಮತ್ತು ಶಿಕ್ಷಣ ಸಂಸ್ಥೆಗೆ ಯೋಗ ಸರ್ಟಿಫಿಕೇಶನ್ ಬೋರ್ಡ್‍ನಿಂದ ಪ್ರಮಾಣಿಕೃತ ಯೋಗ ಕೇಂದ್ರ ಎಂದು ಗುರುತಿಸಲಾಗುತ್ತದೆ. ಇದಕ್ಕಾಗಿ ನಿಗದಿಪಡಿಸಿರುವ ಶುಲ್ಕವಾದ 25,000 ಗಳನ್ನು ಪಾವತಿಸುವ ಬದಲು ಯೋಗಥಾನ್ ಕಾರ್ಯಕ್ರಮದ ಮೂಲಕ ಕೇವಲ 1,000 ಶುಲ್ಕವನ್ನಷ್ಟೇ ಪಾವತಿ ಮಾಡಬೇಕಾಗುತ್ತಿದೆ.


ಇದನ್ನೂ ಓದಿ: CM Basavaraj Bommai: ಕೆಟ್ಟ ಸಂಸ್ಕೃತಿ ರಾಜಕಾರಣಕ್ಕೆ ಪ್ರವೇಶಿಸಲು ಕಾಂಗ್ರೆಸ್ ಮಹಾದ್ವಾರ: ಸಿಎಂ ಬೊಮ್ಮಾಯಿ


ರಾಷ್ಟ್ರೀಯ ಶಿಕ್ಷಣ ನೀತಿಯ ಯೋಗ ಪಠ್ಯಕ್ರಮವನ್ನು ಶಾಲೆ, ಕಾಲೇಜುಗಳು ಅಳವಡಿಸಿಕೊಳ್ಳಬಹುದು.


ಯೋಗ ತರಬೇತುದಾರರಿಗೆ ಆಗುವ ಪ್ರಯೋಜನಗಳು: ಯೋಗ ಸರ್ಟಿಫಿಕೇಶನ್ ಬೋರ್ಡ್‍ನ ಯೋಗ ಫಾರ್ ವೆಲ್‍ನೆಸ್ ಕಾರ್ಯಕ್ರಮಕ್ಕೆ ಕನಿಷ್ಠ 100 ವಿದ್ಯಾರ್ಥಿಗಳನ್ನು ನೋಂದಾಯಿಸುವ ಯೋಗ ಬೋಧಕರಿಗೆ ಯೋಗ ಸರ್ಟಿಫಿಕೇಶನ್ ಬೋರ್ಡ್‍ನಿಂದ ರೂ. 10,000 ಪ್ರೋತ್ಸಾಹ ಧನ ನೀಡಲಾಗುತ್ತದೆ.


ಯೋಗ ಸರ್ಟಿಫಿಕೇಶನ್ ಬೋರ್ಡ್‍ನ ಯೋಗಬೋಧಕ ಹಂತ-1 ಕ್ಕೆ ರೂ.1,770/- ಪಾವತಿಸಿ, ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳುವ ಮೂಲಕ ಯೋಗ ಸರ್ಟಿಫಿಕೇಶನ್ ಬೋರ್ಡ್‍ನಿಂದ ಪ್ರಮಾಣಿಕೃತ್ ಯೋಗ ಭೋಧಕರಾಗಬಹುದು. ಯೋಗ ಸರ್ಟಿಫಿಕೇಶನ್ ಬೋರ್ಡ್‍ನ ಪರ್ಸನಲ್ ರಿವ್ಯೂ ಸರ್ಟಿಫಿಕೇಶನ್ ಅಂಗವಾಗಿರುವ ಆಯುಷ್ ಟಿ.ವಿ.ಯು ಪ್ರತಿನಿತ್ಯ ಬೆಳಗ್ಗೆ 6 ಗಂಟೆಯಿಂದ 8 ರ ವರೆಗೆ ಯೋಗ ತರಬೇತುದಾರ ಹಂತ್-1 ರ ಆನ್‍ಲೈನ್ ತರಬೇತಿ ಕಾರ್ಯಕ್ರಮವನ್ನು ಪ್ರಸಾರ ಮಾಡುತ್ತಿದೆ. ಯೋಗ ಬೋಧಕರ ಪರೀಕ್ಕೆ ತೆಗೆದುಕೊಳ್ಳುವ ಅಭ್ಯರ್ಥಿಗಳು ಆಯುಷ್ ಟಿ.ವಿ.ಯ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬಹುದು.


ಯೋಗ ಸರ್ಟಿಫಿಕೇಶನ್ ಬೋರ್ಡ್‍ನ ಹಂತ್-1ರ ಪರೀಕ್ಷೆಯನ್ನು ಮೊಬೈಲ್ ಮೂಲಕ, ಯಾವ ಸ್ಥಳದಿಂದ ಆದರೂ ತೆಗೆದುಕೊಳ್ಳಬಹುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.