ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ  ಜನಪ್ರಿಯ ಯೋಜನೆ 'ಬಿಬಿಸಿ' ನ್ಯೂಸ್ ನಲ್ಲಿಯೂ ಕೂಡ ಸುದ್ದಿ ಮಾಡಿದೆ. ಈ ಯೋಜನೆಯ ಕುರಿತಾಗಿ 'ಬಿಬಿಸಿ'ಯು ಏಷ್ಯಾ ವಿಭಾಗದಲ್ಲಿ "India's Indira canteen: The best meal you can buy for 13 cents" ಎನ್ನುವ ಶೀರ್ಷಿಕೆಯ ಅಡಿಯಲ್ಲಿ  ಸುಧೀರ್ಘ ಲೇಖನ ಪ್ರಕಟಿಸಿರುವ ಈ ಜಾಗತಿಕ ಸುದ್ದಿ ಸಂಸ್ಥೆ,ಈ ಯೋಜನೆಯ ಕುರಿತಾಗಿ ವಿಮರ್ಶೆ ಮಾಡುತ್ತಾ ''ಪ್ರಮುಖವಾಗಿ ಬೆಂಗಳೂರು ಮಹಾನಗರದ ವಲಸಿಗರು, ಕ್ಯಾಬ್ ಡ್ರೈವರಗಳು  ವಿದ್ಯಾರ್ಥಿಗಳು, ಭಿಕ್ಸುಕರು, ಸೆಕ್ಯೂರಿಟಿ ಗಾರ್ಡ್ ಹಾಗೂ ಕೂಲಿಕಾರ್ಮಿಕರನ್ನು ಗಮನದಲ್ಲಿಟ್ಟುಕೊಂಡು ತಂದಂಥ ಯೋಜನೆ ಇಂದಿರಾ ಕ್ಯಾಂಟೀನ್ ಆಗಿದೆ'' ಎಂದು ಬಿಬಿಸಿ ತಿಳಿಸಿದೆ.  


COMMERCIAL BREAK
SCROLL TO CONTINUE READING

ಈ ಹಿಂದೆ ತಮಿಳುನಾಡಿನಲ್ಲಿ  ಮುಖ್ಯಮಂತ್ರಿ ಜಯಲಲಿತಾ ರವರು ತಂದಂತಹ ಅಮ್ಮಾ ಕ್ಯಾಂಟಿನ ಮಾದರಿಯಲ್ಲ್ಲೇ ಇದನ್ನು ಬೆಂಗಳೂರಿನಲ್ಲಿ ಜಾರಿಗೆ ತರಲಾಗಿದೆ.ಇಲ್ಲಿ ಉಪಹಾರವನ್ನು ಕೇವಲ 5 ರೂಪಾಯಿ ಹಾಗೂ ಊಟವನ್ನು 10 ರೂಗಳಲ್ಲಿ  ಪಡೆಯಬಹುದಾಗಿದೆ.ನಗರವೊಂದರಲ್ಲೇ ಈ ಯೋಜನೆಯನ್ನು ಯಶಸ್ವಿಗೊಳಿಸಲು 198 ಕ್ಯಾಂಟಿನ ಮೂಲಕ 3,00,000 ಊಟವನ್ನು ದಿನವೊಂದಕ್ಕೆ ತಯಾರಿಸಲಾಗುತ್ತಿದೆ.ಅಲ್ಲದೆ ಜನೇವರಿ ವೇಳೆಗೆ ಸುಮಾರು 300 ಕ್ಯಾಂಟೀನ್ಗಳನ್ನೂ ನಗರದೆಲ್ಲೆಡೆ ತೆರೆಯಲಾಗುತ್ತಿದೆ ಎಂದು ಹೇಳಲಾಗಿದೆ. ದಿನಕ್ಕೆ ಒಂದು ಡಾಲರ್ಗಿಂತಲೂ ಕಡಿಮೆ ಆಧಾಯ ಹೊಂದಿರುವ ಲಕ್ಷಾಂತರ ಜನರಿಗೆ ಭಾರತದಂತಹ ದೇಶದಲ್ಲಿ ಈ ಯೋಜನೆ ಅನುಕೂಲಕಾರಿಯಾಗುತ್ತದೆ ಎಂದು ಅದು ಸುದ್ದಿ ಮಾಡಿದೆ.