ಹಳೆಯ ಬೆಂಗಳೂರಿಗರಿಗೆ, ಪ್ಯಾಲೇಸ್ ಗುಟ್ಟಹಳ್ಳಿಯ ಸ್ಯಾಂಕಿ ರಸ್ತೆಯಲ್ಲಿರುವ ಬೃಹತ್ ಸಿಂಗಲ್ ಸ್ಕ್ರೀನ್ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸಿದ ಮೂರು ವಾರಗಳ ನಂತರ, ಬೆಂಗಳೂರಿನ ಐಕಾನಿಕ್ ಕಾವೇರಿ ಥಿಯೇಟರ್ ತನ್ನ ವೈಭವದ ಓಟವನ್ನು ಕೊನೆಗೊಳಿಸಿದೆ.  


COMMERCIAL BREAK
SCROLL TO CONTINUE READING

ಜನವರಿ 11, 1974 ರಂದು ಡಾ. ರಾಜ್‌ಕುಮಾರ್ ಅಭಿನಯದ  ಬಂಗಾರದ ಪಂಜರದೊಂದಿಗೆ  ಪ್ರಾರಂಭವಾದ ಕಾವೇರಿ ಥಿಯೇಟರ್ ಸಿಂಗಲ್ ಸ್ಕ್ರೀನ್‌ಗಳ ಅವಿಭಾಜ್ಯ ಸಮಯದಲ್ಲಿ ಚಲನಚಿತ್ರ ಪ್ರೇಮಿಗಳಿಗೆ ಜನಪ್ರಿಯ ತಾಣವಾಗಿತ್ತು. 


ಇದನ್ನು ಓದಿ  :The Judgement : ಮೇ 24ಕ್ಕೆ ಕ್ರೇಜಿಸ್ಟಾರ್ ನ "ದ ಜಡ್ಜಮೆಂಟ್" ತೆರೆಗೆ


ಇತ್ತೀಚಿಗಷ್ಟೇ ಕಾವೇರಿ ಚಿತ್ರಮಂದಿರದಲ್ಲಿ ಬಾಲಿವುಡ್ ನ ಮೈದಾನ ಹಾಗೂ ಬಡೇಮಿಯ ಚೋಟೆಮಿಯ ಸಿನಿಮಾಗಳ ಪ್ರದರ್ಶನವಾಗಿತ್ತು. ಆ ಎರಡು ಸಿನಿಮಾಗಳು ಕಾವೇರಿಯಲ್ಲಿ ಕೊನೆಯದಾಗಿ ಪ್ರದರ್ಶನ ಕಂಡ ಸಿನಿಮಾಗಳು. ಇದಾದ ಬಳಿಕ ಎಪ್ರಿಲ್ 19ಕ್ಕೆ ಕೊನೆ ಪ್ರದರ್ಶನವಾಗಿತ್ತು. ಇದೀಗ ಚಿತ್ರಮಂದಿರವನ್ನು ಕೆಡವಿ, ಕಮರ್ಷಿಯಲ್ ಕಾಂಪ್ಲೆಕ್ಸ್ ಆಗಿ ನಿರ್ಮಾಣ ಮಾಡಲು ಕೆಲಸ ಆರಂಭವಾಗಿದೆ. 


ಇತ್ತೀಚಿಗೆ ಚಿತ್ರಮಂದಿರಗಳಿಗೆ ಸಿನಿಮಾಗಳ ಪೂರೈಕೆ ಕಡಿಮೆಯಾಗಿತ್ತು ಮತ್ತು ಓ ಟಿ ಟಿ ಬಂದ ಮೇಲೆ ಚಿತ್ರಮಂದಿರಗಳಿಗೆ ಬರುವ ಜನರ ಸಂಖ್ಯೆ ಕಡಿಮೆಯಾಗಿದೆ ಮತ್ತು ಏಕ ಪರದೆ ಚಿತ್ರಮಂದಿರಗಳು ಸಂಪೂರ್ಣವಾಗಿ ಮುಚ್ಚಿ ಹೋಗುವಂತ ಸ್ಥಿತಿ ಬಂದಿದೆ. 


ಇದನ್ನು ಓದಿ  :Char Dham Yatra : ಅಕ್ಷಯ ತೃತೀಯಕ್ಕೆ ಚಾರ್ ಧಾಮ್ ಗೆ ಭೇಟಿ ನೀಡಿ, ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ 


ಕಾವೇರಿ ಚಿತ್ರಮಂದಿರದ ಮಾಲೀಕ ಪ್ರಕಾಶ್ ನರಸಿಂಹಯ್ಯ ಮಾತನಾಡಿ, ಓಟಿಪಿ ಸದ್ಯಕ್ಕೆ ದೊಡ್ಡ ಸಮಸ್ಯೆಯಾಗಿದೆ ಆದರೆ ಇದಕ್ಕೆ ಯಾವುದೇ ಪರಿಹಾರವಿಲ್ಲ. ಬೇಸರವಾಗಿರುವುದು ನಿಜ ಆದರೆ ಬದಲಾವಣೆ ಜಗದ ನಿಯಮ, ಸಮಯಕ್ಕೆ ತಕ್ಕಂತೆ ಎಲ್ಲವೂ ಬದಲಾಗಲೇ ಬೇಕು ಎಂದು ಹೇಳಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.