ಬೆಂಗಳೂರು : 2021ನೇ ಸಾಲಿನ ಸಿಇಟಿ ಮುಂದೂಡಲಾಗಿದ್ದಂತ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. 


COMMERCIAL BREAK
SCROLL TO CONTINUE READING

ಇಂದು ಬೆಲೆಗ್ಗ ಉಪ ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿಎನ್ ಅಶ್ವತ್ಥ ನಾರಾಯಣ(CN Ashwath Narayan) ಅವರು ಆಗಸ್ಟ್ 28, 29ರಂದು ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದರು. 


ಇದನ್ನೂ ಓದಿ : Laxman Savadi : 'ಸದ್ಯಕ್ಕಿಲ್ಲ KSRTC, BMTC ಬಸ್ ಟಿಕೆಟ್ ದರ ಏರಿಕೆ'


ಪ್ರಸ್ತುತ ಸಿಇಟಿ-2021(KCET 2021 Exam) ಅನ್ನು ದಿನಾಂಕ ಆಗಸ್ಟ್  28 ಮತ್ತು 29 ರಂದು ಮತ್ತು ಕನ್ನಡ ಭಾಷೆ ಪರೀಕ್ಷೆಯನ್ನು ಆಗಸ್ಟ್ 30 ರಂದು ನಡೆಸಲಾಗುವುದು. ಸದ್ಯದಲ್ಲಿಯೇ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗುವುದು. ನವೀಕರಿಸಿದ ಮಾಹಿತಿಗಳಿಗಾಗಿ ಅಭ್ಯರ್ಥಿಗಳು ಪ್ರಾಧಿಕಾರದ ವೆಬ್ ಸೈಟ್ http://kea.kar.nic.in ಗೆ ಭೇಟಿ ನೀಡಿ, ಪಡೆಯಬಹುದಾಗಿ ಎಂದು ತಿಳಿಸಿದೆ.


ಇದನ್ನೂ ಓದಿ : Oath Taking Ceremony : ಪ್ರಮಾಣವಚನ ಸ್ವೀಕರಿಸಿದ 'ಬೈ ಎಲೆಕ್ಷನ್' ನಲ್ಲಿ ಗೆದ್ದ ಇಬ್ಬರು ಶಾಸಕರು!


2021ನೇ ಸಾಲಿ ಸಾಮಾನ್ಯ ಪ್ರವೇಶ ಪರೀಕ್ಷಾ ಟೈಮ್ ಟೇಬಲ್ :


ಆಗಸ್ಟ್ 28 ಶನಿವಾರ, ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ (Biology) 60 ಅಂಕಗಳ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30ರಿಂದ 3.50ರವರೆಗೆ ಗಣಿತ ( Mathematics) ಪರೀಕ್ಷೆ 60 ಅಂಕಗಳಿಗೆ ನಡೆಯಲಿದೆ.


ಇದನ್ನೂ ಓದಿ : KCET 2021 Exam Dates : ವೃತ್ತಿಪರ ಕೋರ್ಸ್ ಗಳ ಸಿಇಟಿಗೆ ಮುಹೂರ್ತ ಫಿಕ್ಸ್ : ಆಗಸ್ಟ್ 28, 29ಕ್ಕೆ CET ಪರೀಕ್ಷೆ! 


ಆಗಸ್ಟ್ 29 ಭಾನುವಾರ ಬೆಳಿಗ್ಗೆ 10.30 ರಿಂದ 11.50ರವರೆಗೆ ಭೌತಶಾಸ್ತ್ರ (Physics) 60 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಮಧ್ಯಾಹ್ನ 2.30ರಿಂದ 3.50ರವರೆಗೆ ರಾಸಾಯನ ಶಾಸ್ತ್ರ ( Chemistry) ಪರೀಕ್ಷೆ 60 ಅಂಕಗಳಿಗೆ ನಡೆಯಲಿದೆ.


ಇದನ್ನೂ ಓದಿ : Heavy Rainfall in Karnataka : ಜೂ. 11 ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ..!


ಆಗಸ್ಟ್ 30 ಸೋಮವಾರದಂದು ಬೆಳಿಗ್ಗೆ 11.30 ರಿಂದ 12.30ರವರೆಗೆ ಗಡಿನಾಡಿನ ಕನ್ನಡಿಗರಿ ಕನ್ನಡ ಭಾಷಾ(Kannada Language) ಪರೀಕ್ಷೆ 50 ಅಂಕಗಳಿಗೆ ನಡೆಯಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ