ಬೆಂಗಳೂರು : ಆಗಸ್ಟ್ 28 ಮತ್ತು 29, 2021 ರಂದು ನಡೆದ  ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಪರೀಕ್ಷೆಯ ಕೀ ಉತ್ತರಗಳನ್ನ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ cetonline.karnataka.gov ನಿಂದ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರದ ಕೀಗಳನ್ನು ಉತ್ತರ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇದರಲ್ಲಿ ಆಕ್ಷೇಪಣೆಗಳೇನಾದರೂ ಇದ್ದಾರೆ ಅಭ್ಯರ್ಥಿಗಳು ಸೆಪ್ಟೆಂಬರ್ 4  ಸಂಜೆ 5:30 ರವರೆಗೆ ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಕೆಸಿಇಟಿ(KCET 2021) ಆಗಸ್ಟ್ 28 ರಂದು ಜೀವಶಾಸ್ತ್ರ ಮತ್ತು ಗಣಿತಶಾಸ್ತ್ರ ಮತ್ತು ಆಗಸ್ಟ್ 29 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪರೀಕ್ಷೆ ನಡೆಸಲಾಗಿದೆ.


ಇದನ್ನೂ ಓದಿ :ಬಿಜೆಪಿ ಮತ್ತು ಪರಿವಾರದ ಮಂದಿ ಈ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದವರಲ್ಲ-ಸಿದ್ಧರಾಮಯ್ಯ


ಅಭ್ಯರ್ಥಿಗಳು ತಮ್ಮ ಆಕ್ಷೇಪಣೆಗಳನ್ನು ಆನ್‌ಲೈನ್‌ನಲ್ಲಿ ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ ಸಲ್ಲಿಸಬಹುದು.


ಕೆಸಿಇಟಿ 2021 ಫಲಿತಾಂಶ(KCET 2021 Results)ವನ್ನು ಸೆಪ್ಟೆಂಬರ್ 20, 2021 ರಂದು ಪ್ರಕಟಿಸುವ ನಿರೀಕ್ಷೆಯಿದ್ದು, ಅಕ್ಟೋಬರ್ ಮೊದಲ ವಾರದಲ್ಲಿ ಕೌನ್ಸೆಲಿಂಗ್ ಆರಂಭವಾಗುವ ಸಾಧ್ಯತೆಯಿದೆ.


ತಾತ್ಕಾಲಿಕ ಕೀ ಉತ್ತರಗಳ(Key Answer) ಬಗ್ಗೆ ಯಾವುದಾದರೂ ಆಕ್ಷೇಪಣೆಗಳು ಇದ್ದರೆ ಆನ್‌ಲೈನ್‌ನಲ್ಲಿ ಸಲ್ಲಿಸಬಹುದು, ಸಮರ್ಥನೆಯೊಂದಿಗೆ, ಕೆಇಎ ವೆಬ್‌ಸೈಟ್‌ನಲ್ಲಿ ಸೆಪ್ಟೆಂಬರ್ 9, 2021 ರ ಸಂಜೆ 5.30 ಕ್ಕಿಂತ ಮೊದಲು ಸಲ್ಲಿಸಬಹುದು. ಪಿಡಿಎಫ್ ರೂಪದಲ್ಲಿ ಕೀ ಉತ್ತರಗಳ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು. ಸಮರ್ಥನೆ ಅಥವಾ ಪೂರಕ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.


ಇದನ್ನೂ ಓದಿ :ಅಂತರಾಷ್ಟ್ರೀಯ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ವರದಿ ಕಡ್ಡಾಯಗೊಳಿಸಿದ ಕರ್ನಾಟಕ


KCET 2021 ರ ಕೀ ಉತ್ತರ ಡೌನ್‌ಲೋಡ್ ಮಾಡಲು ಹಂತಗಳು :


ಹಂತ 1. ಕೆಸಿಇಟಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ


ಹಂತ 2. ಮುಖಪುಟದಲ್ಲಿರುವ 'KCET 2021 ಕೀ ಉತ್ತರ' ಲಿಂಕ್ ಮೇಲೆ ಕ್ಲಿಕ್ ಮಾಡಿ


ಹಂತ 3. ಹೊಸ ಪುಟ ಕಾಣಿಸುತ್ತದೆ, ಕೀ ಉತ್ತರ ಲಿಂಕ್ ಮೇಲೆ ಕ್ಲಿಕ್ ಮಾಡಿ


ಹಂತ 4. ಕೀ ಉತ್ತರ ಪಿಡಿಎಫ್ ಫೈಲ್ ಅನ್ನು ಸ್ಕ್ರೀನ್ ಮೇಲೆ ಕಾಣಿಸುತ್ತದೆ.


ಹಂತ 5. ಅಗತ್ಯವಿದ್ದರೆ ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು.


Direct link to check Biology- provisional answer key


Direct link to check Mathematics- provisional answer key


Direct link to check Chemistry- provisional answer key


Direct link to check Physics- provisional answer key


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.