ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣಗೊಳಿಸಿದ ಡಿಸಿಎಂ ಡಾ.ಜಿ. ಪರಮೇಶ್ವರ್
ಸದಾಶಿವನಗರದ ರಮಣಶ್ರೀ ಪಾರ್ಕ್‌ನಲ್ಲಿ ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣ.
ಬೆಂಗಳೂರು: ನಾಡಪ್ರಭು ಕೆಂಪೇಗೌಡರು ನಿರ್ಮಿಸಿದ ಬೆಂಗಳೂರು ನಗರ ಇಂದು ತನ್ನ ಪರಿಮಿತಿ ಮೀರಿ ಬೆಳೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಸದಾಶಿವನಗರದ ರಮಣಶ್ರೀ ಪಾರ್ಕ್‌ನಲ್ಲಿ ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಕೆಂಪೇಗೌಡ ಅವರು ಈ ನಾಡು ನಿರ್ಮಾತೃ. ದೇಶದಲ್ಲೆ ಅತಿ ದೊಡ್ಡ ಕೆಂಪೇಗೌಡರ ಪ್ರತಿಮೆಯನ್ನು ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿರುವುದು ಹೆಮ್ಮೆಯ ವಿಚಾರ. ಅವರು ನಿರ್ಮಾಣ ಮಾಡಿಕೊಟ್ಟ ನಗರವನ್ನು ಇಂದು ಅದರ ಪರಿಮಿತಿ ಮೀರಿ ಬೆಳೆಸಿದ್ದೇವೆ ಎಂದರು.
ಹಿಂದೆ ಸದಾಶಿವನಗರದಲ್ಲಿ ಗೋಪುರ ಬಿಟ್ಟರೆ ಬೇರೆನೂ ಇರಲಿಲ್ಲ. ನಿರ್ಜನ ಪ್ರದೇಶವಾಗಿತ್ತು. ಈಗ ಇಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಪರಮೇಶ್ವರ್ ತಿಳಿಸಿದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಶಾಸಕ ಅಶ್ವತ್ಥನಾರಾಯಣ್, ಮೇಯರ್ ಸಂಪತ್ ರಾಜ್ ಉಪಸ್ಥಿತರಿದ್ದರು.