ನವದೆಹಲಿ:  ಇಂದು ಕೇಂದ್ರ ಸಾಹಿತ್ಯ ಅಕಾಡೆಮಿ ಭಾರತೀಯ ವಿವಿಧ ಭಾಷೆಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕನ್ನಡದಲ್ಲಿ ಹಿರಿಯ ಲೇಖಕ ಡಿ.ಎಸ್ ನಾಗಭೂಷಣ ಅವರ ಗಾಂಧೀ ಕಥನ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.ಈ ಪ್ರಶಸ್ತಿಯು ರೂ.1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.



COMMERCIAL BREAK
SCROLL TO CONTINUE READING

ಅಮರೇಶ್ ನುಗಡೋಣಿ, ಬೋಳವಾರ್ ಮೊಹಮ್ಮದ್ ಕುಂಹಿ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ವಿಜೇತರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ.ಇದು 50 ಸಾವಿರ ನಗದು ಹಾಗೂ ಫಲಕವನ್ನು ಒಳಗೊಂಡಿರುತ್ತದೆ.



ಬಸು ಬೇವಿನ ಗಿಡದ ಅವರ ಓಡಿ ಹೋದ ಕೃತಿಗೆ ಮಕ್ಕಳ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಇದನ್ನು ಮಾಲತಿ ಪಟ್ಟಣಶೆಟ್ಟಿ, ಎಸ್ ದಿವಾಕರ, ಟಿ.ಪಿ ಅಶೋಕ್ ಅವರನ್ನು ಒಳಗೊಂಡ ತೀರ್ಪುಗಾರರ ಸಮಿತಿಯು ವಿಜೇತರನ್ನು ಆಯ್ಕೆ ಮಾಡಿದೆ.



ಇನ್ನೂ ಕೇಂದ್ರ ಸಾಹಿತ್ಯ ಆಕಾಡೆಮಿಯ ಯುವ ಪುರಸ್ಕಾರವು ಎಚ್. ಲಕ್ಷ್ಮಿ ನಾರಾಯಣ ಸ್ವಾಮಿ ಅವರ ಕಾವ್ಯ ಕೃತಿ ತೊಗಲ ಚೀಲದ ಕರ್ಣ ಕೃತಿಗೆ ಲಭಿಸಿದೆ.