ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘದ ಕೆಎಂಹೆಚ್‌ಕಪ್ ಕ್ರಿಕೆಟ್ ಟೂರ್ನಿ ಲೋಗೋ ಬಿಡುಗಡೆ ಸಮಾರಂಭ ನಡೆದಿದೆ. ಈ ಟೂರ್ನಿಯ ರಾಯಭಾರಿ ಆಗಿರುವ ನಟಿ ಭಾವನಾ ರಾಮಣ್ಣ ಲೋಗೊ ಬಿಡುಗಡೆ ಮಾಡಿದರು. 


COMMERCIAL BREAK
SCROLL TO CONTINUE READING

ಜುಲೈ 20 ಮತ್ತು 21 ರಂದು ವಿಜಯನಗರದ ಬಿ.ಜಿ.ಎಸ್ ಮೈದಾನದಲ್ಲಿ ಈ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ನಡೆಯಲಿದ್ದು, ಪಂದ್ಯಗಳು ಬೆಳಗ್ಗೆ 8 ರಿಂದ ರಾತ್ರಿ 8ವರೆಗೂ ನಡೆಯಲಿವೆ. ನಾಕೌಟ್ ಪಂದ್ಯಗಳು ಆರು ಓವರ್ ಇರುತ್ತವೆ. ಫೈನಲ್ ಪಂದ್ಯ ಎಂಟು ಓವರ್ ನದಾಗಿರುತ್ತವೆ . ಗೆದ್ದ ಮೊದಲ ತಂಡಕ್ಕೆ 49,999 ರೂಪಾಯಿ ಹಾಗೂ ರನ್ನರ್ ತಂಡಕ್ಕೆ 24,999 ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು. 


ಇದನ್ನು ಓದಿ : ವಾಟ್ಸಾಪ್ ಮೂಲಕ ವಿಮಾನ ಟಿಕೆಟ್ ಬುಕಿಂಗ್: ಹೊಸ ವೈಶಿಷ್ಟ್ಯ ಪರಿಚಯಿಸಿದ ಇಂಡಿಗೋ


ಈ ಸಂದರ್ಭದಲ್ಲಿ ತಮ್ಮ ಮೊದಲ ಚಿತ್ರಕ್ಕೆ ಮೇಕಪ್ ಮಾಡಿದ ವೆಂಕಟೇಶ್ ಅವರನ್ನು ನೆನಪಿಸಿಕೊಂಡು ಮಾತು ಆರಂಭಿಸಿದ ಭಾವನಾ ರಾಮಣ್ಣ, ನಟಿಯರಿಗೆ ಕೇಶಾಲಂಕಾರ ಮತ್ತು ಮೇಕಪ್ ಎನ್ನುವುದು ಎಷ್ಟರ ಮಟ್ಟಿಗೆ ಮುಖ್ಯವಾಗುತ್ತದೆ ಮತ್ತು ಅದರಿಂದ ಅವರ ಬೆಳವಣಿಗೆಗೆ ಎಷ್ಟು ಪಾತ್ರವಾಗುತ್ತದೆ ಎಂದು ತಿಳಿಸಿದರು. 


ಇದನ್ನು ಓದಿ : ಪಾನಿಪುರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು!! ಯಾಕೆ ಗೊತ್ತಾ ಕೇಳಿದ್ರೆ ಶಾಕ್ ಆಗುವುದಂತೂ ಖಂಡಿತ..


ಇದೇ ಮೊದಲ ಬಾರಿಗೆ ತಂತ್ರಜ್ಞರಿಗಾಗಿ ‘ಕರ್ನಾಟಕ ರಾಜ್ಯ ಚಲನಚಿತ್ರ ವರ್ಣಾಲಂಕಾರ ಮತ್ತು ಕೇಶಾಲಂಕಾರ ಕಲಾವಿದರ ಸಂಘ’ದಿಂದ ಆಯೋಜಿಸಲಾಗಿರುವ ಕೆಎಂಹೆಚ್‌ಕಪ್ (KMH) ಕ್ರಿಕೆಟ್ ಟೂರ್ನಿಯ ರಾಯಭಾರಿ ಆಗಿರುವ ನಟಿ ಭಾವನಾ ರಾಮಣ್ಣ ಲೋಗೊ ಬಿಡುಗಡೆ ಮಾಡಿದರು  ಕಾಂಗ್ರೆಸ್ ಮುಖಂಡರಾದ ದಿನೇಶ್, ಸಂಘದ ಅಧ್ಯಕ್ಷರಾದ ಎಸ್.ಬಾಬು ಧರ್ಮೇಂದ್ರ ಹಾಗೂ ಕಾರ್ಯದರ್ಶಿ ದಿನೇಶ್ ಆಚಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ