ಮಂಡ್ಯ : ಮಳೆ ಅನಾಹುತ ಇನ್ನು ಮುಂದುವರಿಯಲಿದೆ. ದೇಶಾದ್ಯಂತ ಜಲಪ್ರಳಯ ಎದುರಾಗಲಿದೆ, ಸುನಾಮಿ ಸಹ ಬರುವ ಸಾಧ್ಯತೆ ಇದೆ ಎಂದು ಕೋಡಿ ಶ್ರೀಗಳು ರಾಜ್ಯಾದ್ಯಂತ ಮಳೆ ವಿಚಾರವಾಗಿ ಭವಿಷ್ಯ ನುಡದಿದ್ದಾರೆ.


COMMERCIAL BREAK
SCROLL TO CONTINUE READING

ಜಿಲ್ಲೆಯ ಬೂಕನಕೆರೆ ಗ್ರಾಮದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಕೋಡಿ ಶ್ರೀಗಳು, ಭೂಮಿಯಿಂದ ಹೊಸ ಹೊಸ ವಿಷಜಂತುಗಳು ಉದ್ಭವಿಸಲಿದೆ. ಜನರು ಮನೆಯಿಂದ ಹೊರಡುವಾಗ ಬಡಿಗೆ ಹಿಡಿದು ಹೋಗುವ ಕಾಲ ಬರಲಿದೆ. ಕೊರೊನಾ ಬಗ್ಗೆ ಈ ಹಿಂದೆ ಹೇಳಿದ್ದೆ. ಕಾಡಿನಿಂದ ನಾಡಿಗೆ ಪ್ರಾಣಿಗಳು ಬರುವ ಬಗ್ಗೆಯೂ ಹೇಳಿದ್ದೆ. ಎಲ್ಲಾ ಮಾತುಗಳು ನಿಜವಾಗಿದೆ. ಇದಕ್ಕಿಂತಲೂ ಹೆಚ್ಚಿನ ಕಷ್ಟ ಕಾಲ ಎದುರಾಗಲಿದೆ. ಇದಕ್ಕೆಲ್ಲಾ ಪರಿಹಾರ ದೇವರನ್ನು  ಪೂಜಿಸುವುದು. ಇತ್ತೀಚಿಗೆ ಭಗವಂತನ ಪೂಜೆ ಆಡಂಬರವಾಗಿದೆ. ಯೋಗ್ಯ ಸಾಧುಗಳಿದ್ದಾರೆ, ಗದ್ದುಗೆಗಳಿವೆ ಎಲ್ಲರೂ ಸೇರಿ ಪ್ರಾರ್ಥಿಸಿದ್ರೆ ಜಗತ್ತು ಉಳಿಯುತ್ತದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : MP Sumalatha : ಎಂಎಲ್ಎಗಳ ವಿರುದ್ದ ಮತ್ತೆ ಕಿಡಿಕಾರಿದ ಸಂಸದೆ ಸುಮಲತಾ!


ಮಠದ ವಿರುದ್ಧ ಶರಣರ ವಿರುದ್ಧ ಆರೋಪ ವಿಚಾರವಾಗಿ ಮಾತನಾಡಿದ ಅವರು, ನೀಚಂಗೆ ದೊರೆತನುವು, ಹೇಡಿಂಗೆ ಹಿರಿತನವೂ, ಮೂಡಂಗೆ ಗುರುತನವೂ. ಸಿಕ್ಕಿರುವುದು ಈ ಪರಿಸ್ಥಿತಿ ಉದ್ಭವಿಸಿದೆ.ಇಂತಹ ಆರೋಪಗಳು ಮುಂದೆ ಮತ್ತಷ್ಟು ಹೆಚ್ಚಾಗಲಿದೆ ಎಂದು ಮಾರ್ಮಿಕವಾಗಿ ಉತ್ತರಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.