ಕೋಲಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಾಯಕರ ಮಧ್ಯೆ ಮಾರಾಮಾರಿ!
ಲೋಕಸಭಾ ಚುನಾವಣಾ ಹೊಸ್ತಿಲಲ್ಲಿ ಕೋಲಾರ ಕಾಂಗ್ರೇಸ್ ನಲ್ಲಿ ಗುಂಪುಗಾರಿಕೆ ಭುಗಿಲೆದ್ದಿದೆ. ಫ್ಲೆಕ್ಸ್ ನಲ್ಲಿ ತಮ್ಮ ನಾಯಕರ ಭಾವಚಿತ್ರ ಹಾಕಿಲ್ಲ ಅನ್ನೋ ಕಾರಣಕ್ಕೆ ಕೋಲಾರ ಕಾಂಗ್ರೆಸ್ ನಾಯಕರ ಮಧ್ಯೆ ಮಾರಾಮಾರಿ ನಡೆದಿದ್ದು ಗುಂಪುಗಾರಿಕೆಗೆ ಸಾಕ್ಷಿಯಾಗಿದೆ. ಇಷ್ಟಕ್ಕೂ ಕೋಲಾರ ಕಾಂಗ್ರೇಸ್ ಕಛೇರಿಯಲ್ಲಿ ಆಗಿದ್ದೇನು ಅಂತೀರಾ ಇಲ್ಲಿದೆ ನೋಡಿ...
ಕೋಲಾರ: ಸಭೆ ಆರಂಭಕ್ಕೂ ಮುನ್ನವೇ ಕಾಂಗ್ರೆಸ್ ಕಚೇರಿ ಅಕ್ಷರಶ ರಣರಂಗವಾಗಿ ಹೋಗಿತ್ತು.. ಹೌದು.... ಕಾಂಗ್ರೆಸ್ ಮುಖಂಡರನ್ನ ಕಾರ್ಯಕರ್ತರೇ ಎಳೆದು ಎಳೆದು ಹೊಡೆದುಬಿಟ್ಟರು... ನೂಕಾಟ, ತಳ್ಳಾಟದ ನಡುವೆ ಶರ್ಟ್ ಜಗ್ಗಿ ಮುಖಂಡನ ಕಪಾಳಕ್ಕೆ ಬಾರಿಸಿಯೇ ಬಿಟ್ಟರು... ಇಷ್ಟೆಲ್ಲಾ ರಾದ್ದಾಂತಕ್ಕೆ ಕಾರಣವಾಗಿದ್ದು ಡಿಸಿಸಿ ಬ್ಯಾಂಕ್ ಬಳಿ ಇರುವ ಕೋಲಾರ ಜಿಲ್ಲಾ ಕಾಂಗ್ರೇಸ್ ಕಚೇರಿ..
ಇಂದು ಚುನಾವಣೆ ಕಾಂಗ್ರೆಸ್ ಉಸ್ತುವಾರಿಗಳಾದ ಪಿ.ಆರ್.ರಮೇಶ್ ಹಾಗೂ ರಾಜ್ ಕುಮಾರ್ ನೇತೃತ್ವದಲ್ಲಿ ಬೂತ್ ಮಟ್ಟದ ಏಜೆಂಟರ ಸಭೆಯನ್ನ ಕರೆಯಲಾಗಿತ್ತು.ಸಭೆ ಆರಂಭವಾಗುತ್ತಿದ್ದಂತೆ ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್, ಶಾಸಕ ಕೊತ್ತೂರು ಮಂಜುನಾಥ್, ಮಾಜಿ ಸ್ಪೀಕರ್ ಬೆಂಬಲಿಗರು ನಮ್ಮ ನಾಯಕರ ಫೋಟೊವನ್ನ ಫ್ಲೆಕ್ಸ್‌ನಲ್ಲಿ ಹಾಕಿಲ್ಲ ಅನ್ನೋ ಕಾರಣಕ್ಕೆ ರೊಚ್ಚಿಗೆದ್ದರು... ಅಲ್ಲದೇ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿದವರನ್ನ ವೇದಿಕೆಯಲ್ಲಿ ಕೂರಿಸಲಾಗಿದೆ ಎಂದು ತಗಾದೆ ತೆಗೆದರು..
ಇದನ್ನೂ ಓದಿ-ಬೋಗಸ್ ಗ್ಯಾರಂಟಿ ಯೋಜನೆಗಳ ಮೂಲಕ ಕಾಂಗ್ರೆಸ್ ಭ್ರಷ್ಟಾಚಾರ!
ಈ ವೇಳೆ ಮುನಿಯಪ್ಪ ಬೆಂಬಲಿಗ ಊರುಬಾಗಲು ಶ್ರೀನಿವಾಸ್ ಹಾಗೂ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿಗರಾದ ಅಂಬರೀಶ್, ಮುರಳಿ, ಅಪ್ಸರ್, ಶಿವಕುಮಾರ್ ನಡುವೆ ಗಲಾಟೆ ಶುರುವಾಯ್ತು. ಗಲಾಟೆ ಜೋರಾಗಿ ಕೈ ಕೈ ಮಿಲಾಯಿಸಿದ ಎರಡು ಗುಂಪುಗಳ ನಾಯಕರು ಪರಸ್ಪರ ಬಡಿದಾಡಿಕೊಂಡ್ರು.ಇನ್ನು ಸಭೆಯಲ್ಲಿದ್ದ ಕಾರ್ಯಕರ್ತರು ಏನಾಗ್ತಿದೆ ಅನ್ನೋಷ್ಟ್ರಲ್ಲಿ ಎಲ್ಲವೂ ಚೆಲ್ಲಾಪಿಲ್ಲಿಯಾಗಿತ್ತು...ತಕ್ಷಣವೇ ಸಭೆಯಿಂದ ಹೊರ ನಡೆದ ಊರುಬಾಗಲು ಶ್ರೀನಿವಾಸ್ ಖಾಸಗಿ ಆಸ್ಪತ್ರೆಗೆ ದಾಖಲಾದ್ರು. ಅಲ್ಲದೆ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಶಾಸಕ ಮಂಜುನಾಥ್ ಬೆಂಬಲಿಗರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು..
ಇದನ್ನೂ ಓದಿ-ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ!
ಕೋಲಾರ ಜಿಲ್ಲಾ ಕಾಂಗ್ರೇಸ್‌ನಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ, ಗಲಾಟೆ ಇದೆ ಮೊದಲೇನಲ್ಲ, ಪ್ರತಿ ಚುನಾವಣೆಯಲ್ಲೂ ಕಾಂಗ್ರೇಸ್ ನಲ್ಲಿರುವ ಎರಡು ಗುಂಪುಗಳ ಮಧ್ಯೆ ಗಲಾಟೆಯಾಗುವುದು ಸಂಪ್ರದಾಯ. ಅದರಲ್ಲೂ ಕಳೆದ ಹಲವು ವರ್ಷಗಳಿಂದ ಮುನಿಯಪ್ಪ ಹಾಗೂ ರಮೇಶ್ ಕುಮಾರ್ ಬಣದ ಮಧ್ಯೆ ಗುಂಪುಗಾರಿಕೆ, ಗಲಾಟೆ, ಮುಸುಕಿನ ಗುದ್ದಾಟ ನಡೆಯುತ್ತಲೆ ಇದೆ. ಈ ಬೆನ್ನಲ್ಲೆ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು ಮತ್ತೆ ಸಚಿವ ಮುನಿಯಪ್ಪ ಲೋಕಸಭೆ ಕಾಂಗ್ರೇಸ್ ಅಭ್ಯರ್ಥಿಯಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಹಾಗಾಗಿ ಮತ್ತೆ ಆಕ್ಟೀವ್ ಆಗಿರುವ ಕೋಲಾರ ಕಾಂಗ್ರೇಸ್‌ನ ಬಣ ರಾಜಕೀಯ ಹಾಗು ಗುಂಪುಗಾರಿಕೆ ಇಂದಿನ ಮಾರಾಮಾರಿಗೆ ಸಾಕ್ಷಿಯಾಗಿದೆ. ಸುಮಾರು ಮೂರು ಗಂಟೆಗಳ ಕಾಲ ನಡೆದ ಸಭೆಯುದ್ದಕ್ಕೂ ಗೊಂದಲ, ಗಲಾಟೆ, ಮಾರಾಮಾರಿಯಲ್ಲೆ ಸಭೆ ಅಂತ್ಯವಾಯಿತು. ಸಭೆ ಬಳಿಕ ಮಾತನಾಡಿದ ಶಾಸಕರ ಬೆಂಬಲಿಗರು ನಮ್ಮ ಮೇಲೆ ಹಲ್ಲೆಗೆ ಮುಂದಾದಾಗ ನಾವು ಸಹ ಗಲಾಟೆ ಮಾಡಬೇಕಾಯಿತು ಎಂದರು.
ಒಟ್ನಲ್ಲಿ ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೆ ಕೋಲಾರ ಜಿಲ್ಲಾ ಕಾಂಗ್ರೆಸ್‌ನಲ್ಲಿ ಬಣ ಹಾಗೂ ಗುಂಪುಗಾರಿಕೆ ಸ್ಪೋಟಗೊಂಡಿದೆ. ಜಿಲ್ಲಾ ಕಾಂಗ್ರೇಸ್‌ಗೆ ಇದು ಹೊಸದಲ್ಲವಾದ್ರೂ ಇದೆ ಗುಂಪುಗಾರಿಕೆ ಬಣ ರಾಜಕೀಯಕ್ಕೆ ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತಿದ್ದು ಅಂತಿದಾರೆ ಕೋಲಾರ ಜನ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.