ಬೆಂಗಳೂರು: ವಜ್ರಮಹೋತ್ಸವ ಕಾರ್ಯಕ್ರಮದ ನಂತರ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ದೂರವಾಣಿ ಕರೆ ಮಾಡಿದ್ದ ರಾಷ್ಟ್ರಪತಿ  ರಾಮನಾಥ್ ಕೋವಿಂದ್, ನಿಮ್ಮನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ ಎಂದು ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಬುಧವಾರ ಸಂಜೆ 5:30 ರ ಸಮಯದಲ್ಲಿ ಮಾಜಿ ಪ್ರಧಾನಿ ದೇವೇಗೌಡರಿಗೆ ದೂರವಾಣಿ ಕರೆಮಾಡಿದ್ದರು. ಸುಮಾರು 10 ನಿಮಿಷ‌ ಉಭಯ ನಾಯಕರು ಸಭಾಷಣೆ ನಡೆಸಿದರು. ಆ ಸಮಯದಲ್ಲಿ ಭಾಷಣದಲ್ಲಿ ಹೆಸರು ಪ್ರಸ್ತಾಪದ ಗೊಂದಲದ ಬಗ್ಗೆಯೂ ರಾಷ್ಟ್ರಪತಿ ಪ್ರಸ್ತಾಪಿಸಿದರು. ಆ ಬಗ್ಗೆ ಯಾವುದೇ ಬೇಸರವಿಲ್ಲ ಎಂದು ರಾಷ್ಟ್ರಪತಿಗಳಿಗೆ ಮಾಜಿ ಪ್ರಧಾನಿ ಹೇಳಿದ್ದಾರೆ.


ವಜ್ರಮಹೋತ್ಸವ ಸಮಾರಂಭದಲ್ಲಿ ತಮ್ಮನ್ನು ಭೇಟಿ ಮಾಡಲು ಉತ್ಸುಕನಾಗಿದ್ದೆ ಎಂದು ಕೋವಿಂದ್, ದೇವೇಗೌಡರಿಗೆ ತಿಳಿಸಿದ್ದಾರೆ. ಅಲ್ಲದೆ ದೆಹಲಿಗೆ‌ ಬಂದಾಗ ಭೇಟಿ ಆಗುವಂತೆ ಸಹ ಆಹ್ವಾನ ನೀಡಿದ್ದಾರೆ. ಪ್ರವಾಸದಲ್ಲಿರುವ ಕಾರಣ, ತಮ್ಮನ್ನು ಭೇಟಿ ಮಾಡಲು ಆಗದೆ ಇರುವುದರ ಬಗ್ಗೆ ನನಗೂ ವಿಷಾದ ಇದೆ ಎಂದು ಮಾಜಿ ಪ್ರಧಾನಿ ಎಚ್ಡಿಡಿ ತಿಳಿಸಿದ್ದಾರೆ.


ವಜ್ರಮಹೋತ್ಸವದ ರಾಷ್ಟ್ರಪತಿ ಭಾಷಣದಲ್ಲಿ ದೇವೇಗೌಡರ ಹೆಸರು ಇರಲಿಲ್ಲ, ಜೆಡಿಎಸ್ ಶಾಸಕರು ದೇವೇಗೌಡರ ಹೆಸರು ಹೇಳಿದಾಗ ರಾಷ್ಟ್ರಪತಿಗಳು ದೇವೇಗೌಡರು ನನ್ನ ಆತ್ಮೀಯ ಸ್ನೇಹಿತರು ಎಂದು ಹೇಳಿದ್ದರು.