ಚಿಕ್ಕಮಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ತನ್ನ ಮಗಳ ಮದುವೆಗೆ ಆಹ್ವಾನ ನೀಡಲು ಜಿಲ್ಲೆಯ ಮಠಾಧೀಶರನ್ನು ಭೇಟಿ ಮಾಡಿದ್ದರು.


COMMERCIAL BREAK
SCROLL TO CONTINUE READING

ಬಾಳೆಹೊನ್ನೂರಿನ ರಂಭಾಪುರಿ ಶ್ರೀ ಡಾ. ಪ್ರಸನ್ನರೇಣುಕ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಶೃಂಗೇರಿಯ ಶ್ರೀ ಶಾರದಾಂಬೆ ದರ್ಶನ ಪಡೆದು ಬಳಿಕ ಶ್ರೀ ಭಾರತೀ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದು ಮಗಳ ಮದುವೆಗೆ ಬಂದು ಆಶೀರ್ವಾದ ಮಾಡಬೇಕೆಂದು ಡಿ.ಕೆ.ಶಿವಕುಮಾರ್‌ (D.K.Shivakumar)ಕೇಳಿಕೊಂಡರು.


BJP-JDS: ಮೇಲ್ಮನೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ..!


ಅನಂತರ ಡಿ.ಕೆ.ಶಿವಕುಮಾರ್‌ ಅವರು ಕೊಪ್ಪ ತಾಲೂಕಿನ ಗೌರಿಗದ್ದೆ ಆಶ್ರಮಕ್ಕೆ ತೆರಳಿ ಅವಧೂತರಾದ ವಿನಯ್‌ ಗುರೂಜಿ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲವಿದ್ದು, ಮಾತುಕತೆ ನಡೆಸಿದರು.


Farmer Protest : ಕೆಂಪುಕೋಟೆ ಮೇಲೆ ಧ್ವಜಾರೋಹಣ ಮಾಡಿದವನು ಬಿಜೆಪಿ ಕಾರ್ಯಕರ್ತ: ಸಿದ್ದರಾಮಯ್ಯ


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಿನಯ್‌ ಗುರೂಜಿ, ಮದುವೆಗೆ ಆಹ್ವಾನ ನೀಡಲು ಡಿ.ಕೆ.ಶಿವಕುಮಾರ್‌ ಬಂದಿದ್ದರು. ಎರಡು ಕುಟುಂಬಗಳು ಒಂದಾಗಬೇಕೆಂದು ಆಶ್ರಮ ಪ್ರಯತ್ನ ಮಾಡಿ ಮಾತುಕತೆ ಸಹ ಮಾಡಿತ್ತು. ಈ ಎರಡು ಕುಟುಂಬಗಳು ಆಶ್ರಮಕ್ಕೆ ನಿಕಟ ಸಂಪರ್ಕ ಹೊಂದಿವೆ. ಇದು, ಆಶ್ರಮದ ಮದುವೆ ಇದ್ದ ಹಾಗೆ ಎಂದರು.


RLB: ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 'ಭರ್ಜರಿ ಗುಡ್‌ ನ್ಯೂಸ್'..!


ವ್ಯಾಲೆಂಟೈನ್‌ಸ್‌ ಡೇ ಮದುವೆಯಾಗಲಿ ಎಂದು ತಮಾಷೆಗೆ ಹೇಳಿದ್ದೆ. ಅದು ನೋಡಿದರೆ ಫೆ.14ರಂದು ವ್ಯಾಲೆಂಟೈನ್ಸ್‌ ಡೇ ದಿನ ಮದುವೆ ಆಗ್ತಾ ಇದೆ. ಇದು, ಖುಷಿಯ ದಿನ. ಇಬ್ಬರು ಮಕ್ಕಳದ್ದು ಒಂದೇ ಥಿಂಕಿಂಗ್‌ ಎಂದು ಹೇಳಿದ ಅವರು, ಸೂಕ್ಷ್ಮ ಶರೀರದಲ್ಲಿ ಸಿದ್ಧಾರ್ಥ ಇರುತ್ತಾರೆ. ಅವರು ಅಲ್ಲಿಂದಲೇ ಮದುವೆ ನೋಡಿ ಖುಷಿ ಪಡುತ್ತಾರೆ ಎಂದು ತಿಳಿಸಿದರು.


Uddhav Thackeray: 'ಕರ್ನಾಟಕ-ಮಹಾರಾಷ್ಟ್ರ ಗಡಿಯನ್ನು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿ'


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.