DK Shivakumar : ಡಿಕೆಶಿ ಆಪ್ತರಿಗೆ ನೋಟಿಸ್ ; `ಕಿರುಕುಳ ಕೊಡಕ್ಕೂ ಲಿಮಿಟ್ ಇರಬೇಕು`
ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ವಿಜಯ್ ಮುಳುಗುಂದ ಅವರಿಗೆ ಸಿ ಬಿ ಐ ನೋಟಿಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಿರುಕುಳ ಕೊಡಕ್ಕೂ ಒಂದು ಲಿಮಿಟ್ ಇರಬೇಕು ಎಂದು ಕಿಡಿಕಾರಿದರು.
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಪ್ತ ವಿಜಯ್ ಮುಳುಗುಂದ ಅವರಿಗೆ ಸಿಬಿಐ ನೋಟಿಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಿರುಕುಳ ಕೊಡಕ್ಕೂ ಒಂದು ಲಿಮಿಟ್ ಇರಬೇಕು ಎಂದು ಕಿಡಿಕಾರಿದರು.
ತಮ್ಮ ನಿವಾಸದ ಬಳಿ ಮಾತಾನಾಡಿದ ಡಿಕೆ ಶಿವಕುಮಾರ್, ನನ್ನ ಜೊತೆಗೆ ವ್ಯವಹಾರ ಮಾಡಿದವರಿಗೆಲ್ಲ ನೊಟೀಸ್ ಕೊಡ್ತಿದ್ದಾರೆ. ವಿಜಯ ಮುಳುಗುಂದ ಮಾತ್ರವಲ್ಲ 30-40 ಜನರಿಗೆ ನೊಟೀಸ್ ಕೊಡ್ತಿದ್ದಾರೆ.ಎಷ್ಟೂ ಅಂತ ಕಿರುಕುಳ ಕೊಡ್ತೀರಾ,ಕಿರುಕುಳಕ್ಕೊಂಡು ಲಿಮಿಟ್ ಇರಬೇಕು.ಮಂತ್ರಿಗಳದ್ದೂ ವ್ಯವಹಾರ ತನಿಖೆ ಮಾಡಿಸಿ ನೋಡೋಣ,ಶಾಸಕರಾಗಿದ್ದಾಗ ಎಷ್ಟಿತ್ತು ಈಗ ಮಂತ್ರಿಗಳಾದಾಗ ಎಷ್ಟಿದೆ ತನಿಖೆ ಮಾಡಿಸಿ.ಅವರೆಲ್ಲ ಬೆಳ್ಳುಳ್ಳಿ ಅಡಿಕೆ ಬೆಳೆದು ಆಸ್ತಿ ಮಾಡಿದ್ರಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಡಿಜಿಟಲ್ ಆರ್ಥಿಕತೆಗೆ ರಾಜ್ಯದಿಂದ 300 ಬಿಲಿಯನ್ ಡಾಲರ್ ಕೊಡುಗೆ ಗುರಿ: ಅಶ್ವತ್ಥ ನಾರಾಯಣ
ನಾನೂ ಮಂತ್ರಿಗಳ ಆಸ್ತಿ ವಿವರ ಆರ್ಟಿಐ ನಲ್ಲಿ ದಾಖಲೆ ಸಂಗ್ರಹ ಮಾಡಿದ್ದೇನೆ,ನನಗೆ ಕಿರಕುಳ ಕೊಟ್ಟು ಇನ್ನೇನು ಬಾಕಿ ಉಳಿದಿದೆ.ನನ್ನ ತಾಯಿಯ ಆಸ್ತಿಗೆ ನಾನು ಬೇನಾಮಿ ಅಂತ ಸೀಜ್ ಮಾಡ್ತಾರೆ.ಅಂದ್ರೆ ಬಾಕಿ ಏನು ಉಳಿಯಿತು? ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ನಾನು ಆಗಸ್ಟ್ ಗೆ ಶುರುವಾಗತ್ತೆ ಅಂತ ಹೇಳಿದ್ದೆ,ಅದೇ ರೀತಿ ಈಗ ನಡೆಯುತ್ತಿದೆ. ನಮಗೂ ಮಾಹಿತಿ ಕೊಡೋರು ಇದಾರೆ, ಏನೇನ್ ಮಾಡ್ತಾರೆ ಅನ್ನೋದು ನಮಗೆ ಹೇಳೋರು ಇದಾರೆ. ನನ್ನದು ಇನ್ನೇನು ಉಳಿದಿದೆ..? ಬಿಜೆಪಿಯಲ್ಲಿ ಇರೋರೆಲ್ಲಾ ಸತ್ಯ ಹರಿಶ್ಚಂದ್ರರಾ? ಎಂದರು.
ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರು ಕಾಂಗ್ರೆಸ್ ಏಜೆಂಟ್ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಅವರು ಇವತ್ತಿನ ತನಕ ನನ್ನನ್ನಾಗಲಿ ಸಿದ್ದರಾಮಯ್ಯನವರನ್ನಾಗಲಿ ಭೇಟಿ ಆಗಿರಲಿಲ್ಲನಿನ್ನೆ ವಿರೋಧ ಪಕ್ಷದ ನಾಯಕರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಸಿಎಂ ಭೇಟಿ ಮಾಡಿದ್ದರು? ಇವರು ಇವರ ಅನುಕೂಲಕ್ಕೋಸ್ಕರ ಆರೋಪ ಮಾಡುತ್ತಾರೆ. ಬಿಜೆಪಿಯವರು ಏಳು ಎಂಟು ಕಡೆ ಜನೋತ್ಸವ ಆಚರಣೆ ಮಾಡ್ತಾರಂತೆ ಮಾಡಿಕೊಳ್ಳಲ್ಲಿ. ವಿರೋಧ ಪಕ್ಷವಾಗಿ ನಾವು ಇವರ ಭ್ರಷ್ಟೋತ್ಸವ ಆಚರಣೆ ಮಾಡಬೇಕಲ್ಲ, ವಿರೋಧ ಪಕ್ಷವಾಗಿ ನಮ್ಮ ಮೇಲೂ ಜವಾಬ್ದಾರಿ ಇದೆಯಲ್ಲ. ಇವರ ಮಾಜಿ ಸಚಿವರೊಬ್ಬರು ಅಪೆಕ್ಸ್ ಬ್ಯಾಂಕ್ ಗೆ 600-700 ಕೋಟಿ ಸಾಲ ಬಾಕಿ ಇಟ್ಕೊಂಡಿದ್ದಾರೆ.
ಇದನ್ನೂ ಓದಿ : Tumkur Accident Case: ಪ್ರಧಾನಿ ಮೋದಿ ಸಂತಾಪ, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಣೆ
ಅವರ ಬಗ್ಗೆಯೂ ಮಾತನಾಡಬೇಕಲ್ಲ ನಾವು?, ಈಶ್ವರಪ್ಪಗೆ ತನಿಖೆ ಆಗೋ ಮೊದಲೇ ಕ್ಲಿನ್ ಚಿಟ್ ಕೊಟ್ರಲ್ಲ. ಅದರ ಬಗ್ಗೆಯೂ ನಾವು ಮಾತಾಡಬೇಕಲ್ಲ. ಇದೇ ಕೋಲಾರ ಇನಚಾರ್ಜ್ ಮಿನಿಸ್ಟರ್ ವಿಷಯಕ್ಕೆ ಚಾಮರಾಜನಗರ ರೈತರು ಪತ್ರ ಬರೆದಿದ್ದರಲ್ಲ. ಪ್ರಧಾನಿಗಳಿಗೇ ಪತ್ರ ಬರೆದರೂ ಯಾಕೆ ಕ್ರಮ ತೆಗೆದುಕೊಳ್ಳಲಿಲ್ಲ ಹಾಗಾದ್ರೆ ಎಂದು ಹೇಳಿದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.