ಪಟಾಕಿ ಯಾರ್ದಾದ್ರೂ ಆಗಿರ್ಲಿ ಹಚ್ಚೋರು ಬಿಜೆಪಿಯವ್ರೇ: ‘ನಮೋ’ ನಮಃ ಎಂದು ಡಿಕೆಶಿ ಟೀಕೆ
ವಾಣಿಜ್ಯ ಸಿಲಿಂಡರ್ ಬೆಲೆ 2000ರೂ. ದಾಟಿದೆ. ದೀಪಾವಳಿಗೆ ಮುಂಚೆನೇ ಪಕ್ಕದಲ್ಲೇ ಎಲ್ಲೋ ಪಟಾಕಿ ಸಿಡಿದಂತಾಗಿದೆ.
ಬೆಂಗಳೂರು: ಬೆಲೆ ಏರಿಕೆ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪಟಾಕಿ ಯಾರ್ದಾದ್ರೂ ಆಗಿರ್ಲಿ ಕೊನೆಗೆ ಹಚ್ಚೋರು ಮಾತ್ರ ಬಿಜೆಪಿ(BJP Govt)ಯವ್ರೇ. ಈ ದೀಪಾವಳಿಗೆ ಬೆಲೆ ಏರಿಕೆಗಿಂತ ನೀವು ಕೊಟ್ಟ ದೊಡ್ಡ ಕೊಡುಗೆ ಏನಿದೆ? ವಾಣಿಜ್ಯ ಸಿಲಿಂಡರ್ ಬೆಲೆ 2000ರೂ. ದಾಟಿದೆ. ದೀಪಾವಳಿಗೆ ಮುಂಚೆನೇ ಪಕ್ಕದಲ್ಲೇ ಎಲ್ಲೋ ಪಟಾಕಿ ಸಿಡಿದಂತಾಗಿದೆ. ಬಡಪಾಯಿ ಹೋಟೆಲ್ ಮಾಲೀಕರಿಗಂತೂ ಒಳ್ಳೆ ಕೊಡುಗೆ ನೀಡಿದ್ದೀರಿ. ‘ನಮೋ’ ನಮಃ’ ಎಂದು ಡಿಕೆಶಿ ಕೇಂದ್ರ ಸರ್ಕಾರವನ್ನು ಟೀಕಿಸಿದ್ದಾರೆ.
Congress) ಕೂಡ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ‘ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರಿಗೆ ಅಷ್ಟೇ ಅಲ್ಲದೇ ಸರ್ಕಾರಕ್ಕೂ ತಟ್ಟಿದೆ! ಹೀಗಿದ್ದರೂ ಬಿಜೆಪಿ ನಾಯಕರು ಬೆಲೆ ಏರಿಕೆಯನ್ನು ಸಮರ್ಥಿಸಿಕೊಳ್ಳುತ್ತಿರುವುದು ನಾಚಿಕೆಗೇಡು. ಬಿಸಿಯೂಟಕ್ಕೆ ಬೇಳೆ, ಅಡುಗೆ ಎಣ್ಣೆ ನೀಡದೆ ನೀವೇ ಖರೀದಿಸಿಕೊಳ್ಳಿ ಎಂದಿದ್ದಾರೆ. ಈ ಸರ್ಕಾರದ ಅಸಾಮರ್ಥ್ಯಕ್ಕೆ ಇದಕ್ಕಿಂತಾ ಸಾಕ್ಷಿ ಬೇಕಾ?’ ಅಂತಾ ಟ್ವೀಟ್ ಮೂಲಕ ಕುಟುಕಿದೆ.
ಇದನ್ನೂ ಓದಿ: ಚುನಾವಣೆ, ಉಪಚುನಾವಣೆ ಬಂದಾಗಲೆಲ್ಲ ವರಸೆ ಬದಲಾಯಿಸುವ ಸಿದ್ದರಾಮಯ್ಯ: ಬಿಜೆಪಿ
‘ಒಬ್ಬ ಪದವೀಧರನಿಗೆ ಕೆಲಸ ಸಿಗದ ಕಾರಣ ಬೀದಿಯಲ್ಲಿ ಪಕೋಡ ಮಾರಬೇಕಾದ ಭಾರತವನ್ನು ನೀವು ಎಂದಾದರೂ ಊಹಿಸಿದ್ದೀರಾ? ಇದು ಪ್ರಧಾನಿ ಮೋದಿ(Narendra Modi)ಯವರ ‘ಹೊಸ ಭಾರತ’. ನಾವು ಇದನ್ನು ಒಪ್ಪುವುದಿಲ್ಲ, ಹೋರಾಟ ಮಾಡುತ್ತೇವೆ’ ಅಂತಾ ಕಾಂಗ್ರೆಸ್ ಟ್ವೀಟ್ ಮಾಡಿದೆ.
ಹೆಬ್ಬೆಟ್ಟು ಗಿರಾಕಿ ಪ್ರಧಾನಿ ಮೋದಿಯಿಂದ ದೇಶ ನರಳುತ್ತಿದೆ: ಕಾಂಗ್ರೆಸ್
ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ(Gas Price Hike) ಹೆಚ್ಚಳವಾಗುತ್ತಿದ್ದಂತೆ ಹೊಟೇಲ್ ಗಳಲ್ಲಿ ಆಹಾರ ಪದಾರ್ಥಗಳ ಬೆಲೆ, ಬೇಕರಿಗಳಲ್ಲಿನ ತಿಂಡಿ-ತಿನಿಸುಗಳಲ್ಲಿ ಸಹ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಈಗಾಗಲೇ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಶತಕ ಭಾರಿಸಿವೆ. ಅಗತ್ಯ ವಸ್ತುಗಳ ಬೆಲೆಗಳು ಕೂಡ ಗಗನಕ್ಕೇರಿವೆ. ಬೆಲೆ ಏರಿಕೆಯ ಹೊಡೆತಕ್ಕೆ ಸಿಲುಕಿರುವ ಜನಸಾಮಾನ್ಯರು ಪರದಾಡುವಂತಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ