ವಿಜಯನಗರ : ಬಿಜೆಪಿಯವರು ಎಲ್ಲಡೆ ಕಾಶ್ಮೀರ ಫೈಲ್ ಚಿತ್ರ ಹಾಕಲು ಎಲ್ಲರ ಮೇಲೆ ಒತ್ತಡ ಹಾಕಿ ಚಿತ್ರ ಪ್ರದರ್ಶನ ಮಾಡಲು ಹೊರಟ್ಟಿದ್ದರು. ಬಿಜೆಪಿಯವರು ಚಿತ್ರ ಮಂದಿರದ ಮಾಲೀಕರನ್ನ ಹೆದರಿಸಿ ಚಿತ್ರ ಪ್ರದರ್ಶನ ಮಾಡಲು ಹೊರಟ್ಟಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ. 


COMMERCIAL BREAK
SCROLL TO CONTINUE READING

ಈ ಕುರಿತು ಹೊಸಪೇಟೆ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಡಿಕೆ ಶಿವಕುಮಾರ್(DK Shivakumar), ನಾನು ನಿನ್ನೆ ಆ ಕುರಿತು ಮಾತನಾಡಿದ್ದೆ. ಗುಪ್ತಚರ ಇಲಾಖೆ ಮಾಹಿತಿ ಅವರಿಗೂ ಹೋಗಿದೆ. ಇಂದು ಸಿಎಂ ಬೊಮ್ಮಾಯಿ ಫಿಲ್ಮ್ ಚೇಂಬರ್ ನವರನ್ನ ಕರೆಯಿಸಿ ಮಾತನಾಡಿದ್ದಾರೆ. ಶಿವರಾಜ್ ಕುಮಾರರನ್ನ ಕರೆಯಿಸಿ ಮಾತನಾಡಿದ್ದಾರೆ. ಇದು ಶಿವರಾಜ್ ಕುಮಾರರ ಚಿತ್ರ ಅಲ್ಲ, ಪುನೀತ ರಾಜಕುಮಾರ ಅವರದ್ದು. ಇದು ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ, ಕನ್ನಡಿಗರಿಗೆ ಆದ ಅವಮಾನ. ಕೂಡಲೇ ಸಿಎಂ ಬಸವರಾಜ ಬೊಮ್ಮಾಯಿ ಎಲ್ಲ ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.


ಇದನ್ನೂ ಓದಿ : ಜಮೀರ್ ಅಹಮದ್ ನೀವು 'ನಮ್ಮ ಆರ್ ಎಸ್ ಎಸ್ 'ಎಂದು ಹೇಳಬೇಕು': ಸ್ಪೀಕರ್ ಕಾಗೇರಿ


ಜೇಮ್ಸ್ ಮೂವಿ(James Movie) ಬದಲಾಗಿ RRR ಚಿತ್ರ ಪ್ರದರ್ಶನ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ನಾವೂ ನಮ್ಮ ನಾಡಿನ ಭಾಷೆ. ನಾಡಿನ ಜಲ. ನೆಲವನ್ನು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಹೇಳಿದರು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.