ಕಾರವಾರ: ಸಂತೋಷ್‍ರವರ ಯಾವುದೋ ವೀಡಿಯೋ ಮಾಡಿ ಎಂಎಲ್‍ಸಿಗೆ ಮತ್ತು ಮಿನಿಸ್ಟರ್ ಕೈಗೆ ಕೊಟ್ಟಿದ್ದಾರೆ ದೆಹಲಿ ನಾಯಕರಿಗೆ 2-3 ದಿನದ ಹಿಂದೆ ಆ ಮಿನಿಸ್ಟರ್​ ಮತ್ತು ವಿಧಾನ ಪರಿಷತ್​ ಸದಸ್ಯ ದೆಹಲಿ ನಾಯಕರಿಗೆ ತಲುಪಿಸಿದ್ದರು ಎಂದು ತಿಳಿದುಬಂತು ಅವರ ಪರ್ಸನಲ್ ವೀಡಿಯೊ ತೋರಿಸಿದ್ದಾರೆ. ಹೀಗಾಗಿ ಬೇಸರದಿಂದ ಆತ್ಮಹತ್ಯೆಗೆ ಯತ್ನಿಸಿರಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ನಗರದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, 'ಸಂತೋಷ್(Santosh) ಯಾರದ್ದೋ ವೈಯಕ್ತಿಕ ವಿಡಿಯೊವನ್ನು ವಿಧಾನಪರಿಷತ್ ಸದಸ್ಯರಿಗೆ ಹಾಗೂ ಸಚಿವರಿಗೆ ಕೊಟ್ಟ ಮಾಹಿತಿ ಎರಡು ಮೂರು ತಿಂಗಳ ಹಿಂದೆ ಬಂದಿತ್ತು. ಅದನ್ನು ಮುಂದೆ ಇಟ್ಟುಕೊಂಡು ವಿಧಾನಪರಿಷತ್ ಸದಸ್ಯರು, ಸಚಿವರು ಇಬ್ಬರೂ ಸೇರಿ ಮುಖ್ಯಮಂತ್ರಿ ಹಾಗೂ ಸಂತೋಷ್‌ಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಬಗ್ಗೆ ಕೇಳಿದ್ದೇನೆ. ಅದರ ಸಂತ್ಯಾಂಶವೇನೆಂದು ಗೊತ್ತಿಲ್ಲ' ಎಂದು ಹೇಳಿದರು.


'ಚನ್ನಪಟ್ಟಣಕ್ಕೆ ನಾನೇ ಮಂತ್ರಿ, ನಾನೇ ಸರ್ಕಾರ'


'ಇದರಲ್ಲಿ ಗುಪ್ತವಾದ ಸಂಗತಿಯೇನೋ ಅಡಗಿದೆ. ಸರ್ಕಾರವೇ ತನಿಖೆ ಮಾಡುವುದರಲ್ಲಿ ಅರ್ಥವಿಲ್ಲ' ಎಂದು ಅಭಿಪ್ರಾಯಪಟ್ಟರು. ವಿಧಾನಪರಿಷತ್ ಸದಸ್ಯ ಮತ್ತು ಸಚಿವರು ಯಾರು ಎಂದು ಕೇಳಿದಾಗ ಶಿವಕುಮಾರ್ ಸ್ಪಷ್ಟಪಡಿಸಲಿಲ್ಲ.


ನಿಮ್ಮ ಮನೆಗೆ ಹೊಸದಾಗಿ ನೀರಿನ ನಳ ಸಂಪರ್ಕಕ್ಕಾಗಿ ಆನ್‍ಲೈನ್ ಅರ್ಜಿ ...!