ಬೆಂಗಳೂರು: ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ಇಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಭೇಟಿ ನೀಡಿದರು. ಶಾಸಕ ಮುನಿರತ್ನ, ಬೈರತಿ‌ಸುರೇಶ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಪರಮೇಶ್ವರ್ ಅವರಿಗೆ ಸಾಥ್ ನೀಡಿದರು.


COMMERCIAL BREAK
SCROLL TO CONTINUE READING

ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಸೇವಿಸಿದ ಪರಮೇಶ್ವರ್ ತಿಂಡಿ ತಿನ್ನುತ್ತಾ ಜನರೊಂದಿಗೆ ಸಮಾಲೋಚನೆ ನಡೆಸಿದರು. ಇದೊಂದು ಮಹತ್ವಾಂಕ್ಷಿ ಯೋಜನೆ ಅನ್ನ ಭಾಗ್ಯದ ಜೊತೆಗೆ ಇದು ಕೂಡ ಬಡವರಿಗೆ ಅನೂಕೂಲ ಯೋಜನೆ ಎಂದು ಪರಮ್ ಸಿಎಂ ರನ್ನು ಹೊಗಳಿದರು. 


ಕಡಿಮೆ ದುಡ್ಡಿಗೆ ಊಟ ನೀಡಿದರೆ ಬಡವರ್ಗದವರಿಗೆ ಉಪಯೋಗವಾಗುತ್ತದೆ. ಕ್ಯಾಂಟೀನ್ ನಲ್ಲಿ ನೀಡುವ ಗುಣಮಟ್ಟದ ಪರೀಕ್ಷಿಸಲು ಬಂದಿದ್ದೇನೆ. ಬಡ ವರ್ಗದವರು ಇದರ ಅನುಕೂಲ ಪಡೆಯುತ್ತಿದ್ದಾರೆ. ಇದರಿಂದ ಇಡೀ ರಾಜ್ಯಾದ್ಯಂತ ಕ್ಯಾಂಟೀನ್ ಆರಂಭಿಸಲು ಉತ್ತೇಜನ ಸಿಕ್ಕಿದೆ ಎಂದು ಪರಮೇಶ್ವರ್ ಹರ್ಷ ವ್ಯಕ್ತ ಪಡಿಸಿದರು. 


ಬಿಜೆಪಿಯವರು ಹೊಟ್ಟೆ ತುಂಬಿದವರು ಅವರಿಗೆ ಬಡವರ ಹಸಿವಿನ ಬಗ್ಗೆ ಅರಿವಿಲ್ಲ, ಸಮಸ್ಯೆಗಳಿದ್ದರೆ ಸಲಹೆ ನೀಡಬೇಕು. ಪ್ರತಿಭಟನೆ ಮಾಡಲು ಅವಕಾಶ ಇದೆ, ಆದರೆ ಕಾನೂನು ಕೈಗೆತ್ತಿಕೊಳ್ಳೋದು ಸರಿಯಲ್ಲ ಎಂದು ಹೇಳಿದ ಪರಮೇಶ್ವರ್ ಬಿಜೆಪಿ ಆರೋಪಗಳಿಗೆ ತಲೆಕೆಡಿಸಿಕೊಲ್ಳುವುದಿಲ್ಲ ಜನರ ನಿರ್ಧಾರವೇ ಅಂತಿಮ ಎಂದು ತಿಳಿಸಿದರು. 


ನಾವು ಮಾಡಿರೋ ಕೆಲಸಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದರು.